National Political News: ಅಂಗಡಿಯಲ್ಲಿ ಸಾಲ ಕೊಡಬೇಕಾಗುತ್ತದೆ ಎಂದು ಹಲವರು ಅಂಗಡಿ ಎದುರು ಬೋರ್ಡ್ ಹಾಕಿರುತ್ತಾರೆ. ಗ್ರಾಹಕರೇ ದೇವರು, ದೇವರಿಗೆ ಸಾಲ ಕೊಡುವಷ್ಟು ನಾವು ದೊಡ್ಡವಲ್ಲ. ಸಾಲ ಕೊಟ್ಟು ಗೆಳೆತನ ಮುರಿದುಕೊಳ್ಳಲು ಇಷ್ಟವಿಲ್ಲ. ಸಾಲ ಪಡೆದು ಸಂಬಂಧ ಹಾಳು ಮಾಡಿಕೊಳ್ಳಬೇಡಿ. ಹೀಗೆ ತರಹೇವಾರಿ ಬೋರ್ಡ್ ಕಂಂಡಿರುತ್ತೇವೆ.
ಉತ್ತರ ಭಾರತದ ಅಂಗಡಿಯೊಂದರಲ್ಲಿ ಓರ್ವ ವ್ಯಕ್ತಿ, ರಾಹುಲ್ ಗಾಂಧಿ ಎಲ್ಲಿಯವರೆಗೂ ಪ್ರಧಾನಿಯಾಗುವುದಿಲ್ಲವೋ, ಅಲ್ಲಿಯವರೆಗೆ ತಾನು ಸಾಲ ನೀಡುವುದಿಲ್ಲವೆಂದು ಹೇಳಿದ್ದಾನೆ. ಇದು ಚಾಟ್ಸ್ ಶಾಪ್‌ನಲ್ಲಿ ಹಾಕಿರುವ ಬೋರ್ಡ್ ಆಗಿದ್ದು, ಇಲ್ಲಿ ಬಂದು ಚಾಟ್ಸ್ ತಿನ್ನುವವರಲ್ಲಿ ಹಲವರು, ಚಾಟ್ಸ್ ತಿಂದ ಬಳಿಕ ದುಡ್ಡು ಕೊಡದೇ, ಸಾಲ ಬರೆದುಕೊಳ್ಳಲು ಹೇಳುತ್ತಾರಂತೆ.
ಇಂಥ ಗ್ರಾಹಕರಿಗಾಗಿ ಅಂಗಡಿ ಮಾಲೀಕ ಈ ರೀತಿ ಬೋರ್ಡ್ ಹಾಕಿದ್ದಾರಂತೆ. ಎಲ್ಲಿಯವರೆಗೂ ರಾಹುಲ್ ಗಾಂಧಿ ಈ ದೇಶದ ಪ್ರಧಾನಮಂತ್ರಿಯಾಗುವುದಿಲ್ಲವೋ, ಅಲ್ಲಿಯವರೆಗೂ ಸಾಲ ಬಂದ್ ಎಂದು ಬೋರ್ಡ್ ಹಾಕಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋ, ವೀಡಿಯೋ ವೈರಲ್ ಆಗುತ್ತಿದೆ.
ಶಾಲೆಯಿಂದ ಬರುತ್ತಿದ ಬಾಲಕಿ ಮೇಲೆ ರಸ್ತೆಯಲ್ಲೇ ಲೈಂ*ಗಿಕ ಕಿರುಕುಳ: ವೀಡಿಯೋ ನೋಡಿ ಶಾಕ್ ಆದ ನೆಟ್ಟಿಗರು