Political News: ವಿಧಾನಪರಿಷತ್ತಿನ ಪದವಿಧರರು ಮತ್ತು ಶಿಕ್ಷಕರ ಕ್ಷೇತ್ರಗಳ ಚುನಾವಣಾ ಪ್ರಚಾರ ಭರಾಟೆ ನಡುವೆ ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆಯೂ ಘೋಷಣೆಯಾಗಿದೆ.
ಒಟ್ಟು 11 ಸ್ಥಾನಗಳಿಗೆ ಜೂ.13ರಂದು ನಡೆಯುವ ಚುನಾವಣೆಗೆ ರಾಜಕೀಯ ಪಕ್ಷಗಳಲ್ಲಿ ತೀವ್ರ ಪೈಪೋಟಿ ನಡೆಯುತ್ತಿದೆ. ಕೆಳಮನೆಯ ಆಯಾ ಪಕ್ಷಗಳ ಸದಸ್ಯರ ಬಲದ ಮೇಲೆ ಕಾಂಗ್ರೆಸ್ 7, ಬಿಜೆಪಿ3,ಜೆಡಿಎಸ್ 1 ಸ್ಥಾನ ಪಡೆಯಬಹುದಾಗಿದೆ.
ಜೆಡಿಎಸ್‌ನ ಒಂದು ಸ್ಥಾನಕ್ಕೆ ಇನ್ನಿಲ್ಲದ ಸ್ಪರ್ಧೆ ಏರ್ಪಟ್ಟಿದ್ದು, ಪಕ್ಷದ ಪ್ರಭಾವಿಗಳು ಈ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ವಿಧಾನ ಪರಿಷತ್ ಸದಸ್ಯರಾಗಿದ್ದ ಬಿ.ಎಂ.ಫಾರೂಕ್, ರಾಜ್ಯಸಭೆ ಮಾಜಿ ಸದಸ್ಯ ಕುಪೇಂದ್ರ ರೆಡ್ಡಿ ಕೂಡ ಈ ಸ್ಥಾನದ ಆಕಾಂಕ್ಷಿಗಳು. ಈ ಇಬ್ಬರೂ ಪಕ್ಷ ನಿಷ್ಠರಾಗಿದ್ದು, ಮಾಜಿ ಪ್ರಧಾನಿ ದೇವೇಗೌಡರ ಮೂಲಕ ವಿಧಾನ ಪರಿಷತ್ ಪ್ರವೇಶ ಪಡೆಯಲು ತೆರೆಮರೆಯ ಪ್ರಯತ್ನ ನಡೆಸಿದ್ದಾರೆನ್ನಲಾಗಿದೆ.
ಈ ನಡುವೆ ಯಶವಂತಪುರ ವಿಧಾನಸಭೆ ಚುನಾವಣೆಯಲ್ಲಿ ನಿರಂತರ ಮೂರು ಬಾರಿ ಸೋಲು ಕಂಡ ಜವರಾಯೀಗೌಡ ಹೆಸರು ಕೂಡ ಜೆಡಿಎಸ್ ಪಾಳೆಯದಲ್ಲಿ ಮುನ್ನಲೆಗೆ ಬಂದಿದೆ. ಕಳೆದ ಚುನಾವಣೆಯಲ್ಲಿ, ನನಗೆ ಚುನಾವಣೆ ಬೇಕಿರಲಿಲ್ಲ. ಅಧಿಕಾರ ಇಲ್ಲದಿದ್ದರೂ ಜನಸೇವೆ ಮಾಡಲು ಹಿಂದೇಟು ಹಾಕಿಲ್ಲ. ;ುನಾವಣೆಗೆ ಸಾಕಷ್ಟು ವೆಚ್ಚ ಮಾಡಿದ್ದೇನೆ. ಆರ್ಥಿಕ ಶಕ್ತಿ ಇಲ್ಲದಿದ್ದರೂ ಚುನಾವಣೆ ಎದುರಿಸುತ್ತಿದ್ದೇನೆ. ಈ ಚುನಾವಣೆ ನನ್ನ ಅಳಿವು- ಉಳಿವಿನ ಪ್ರಶ್ನೆಯಾಗಿದೆ ಎಂದು ಜವರಾಯಿಗೌಡ ಹೇಳಿದ್ದರು.
ಆದರೆ ಜವರಾಯಿಗೌಡರು ಚುನಾವಣೆಯಲ್ಲಿ ಸೋಲು ಕಂಡಿದ್ದರು. ಹಾಗಾಗಿ ಈ ಬಾರಿ ಜವರಾಯಿಗೌಡರಿಗೆ ಮೇಲ್ಮನೆಗೆ ಅವಕಾಶ ಮಾಡಿಕೊಡಲು ಮಾಜಿ ಸಿಎಂ ಕುಮಾರಸ್ವಾಮಿ ಆಲೋಚಿಸಿದ್ದಾರೆನ್ನಲಾಗಿದೆ. ಬಿ.ಎಂ.ಫಾರೂಕ್, ಕುಪೇಂದ್ರ ರೆಡ್ಡಿ, ಜವರಾಯಿಗೌಡ ಮಧ್ಯೆ ಪೈಪೋಟಿ ಇದ್ದು, ಹೈಕಮಾಂಡ್ ಯಾರೆಡೆಗೆ ಒಲವು ತೋರುತ್ತದೆ ಎಂದು ಕಾದು ನೋಡಬೇಕಿದೆ.
ಮಮತಾ ಬ್ಯಾನರ್ಜಿ ಬಗ್ಗೆ ವಿವಾದಾತ್ಮಕ ಹೇಳಿಕೆ: ಬಿಜೆಪಿ ಅಭ್ಯರ್ಥಿಗೆ 1 ದಿನದ ಪ್ರಚಾರ ನಿಷೇಧ
Baby Death: ಮನೆಯಲ್ಲಿ ಒಬ್ಬಂಟಿಯಾಗಿ ಮಗುವನ್ನು ಬಿಟ್ಟು ಹೋದ ಪೋಷಕರು: ಮಗು ಸಾವು
National News: ಎಮಿರೇಟ್ಸ್ ವಿಮಾನ ಡಿಕ್ಕಿ: 35ಕ್ಕೂ ಹೆಚ್ಚು ರಾಜಹಂಸ ಪಕ್ಷಿಗಳ ಸಾವು..?