Hubballi Political News: ಹುಬ್ಬಳ್ಳಿ: ನಿಮಗೆ ಏನಿದೆ ಅಧಿಕಾರ, ಯಾವ ಆಧಾರದ ಮೇಲೆ ಹೊಡೆದೀರಿ? ನಾನೇ ನಿಮಗೆ ನಾಲ್ಕು ಗುದ್ದಿದ್ರೆ ಹೇಗೆ ಎಂದು ಏಕವಚನದಲ್ಲಿಯೇ ಪೋಲಿಸ್ ಇನ್ಸ್ಪೆಕ್ಟರ್’ಗೆ ಬಾಯಿಗೆ ಬಂದಂತೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಬೈಯ್ದಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿಹಾಡುತ್ತಿದೆ.
ದೀಪಾವಳಿ ಹಬ್ಬದ ನಿಮಿತ್ತವಾಗಿ ಶುಭಾಶಯ ತಿಳಿಸಿ ಸಿಹಿ ಕೊಟ್ಟು ಹೋಗಲು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮನೆಗೆ ಬಂದಿದ್ದ ಧಾರವಾಡ ಉಪನಗರ ಠಾಣೆಯ ಇನ್ಸ್ಪೆಕ್ಟರ್ ಗೆ ಏಕವಚನದಲ್ಲಿಯೇ ಸಚಿವರು ಅವಾಜ್ ಹಾಕಿದ್ದಾರೆ.
ನಿಮಗೆ ಹೊಡಿಯೋ ಅಧಿಕಾರ ಯಾರು ಕೊಟ್ರು, ಇಸ್ಪೀಟು ಆಡುತ್ತಿದ್ದರೇ ವಿಡಿಯೋ ಮಾಡಿ ರೈಡ್ ಮಾಡಿ ಅದು ಬಿಟ್ಟು ಠಾಣೆಗೆ ಕರೆಸಿ ಹೊಡೆಯೋದು ಯಾಕೆ? ಕಾಂಗ್ರೆಸ್ಸಿನವರ ಮಾತು ಕೇಳಿ ರಾಜಕೀಯ ಮಾಡುತ್ತಿದ್ದೀರಾ? ನಾನು ನಿಮಗೆ ಇಲ್ಲಿಯ ಜನರು ಸೇರಿಕೊಂಡು ನಾಲ್ಕು ಗುದ್ದಿದ್ರೆ ಹೇಗೆ? ಏನ ಆಗುತ್ತೋ ಆಗಲಿ ನಾನು ಸ್ಟೇಷನ್ ಮುಂದೆ ಧರಣಿ ಕುಡತ್ತೇನೆ ಎಂದು ಪೋಲಿಸ ಅಧಿಕಾರಿಗೆ ಮನಸೋ ಇಚ್ಚೇ ನಿಂದಿಸಿದ್ದಾರೆ.
ಅಷ್ಟೇ ಅಲ್ಲದೇ ದೀಪಾವಳಿ ಹಬ್ಬದ ಶುಭಾಶಯ ಸಿಹಿಯನ್ನು ಸಹ ನಿಮ್ಮ ಸ್ವೀಟ್ ಬೇಡಾ ನಿಮ್ಮ ಅಭಿಮಾನ ಬೇಡಾ ಎಂದು ಅಧಿಕಾರಿಯನ್ನು ಅಪಮಾನ ಮಾಡಿ ಕಳಿಸಿದ್ದಾರೆ.
ಇದೀಗ ಈ ವಿಡಿಯೋವನ್ನು ಸ್ಥಳೀಯರು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದು, ನೆಟ್ಟಿಗರು ಸಚಿವರ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕವಾಗಿ ಅಪಮಾನ ಮಾಡಿದನ್ನು ಖಂಡಿಸುತ್ತಿದ್ದಾರೆ.
ಹಮಾಸ್ ಭಯೋತ್ಪಾದಕರ ಮೇಲೆ ದಾಳಿ ಮಾಡಿದ ಇಸ್ರೇಲ್, ರಾಕೇಟ್ ಧ್ವಂಸ, ಹಲವರ ಸಾವು
ಗಾಜಾದಲ್ಲಿ ಯುದ್ಧವಾಗುತ್ತಿದ್ದರೂ, 57 ಮುಸ್ಲಿಂ ರಾಷ್ಟ್ರಗಳ ಶೃಂಗಸಭೆಗೆ ಕರೆ..
ಗಾಜಾದಲ್ಲಿ ಮಕ್ಕಳ ದುರ್ಮರಣ, ಆಹಾರ ನೀರಿಲ್ಲದೇ ಪ್ರಾಣ ಕಳೆದುಕೊಳ್ಳುತ್ತಿರುವ ಕಂದಮ್ಮಗಳು