ಫ್ರೆಂಚ್ ಫೈಸ್ ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಈ ತಿಂಡಿಯನ್ನ ಇಷ್ಟಪಟ್ಟು ತಿಂತಾರೆ. ಇದು ಕೆಲ ವರ್ಷಗಳ ಹಿಂದೆಯಷ್ಟೇ ಬಂದಿದ್ದರೂ, ಬಂದ ಕೆಲ ವರ್ಷಗಳಲ್ಲೇ ಎಲ್ಲರ ನೆಚ್ಚಿನ ತಿಂಡಿಯಾಗಿಬಿಟ್ಟಿದೆ. ಇದೀಗ ಅಮೆರಿಕದ ಕಂಪೆನಿಯೊಂದು, ಫ್ರೆಂಚ್ ಫ್ರೈಸ್ ನಂಥ ಪರಿಮಳ ಬರುವ ಸೆಂಟ್ ತಯಾರಿಸಿ, ಬಿಡುಗಡೆ ಮಾಡಿದೆ.
ನಾವು ಶ್ರೀಗಂಧ, ಮಲ್ಲಿಗೆ, ಸಂಪಿಗೆ, ಗುಲಾಬಿ ಬಳಸಿ ಸುಗಂಧ ದ್ರವ್ಯ ತಯಾರಿಸುವುದನ್ನ ನೋಡಿದ್ದೇವೆ. ಆದ್ರೆ ವಿದೇಶದ ಕಂಪೆನಿಯೊಂದು ಫ್ರೆಂಚ್ ಫ್ರೈಸ್ ಪರಿಮಳಕ್ಕೆ ಮನಸೋತು, ಆಲೂಗಡ್ಡೆಯಿಂದ ಒಂದು ಪರ್ಫ್ಯೂಮ್ ತಯಾರಿಸಿದೆ. ಅದಕ್ಕೆ ಫ್ರೆಂಚ್ ಫ್ರೈಸ್ ಪರ್ಫ್ಯೂಮ್ ಎಂದು ಹೆಸರಿಟ್ಟಿದೆ. ಪ್ರೇಮಿಗಳ ದಿನದಂದೇ ಇದನ್ನ ಬಿಡುಗಡೆ ಮಾಡಲಾಗಿದೆ.
ಐಡೋ ಕಂಪೆನಿ ಈ ಸೆಂಟ್ ತಯಾರಿಸಿದ್ದು, 140 ರೂಪಾಯಿಗೆ ಈ ಪರ್ಫ್ಯೂಮ್ ಸಿಗುತ್ತದೆ. ಗಂಧದ ಎಣ್ಣೆ, ಆಲೂಗಡ್ಡೆ ಸೇರಿ, ಕೆಲ ಸಾಮಗ್ರಿಗಳನ್ನು ಬಳಸಿ ಈ ಪರ್ಫ್ಯೂಮ್ ತಯಾರಿಸಲಾಗಿದೆ. ಇನ್ನು ಈ ಪರ್ಫ್ಯೂಮ್ ಹೆಸರು ಫ್ರೈಡೋ.