ಮೈಸೂರು: ಮೈಸೂರು ನಂಜನಗೂಡು ಮುಖ್ಯರಸ್ತೆ ವಸ್ತು ಪ್ರದರ್ಶನ ಮತ್ತು ಅರಮನೆಯ ಮಧ್ಯಭಾಗ ಇರುವ ರಸ್ತೆಯಲ್ಲಿಈಗಾಗಲೆ ಕಳೆದ ಎರಡು ವರ್ಷಗಳ ಹಿಂದೆ ಸಾರ್ವಜನಿಕರಿಗ ರಸ್ತೆ ದಾಟುವಾಗ ಆಗುವ ಅಪಾಯವನ್ನು ತಪ್ಪಿಸಲು ಸುರಂಗ ಮಾರ್ಗವನ್ನು ತಯಾರಿಸಲಾಗಿದೆ.ಆದರೆ ಇದುವರೆಗೂ ಇದು ಉದ್ಗಾಟನೆ ಆಗದೆ ಉಳಿದಿದೆ.
ಈ ರಸ್ತೆಗೆ ಸುರಂಗಮಾರ್ಗ ಮಾಡಿ ಸುಮಾರು ಎರಡುವರೆ ವರ್ಷಗಳು ಕಳೆದರೂ ಸಹ ಸಾರ್ವಜನಿಕರು ಓಡಾಡಲು ಅನುವು ಮಾಡಿಕೊಡದ ಅಧಿಕಾರಿಗಳ ವಿರುದ್ಧ ಜನರು ಹಿಡಿಹಿಡಿ ಶಾಪ ಹಾಕುತಿದ್ದಾರೆ ಯಾವಾಗಲು ವಾಹನ ದಟ್ಟಣೆಗಳಿಂದ ಕೂಡಿರುವ ರಸ್ತೆಯಲ್ಲಿ ದಿನಾಲು ಜನರು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಓಡಾಡುತ್ತಾರೆ. ಆದರೆ ನಗರ ಪಾಲಿಕ ಅಧಿಕಾರಿಗಳು ಸುರಂಗಮಾರ್ಗ ಸಿದ್ದಗೊಂಡು ಎರಡು ವರ್ಷಗಳೇ ಕಳೆದರೂ ಇನ್ನು ಉದ್ಘಾಟನೆ ಭಾಗ್ಯ ದೊರಕಿಲ್ಲ
ಜನರ ತೆರಿಗೆ ಹಣದಿಂದ ಸಿದ್ದಪಡಿಸಿರುವ ಈ ಸುರಂಗಮಾರ್ಗ ಜನರ ಅನುಕೂಲಕ್ಕೆ ಇಲ್ಲದಂತಾಗಿದೆ ಎಂದು ಸಾರ್ವಜನಿಕರು ಆಕ್ರೋಶ ಹೊರಕಾಕಿದ್ದಾರೆ. ಸಾರ್ವಜನಿಕರ ದ್ವನಿಗೆ ಈಗಾಗಲೆ ಸ್ವಯಂ ಸೇವಾ ಸಂಘಗಳು ಕೈ ಜೋಡಿಸಿವೆ. ಇನ್ನು ಮುಂದಾದರೂ ಸಾರ್ವಜನಿಕರ ಧ್ವನಿಗೆ ಅಧಿಕಾರಿಗಳು ಸ್ಪಂದಿಸಿ ಸುರಂಗಮಾರ್ಗಕ್ಕೆ ಉದ್ಗಾಟನೆ ಭಾಗ್ಯ ಕಲ್ಪಿಸುತ್ತಾರಾ ಎಂದು ಕಾದು ನೋಡಬೇಕಿದೆ.
ಯಾವ ಜೈಲಿನಲ್ಲಿ ಬ್ರಿಟೀಷರು ಸ್ವಾತಂತ್ರ ಹೋರಾಟಗಾರರನ್ನು ಬಂದಿಸಿ ಇಡುತಿದ್ದರು ?
.