ಮಂಡ್ಯ: ಜಿಲ್ಲೆಯಲ್ಲಿ ಒಟ್ಟು 2 ಕೋಟಿ 11 ಲಕ್ಷದ 61 ಸಾವಿರ ರೂ ಮೌಲ್ಯದವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ನಗದು, ಮದ್ಯ, ಡ್ರಗ್ಸ್, ಸೇರಿ ಹಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಚುನಾವಣೆ ಘೋಷಣೆ ಪೂರ್ವದಲ್ಲಿ 1 ಕೋಟಿ, 54 ಲಕ್ಷದ 99 ಸಾವಿರ ಮೌಲ್ಯದ ವಸ್ತುಗಳನ್ನ ಮತ್ತು ಚುನಾವಣೆ ಘೋಷಣೆ ಬಳಿಕ 56 ಲಕ್ಷದ 61 ಸಾವಿರ ರೂ ಮೌಲ್ಯ ವಶಪಡಿಸಿಕೊಳ್ಳಲಾಗಿದೆ.
ಒಟ್ಟು 38 ಲಕ್ಷದ 53 ಸಾವಿರದ 956 ರೂ ಮೌಲ್ಯದ ಮದ್ಯ, ಒಟ್ಟು 4 ಕೆ.ಜಿ.ಯ ಮೌಲ್ಯದ ಡ್ರಗ್ಸ್, 40 ಸಾವಿರದ 800 ರೂಪಾಯಿಯ ಇತರೆ ವಸ್ತುಗಳು ಸೇರಿ ಒಟ್ಟು ಮೊತ್ತ 1 ಕೋಟಿ 22 ಲಕ್ಷದ 74 ಸಾವಿರ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇನ್ನು ಮೊದಲ ಬಾರಿಗೆ ವಯೋವೃದ್ದರು ಹಾಗೂ ವಿಕಲಚೇತನ ಮತದಾರರಿಗೆ ಮನೆಯಲ್ಲೆ ಮತದಾನ ಮಾಡುವ ಅವಕಾಶ ಕೊಡಲಾಗಿದೆ. ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ ಕೊಟ್ಟು 12 ಡಿ ನಮೂನೆ ನೀಡಲಾಗಿದೆ. ಮನೆ ಮನೆಗೆ ಭೇಟಿ ಕೊಟ್ಟು 12 ಡಿ ನಮೂನೆ ವಿತರಣೆ ಜಿಲ್ಲೆಯಲ್ಲಿ ಈವರೆಗೆ 8 ಸಾವಿರ ನಮೂನೆ ವಿತರಣೆ ಮಾಡಲಾಗಿದೆ.
‘ನಾಳೆಯೊಳಗೆ ಸಂಪೂರ್ಣವಾಗಿ ವಿತರಣೆ ಮಾಡಲಾಗುತ್ತದೆ. ಈ ಅವಕಾಶ ಸದುಪಯೋಗ ಪಡಿಸಿಕೊಳ್ಳಿ. ಪೊಸ್ಟಲ್ ಬ್ಯಾಲೆಟ್ ವ್ಯವಸ್ಥೆ ಮಾಡ್ತೇವೆ. ಮತಗಟ್ಟೆಯಲ್ಲೆ ಬಂದು ಮತದಾನ ಮಾಡಿ. ಜಿಲ್ಲೆಯಲ್ಲಿ ಈಗಾಗಲೇ ವಿದ್ಯುನ್ಮಾನ ಯಂತ್ರಗಳನ್ನ ಹಂಚಿಕೆ ಮಾಡಲಾಗಿದೆ. ಏಳು ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮತ ಯಂತ್ರಗಳು ತಲುಪಿದೆ. ಸ್ಟ್ರಾಂಗ್ ರೂಂ ನಲ್ಲಿ ಭದ್ರವಾಗಿದೆ, ಪೊಲೀಸ್ ಭದ್ರತೆಯನ್ನು ಮಾಡಲಾಗಿದೆ. ಜಿಲ್ಲೆಯಲ್ಲಿ 34 ಚೆಕ್ ಪೋಸ್ಟ್ ತೆರೆಯಲಾಗಿದೆ. ಹಗಲು ರಾತ್ರಿ ವಾಹನಗಳ ತಪಾಸಣೆ ಮಾಡಲಾಗುತ್ತಿದೆ .ನೀತಿಸಂಹಿತೆ ಉಲ್ಲಂಘನೆ ಯಾಗದ ರೀತಿ ಕ್ರಮ ಕೈಗೊಳ್ಳಲಾಗಿದೆ’ ಎಂದು ಮಂಡ್ಯದಲ್ಲಿ ಜಿಲ್ಲಾಧಿಕಾರಿ ಡಾ.ಹೆಚ್.ಎನ್.ಗೋಪಾಲಕೃಷ್ಣ ಹೇಳಿದ್ದಾರೆ.
ಜೆಡಿಎಸ್ ಕಾರ್ಯಕರ್ತರಿಗೆ ಕಿರುಕುಳ ಕೊಟ್ಟರೆ ಸಹಿಸಲ್ಲ : ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ..
‘ಸಂಸದೆ ಸುಮಲತಾ ಒಬ್ಬರು ಅಪ್ರಬುದ್ಧ ರಾಜಕಾರಣಿ, ಅನಿರೀಕ್ಷಿತವಾಗಿ ಬಂದಂತಹ ಕೂಸು’