Political News: 2025ರಲ್ಲಿ ಪದ್ಮ ಪ್ರಶಸ್ತಿ ವಿಜೇತರ ಪಟ್ಟಿ ಬಿಡುಗಡೆ ಮಾಡಲಾಗಿದ್ದು, ಅನಂತ್ ನಾಗ್ ಸೇರಿ ಹಲವರು ಈ ಬಾರಿ ಪದ್ಮ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅದರಲ್ಲಿ ಬಾಗಲಕೋಟೆ ಜಿಲ್ಲೆಯ ಜಾನಪದ ಗಾಯಕ, ಗೊಂದಳಿ ಕಲಾವಿದ ವೆಂಕಪ್ಪ ಅಂಬಾಜಿ ಸುಗತೇಕರ್ ಅವರನ್ನು ಭೇಟಿಯಾದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಅವರಿಗೆ ಸನ್ಮಾನ ಮಾಡಿದರು.
ದೆಹಲಿ ನನ್ನ ನಿವಾಸದಲ್ಲಿ 2025ರ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ನಮ್ಮ ರಾಜ್ಯದ ಬಾಗಲಕೋಟೆ ಜಿಲ್ಲೆಯ ಜಾನಪದ ಗಾಯಕ, ಗೊಂದಳಿ ಕಲಾವಿದ ವೆಂಕಪ್ಪ ಅಂಬಾಜಿ ಸುಗತೇಕರ್ ಅವರನ್ನು ಭೇಟಿಯಾಗುವ ಅವಕಾಶ ದೊರೆಯಿತು.
ಗೊಂದಳಿ ಹಾಡಿನ ಮೂಲಕ ಸುದೀರ್ಘ ಕಲಾಸೇವೆ ಮಾಡಿಕೊಂಡಿರುವ ಇವರು 71 ವರ್ಷಗಳಿಂದ ಗೊಂದಳಿ ಪದಗಳನ್ನು ಹಾಡುತ್ತಿದ್ದು ಜನಪದ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದಿದ್ದಾರೆ. ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಮನ್ ಕಿ ಬಾತ್ ಕಾರ್ಯಕ್ರಮದಲ್ಲೂ ಅವರನ್ನು ಕೊಂಡಾಡಿದ್ದರು. ಅತ್ಯಂತ ಬಡ ಕುಟುಂಬದಲ್ಲಿ ಜನಿಸಿ ಶಾಲೆಗೆ ಹೋಗಿ ಓದು ಬರಹ ಕಲಿಯುವ ಅವಕಾಶ ಸಿಗದಿದ್ದರೂ ಇಂದು ಸಹಸ್ರಾರು ಹಾಡುಗಳನ್ನು ಜ್ಞಾಪಕ ಶಕ್ತಿಯಿಂದಲೇ, ಬಾಯಿಪಾಠದ ಮೂಲಕವೇ ಹಾಡಿ ಅಪಾರ ಜನಪ್ರಿಯತೆ ಹೊಂದಿದ್ದಾರೆ. ಅವರಿಗೆ ಇಂದು ಆತ್ಮೀಯತೆಯಿಂದ ಅಭಿನಂದಿಸಿ ಪುಟ್ಟ ಗೌರವ ನಮನಗಳನ್ನು ಸಲ್ಲಿಸುವ ಸದಾವಕಾಶ ಒದಗಿ ಬಂದಿದ್ದು ನನಗೆ ಅತ್ಯಂತ ಸಂತೋಷ ತಂದಿದೆ ಎಂದು ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.
ದೆಹಲಿ ನನ್ನ ನಿವಾಸದಲ್ಲಿ 2025ರ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ನಮ್ಮ ರಾಜ್ಯದ ಬಾಗಲಕೋಟೆ ಜಿಲ್ಲೆಯ ಜಾನಪದ ಗಾಯಕ, ಗೊಂದಳಿ ಕಲಾವಿದ ವೆಂಕಪ್ಪ ಅಂಬಾಜಿ ಸುಗತೇಕರ್ ಅವರನ್ನು ಭೇಟಿಯಾಗುವ ಅವಕಾಶ ದೊರೆಯಿತು.
ಗೊಂದಳಿ ಹಾಡಿನ ಮೂಲಕ ಸುದೀರ್ಘ ಕಲಾಸೇವೆ ಮಾಡಿಕೊಂಡಿರುವ ಇವರು 71 ವರ್ಷಗಳಿಂದ ಗೊಂದಳಿ ಪದಗಳನ್ನು ಹಾಡುತ್ತಿದ್ದು ಜನಪದ… pic.twitter.com/kforMmehXg— Pralhad Joshi (@JoshiPralhad) January 26, 2025