ಬೆಂಗಳೂರು:ಇಂದು ರಿಯಲ್ ಸ್ಟಾರ್ ಉಪೇಂದ್ರ ಅವರು ಬೆಂಗಳೂರಿನ ಗುಟ್ಟಹಳ್ಳಿ
ಬಂಡೆ ಕಾಳಮ್ಮ ದೇವಾಲಯದಲ್ಲಿ ಹೊಸ ಸಿನಿಮಾದ ಮುಹೂರ್ತವನ್ನು ನೆರವೇರಿಸಿದ್ರು.
ಉಪೇಂದ್ರ ಅವರ ಹೊಸ ಸಿನಿಮಾದ ಮುಹೂರ್ತಕ್ಕೆ ನಟ ಶಿವರಾಜ್ ಕುಮಾರ್ ಸೇರಿದಂತೆ ಕಿಚ್ಚ ಸುದೀಪ್, ದಾಲಿ ದನಂಜಯ್ ಹಾಗೂ ವಸಿಷ್ಠ ಸಿಂಹ ಕೂಡ ಭಾಗಿಯಾಗಿದ್ದರು.
ಸಿನಿಮಾ ಮುಹೂರ್ತ ನಂತರ ಮಾದ್ಯಮದವರೊಂದಿಗೆ ಮಾತನಾಡಿದ ಉಪೇಂದ್ರ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದರು,
ಸಾರ್ ಯಾವ ಸಿನಿಮಾ ಇದು ಅಂತ ಕೇಳಿದ ಪತ್ರಕರ್ತರ ಪ್ರೆಶ್ನೆಗೆ ಉತ್ತಿರಿಸದ ಉಪೇಂದ್ರೆ, ನಿಮಗೆ ಬಿಟ್ಟಿದ್ದು ನೀವೆ ಯೋಚನೆ ಮಾಡಿ ಎಂದು ನಾಜೂಕಾಗಿಯೇ ಉಪೇಂದ್ರ ಉತ್ತರವನ್ನು ನೀಡಿದ್ರು.
ಇನ್ನು ಶಿವಣ್ಣ ಉಪೇಂದ್ರ ಅವರ ಹೊಸ ಸಿನಿಮಾಗೆ ಶುಭಾಶಯವನ್ನು ತಿಳಿಸಿದರು, ಕಿಚ್ಚ ಸುದೀಪ್ ಮಾತನಾಡಿ ಕುದುರೆ ಆಯ್ಕೆ ಚೆನ್ನಾಗಿದೆ ಮತ್ತೆ ನಮ್ಮಲ್ಲಿ ರೇಸ್ ಕುದುರೆ ಒಡೋಕೆ ಶುರುವಾಗಿದೆ ಎಂದು ಕಿಚ್ಚ ಸುದೀಪ್ ಉಪೇಂದ್ರ ಅವರ ಹೊಸ ಸಿನಿಮಾಗೆ ಶುಭಾಶಯಗಳನ್ನು ತಿಳಿಸಿದರು.
ಉಪೇಂದ್ರ ಅವರ ಹೊಸ ಸಿನಿಮಾದ ಮುಹೂರ್ತ ಕಾರ್ಯಕ್ರಮಕ್ಕೆ ಆಗಮಿಸಿದ
ಡಾಲಿ ದನಾಂಜಯ್ ಉಪೇಂದ್ರ ಸಾರ್ ನನಗೆ ಯಾವಾಗ ಡೈರೆಕ್ಟ ಮಾಡ್ತೀರಾ ಎಂದು ಕಾರ್ಯಕ್ರಮದ ವೇದಿಕೆಯ ಮೇಲೆಯೇ ಕೇಳಿದ್ರು,
ಒಟ್ಟಾರೆಯಾಗಿ ಉಪೇಂದ್ರ ಅವರ ಹೊಸ ಸಿನಿಮಾದ ಪೋಸ್ಟ್‌ರ್ ಈಗಾ ಅಭಿಮಾನಿಗಳ ಮೆದುಳಿಗೆ ಕೈ ಹಾಕಿದೆ ಎಂದರೆ ತಪ್ಪಾಗಲ್ಲ.
ಯುಐ ಸಿನಿಮಾನ..? ಅಥವಾ ಐಯು ಸಿನಿಮಾನ ಎಂದು ಈಗಾಗಲೇ ಅಭಿಮಾನಿಗಳು ಮಾತ್ರ ಕಾತುರದಿಂದ ಕಾಯ್ತಿದ್ದಾರೆ,
ಕುದರೆ ಮುಖದಲ್ಲಿ ಅನೇಕ ರೀತಿಯ ಕಲೆ ಬಿಡಿಸಿದ ರಿಯಲ್ ಸ್ಟಾರ್ ಉಪೇಂದ್ರ ಹೊಸ ಸಿನಿಮಾದಲ್ಲಿ ಯಾವ ಗೆಟ್ಟಪ್ಪ್ ಅಲ್ಲಿ ಕಾಣಿಸ್ತಾರೆ ಎಂಬುದೇ ಸಿನಿ ಪ್ರಿಯರಿಗೆ ಕುತೂಹಲ ಕೆರಳಿಸಿದೆ.
ಅಭಿಜಿತ್ ಕರ್ನಾಟಕ ಟಿವಿ ಬೆಂಗಳೂರು.