Wednesday, July 2, 2025

Latest Posts

ತಮ್ಮ ನಿವಾಸದಲ್ಲಿ ವಿಕಲಚೇತನರ ಜೊತೆ ಸಂಕ್ರಾಂತಿ ಹಬ್ಬ ಆಚರಿಸಿದ ಕೇಂದ್ರ ಸಚಿವ ಕುಮಾರಸ್ವಾಮಿ

- Advertisement -

Political News: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಇಂದು ತಮ್ಮ ನಿವಾಸದಲ್ಲಿ ವಿಕಲಚೇತನ ಬೆಸ್ಕಾಂ ಉದ್ಯೋಗಿಗಳ ಜೊತೆ ಸಂಕ್ರಾಂತಿ ಹಬ್ಬವನ್ನು ಆಚರಿಸಿದರು.

ರಾಜ್ಯ ಸರಕಾರದ ಬೆಸ್ಕಾಂ ಸೇರಿ ವಿವಿಧ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 600ಕ್ಕೂ ಹೆಚ್ಚು ವಿಕಲಚೇತನ ಉದ್ಯೋಗಿಗಳು ನನ್ನ ನಿವಾಸಕ್ಕೆ ಆಗಮಿಸಿ ನನ್ನೊಂದಿಗೆ ಸಂಕ್ರಾಂತಿ ಹಬ್ಬ ಆಚರಿಸಿದರು. 2019ರಿಂದಲೂ ಇವರೆಲ್ಲರೂ ಪ್ರತೀ ವರ್ಷ ತಪ್ಪದೇ ನನ್ನೊಂದಿಗೆ ಸಂಕ್ರಾಂತಿ ಹಬ್ಬ ಆಚರಿಸಿಕೊಂಡು ಬರುತ್ತಿರುವ ಇವರೆಲ್ಲರೂ ನನ್ನ ಮೇಲೆ ಇಟ್ಟಿರುವ ಅಪರಿಮಿತ ಪ್ರೀತಿ, ವಾತ್ಸಲ್ಯಕ್ಕೆ ಆಭಾರಿ ಆಗಿದ್ದೇನೆ ಎಂದು ಕೇಂದ್ರ ಸಚಿವ ಕುಮಾರಸ್‌ವಾಮಿ ಹೇಳಿದ್ದಾರೆ.

2006ರಲ್ಲಿ ಮುಖ್ಯಮಂತ್ರಿ ಆಗಿದ್ದಾಗ ಎಸ್ಎಸ್ಎಲ್ಸಿ ಪಾಸಾಗಿದ್ದ 300, ಪದವೀಧರರಾಗಿದ್ದ 300 ವಿಕಲಚೇತನರಿಗೆ ಇಂಧನ ಇಲಾಖೆಯಲ್ಲಿ ಉದ್ಯೋಗವಕಾಶ ಕಲ್ಪಿಸಿ ನೇಮಕಾತಿ ಆದೇಶ ನೀಡಿದ್ದೆ. ಆ ನಂತರ ಅವರ ಸೇವೆ ಕಾಯಂ ಆಗಿರಲಿಲ್ಲ. ಎರಡನೇ ಬಾರಿಗೆ ನಾನು ಸಿಎಂ ಅದ ಮೇಲೆ 2019ರ ಸಂಕ್ರಾಂತಿ ಹಬ್ಬದ ದಿನವೇ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 600 ವಿಕಲಚೇತನರ ಸೇವೆಯನ್ನು ಕಾಯಂ ಮಾಡಿ ಆದೇಶ ಹೊರಡಿಸಿದ್ದೆ. ಅಂದಿನಿಂದ ಇವರೆಲ್ಲರೂ ಪ್ರತೀ ವರ್ಷ ಕುಟುಂಬ ಸಮೇತ ಬಂದು ನನ್ನೊಂದಿಗೆ ಸಂಕ್ರಾಂತಿ ಹಬ್ಬ ಆಚರಿಸುತ್ತಿದ್ದಾರೆ ಎಂದು ಕೇಂದ್ರ ಸಚಿವರು ಟ್ವೀಟಿಸಿದ್ದಾರೆ.

ಗೌರವಾನ್ವಿತ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿಯವರ ಅವರ ನೇತೃತ್ವದ ಸರಕಾರ ವಿಕಲಚೇತನರ ಆರ್ಥಿಕ ಸಬಲೀಕರಣ ಹಾಗೂ ಅವರ ಸ್ವಾಭಿಮಾನದ ಬದುಕಿಗಾಗಿ ಅನೇಕ ಕಾರ್ಯಕ್ರಮಗಳನ್ನು ಜಾರಿ ಮಾಡಿದೆ. ಅದೆಲ್ಲವನ್ನೂ ಪರಿಣಾಮಕಾರಿಯಾಗಿ ಸದ್ಬಳಕೆ ಮಾಡಿಕೊಳ್ಳುವಂತೆ ಅವರೆಲ್ಲರಿಗೂ ಹೇಳಿದ್ದೇನೆ ಎಂದು ಕುಮಾಾರಸ್ವಾಮಿ ಹೇಳಿದರು.

- Advertisement -

Latest Posts

Don't Miss