Friday, August 8, 2025

Latest Posts

‘ಇಲ್ಲಿ 80 ಕೋಟಿ ಉಚಿತ ರೇಷನ್ ನೀಡುತ್ತಿದ್ದಾರೆ, ಪಾಕಿಸ್ತಾನದಲ್ಲಿ ಆಹಾರಕ್ಕಾಗಿ ಪರದಾಟ’

- Advertisement -

ಕೌಶಾಂಬಿ : ಉತ್ತರ ಪ್ರದೇಶದ ಕೌಶಾಂಬಿಯಲ್ಲಿ ನಡೆದ ಕೌಶಾಂಬಿ ಮಹೋತ್ಸವವನ್ನ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಷಾ ಉದ್ಘಾಟಿಸಿದ್ದಾರೆ. ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಕೂಡ ಉಪಸ್ಥಿತರಿದ್ದು, ಮೋದಿ ಕಾರ್ಯಗಳನ್ನ ಶ್ಲಾಘಿಸಿದ್ದಾರೆ.

ಭಾರತದಲ್ಲಿ ಕಳೆದ 3 ವರ್ಷಗಳಿಂದ, 80 ಕೋಟಿ ಜನರಿಗೆ ಉಚಿತವಾಗಿ ರೇಷನ್ ನೀಡಲಾಗುತ್ತಿದೆ. ಆದರೆ ಪಾಕಿಸ್ತಾನದಲ್ಲಿ ಜನ ಆಹಾರಕ್ಕಾಗಿ ಪರದಾಡುತ್ತಿದ್ದಾರೆ. ಭಾರತ ವಿಶ್ವಗುರುವಾಗುತ್ತಿದೆ. ಪ್ರಧಾನಿ ಮೋದಿ ನಾಯಕತ್ವದಲ್ಲಿ ಭಾರತ ಅಭಿವೃದ್ಧಿ ಸಾಧಿಸುತ್ತಿದ್ದು, ಇಡೀ ಜಗತ್ತೇ ಭಾರತ ದೇಶದತ್ತ ತಿರುಗಿ ನೋಡುವಂತೆ ಮಾಡುತ್ತಿದೆ ಎಂದು ಹೇಳಿದ್ದಾರೆ.

ಇನ್ನು ಇದೇ ವೇಳೆ ಕೌಶಾಂಬಿಯಲ್ಲಿ ಹಲವು ಕಾರ್ಯಕ್ರಮಗಳನ್ನ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಶಂಕುಸ್ಥಾಪನೆ ಮಾಡಿದರು. ಈ ಬಗ್ಗೆ ಮಾತನಾಡಿದ ಯೋಗಿ ಆದಿತ್ಯನಾಥ್, ‘ಇಂದು ರಾಷ್ಟ್ರಾಧ್ಯಕ್ಷರು 612 ಕೋಟಿ ವೆಚ್ಚದ ಕಾರ್ಯಕ್ರಮಗಳನ್ನ ಶಂಕುಸ್ಥಾಪನೆ ಮಾಡಿದ್ದಾರೆ. ಕೌಶಂಬಿ ಬಹಳ ಐತಿಹಾಸಿಕ ಸಂಬಂಧಗಳನ್ನು ಹೊಂದಿದ್ದು, ಶ್ರೀರಾಮ ಕೂಡ ಈ ಸ್ಥಳದಲ್ಲಿ ಒಂದು ರಾತ್ರಿ ಉಳಿದು ಹೋಗಿದ್ದನಂತೆ’ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ನಾನು ಕೋಲಾರದವನೇ, ಪಾಕಿಸ್ತಾನದಿಂದ ಬಂದವನಲ್ಲ: ಗೋ ಬ್ಯಾಕ್ ಕ್ಯಾಂಪೇನರ್ಸ್‌ಗೆ ನಾಯ್ಕರ್ ಟಾಂಗ್..

‘ನೆಹರೂ ಕುಟುಂಬದ ರಾಹುಲ್ ಗಾಂಧಿಗೆ ಬಿಜೆಪಿಯವರು ತೊಂದರೆ ಕೊಡ್ತಿದ್ದಾರೆ’

‘ಈ ಬಾರಿ ಮಾಲೂರಿನಲ್ಲಿ ಕಾಂಗ್ರೆಸ್‌ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸುತ್ತೆ’

- Advertisement -

Latest Posts

Don't Miss