Friday, September 20, 2024

Latest Posts

ಸೋಪಿನ ಬದಲು ಈ ಪೌಡರ್ ಬಳಸಿದರೆ, ನಿಮ್ಮ ಮುಖ ಸುಂದರವಾಗುತ್ತದೆ..

- Advertisement -

ನಾವು ಸುಂದರವಾಗಿ ಕಾಣಬೇಕು. ಮೊಡವೆ ಗುಳ್ಳೆಗಳಿಂದ ಮುಕ್ತಿ ಪಡೆಯಬೇಕು. ನಮ್ಮ ಮುಖವೂ ಕೂಡ ಚೆಂದ ಕಾಣಬೇಕು ಅಂತಾ ಎಷ್ಟೋ ಪ್ರಯತ್ನ ಪಡುತ್ತೇವೆ. ಆದ್ರೆ ಒಂದಲ್ಲ ಒಂದು, ತ್ವಚೆಯ ಸಮಸ್ಯೆ ಕಂಡೇ ಕಾಣಿಸುತ್ತೆ. ಮುಖದಲ್ಲಿ ಒಂದೂ ಮೊಡವೆ ಇಲ್ಲದಿದ್ದರೂ, ಮೊಡವೆ ಕಲೆ ಇರುತ್ತದೆ. ಮೊಡವೆ, ಮೊಡವೆ ಕಲೆ ಇಲ್ಲದಿದ್ದರೂ, ಮುಖ ಒಣಗಿದಂತೆ ಇರತ್ತೆ. ಅಥವಾ ಎಣ್ಣೆ ಎಣ್ಣೆಯಾಗಿರತ್ತೆ. ಹಾಗಾಗಿ ಈ ಎಲ್ಲ ತ್ವಚೆಯ ಸಮಸ್ಯೆಯಿಂದ ಮುಕ್ತಿ ಪಡೆಯಲು ನಾವಿಂದು, ಬೆಸ್ಟ್ ಫೇಸ್‌ವಾಶ್ ಪೌಡರ್ ತಯಾರು ಮಾಡೋದು ಹೇಗೆ ಅನ್ನೋ ಮಾಹಿತಿಯನ್ನ ನಿಮ್ಮ ಮುಂದೆ ತಂದಿದ್ದೇವೆ. ಅದರ ಬಗ್ಗೆ ತಿಳಿಯೋಣ ಬನ್ನಿ..

ನಾವು ಈ ಮೊದಲೇ ನಿಮಗೆ ಎಷ್ಟೋ ಸಲ, ಮುಖಕ್ಕೆ ಸೋಪ್ ಬಳಸಬಾರದು ಅಂತಾ ಹೇಳಿದ್ದೆವು. ಅದಕ್ಕಾಗಿಯೇ ಇಂದು ಫೇಸ್‌ವಾಶ್‌ಗಾಗಿ ಪೌಡರ್ ರೆಸಿಪಿ ತಂದಿದ್ದೇವೆ. ನೀವು ಈ ಪೌಡರನ್ನು ಒಮ್ಮೆ ಮಾಡಿ, ಡಬ್ಬಿಯಲ್ಲಿ ತುಂಬಿಸಿಟ್ಟು, ಎರಡು ವಾರದ ವರೆಗೂ ಬಳಸಬಹುದು. ಇದು ಹೆಸರು ಕಾಳಿನ ಪೌಡರ್. ಈ ರೆಸಿಪಿ ತುಂಬಾ ಸಿಂಪಲ್. ನೀವು ಹೆಸರು ಕಾಳನ್ನ ನೆನೆಸಬೇಕಾಗಿಲ್ಲ. ಹುರಿಯಬೇಕಾಗಿಲ್ಲ. ಒಣಗಿಸಬೇಕಾಗಿಯೂ ಇಲ್ಲ. ಬದಲಾಗಿ ಒಂದು ಮುಷ್ಠಿ ಅಥವಾ ಎರಡು ವಾರಕ್ಕಾಗುವಷ್ಟು ಹೆಸರು ಕಾಳು ತೆಗೆದುಕೊಳ್ಳಿ. ಅದನ್ನ ಬೀಸಿ, ಪುಡಿ ಮಾಡಿಕೊಳ್ಳಿ.

ಈಗ ಈ ಪುಡಿಯನ್ನ ಗಾಜಿನ ಸೀಸದಲ್ಲಿ ತುಂಬಿಸಿ, ನಿಮ್ಮ ಬಾತ್‌ರೂಮ್‌ನಲ್ಲಿಡಿ. ನೀವು ಮುಖ ತೊಳೆಯುವಾಗ, ಇದರಿಂದ ಒಂದು ಸ್ಪೂನ್ ಪೌಡರ್ ತೆಗೆದುಕೊಂಡು, ಇದಕ್ಕೆ ನೀರು ಸೇರಿಸಿ, ಪೇಸ್ಟ್‌ ತಯಾರಿಸಿ, ಅದರಿಂದ ಮುಖ ತೊಳೆಯಿರಿ. ಇದು ಸ್ಕ್ರಬರ್ ರೀತಿ ಕೆಲಸ ಮಾಡತ್ತೆ. ಇದರಿಂದ ಮುಖ ಕ್ಲೀನ್ ಆಗಿ ಕಾಣಿಸುತ್ತೆ. ನಿಮ್ಮದು ಒಣ ತ್ವಚೆಯಾಗಿದ್ದಲ್ಲಿ, ಇದಕ್ಕೆ ನೀವು ತೆಂಗಿನ ಎಣ್ಣೆ ಅಥವಾ ಆಲಿವ್ ಆಯ್ಲ್ ಕೂಡ ಸೇರಿಸಿಕೊಳ್ಳಬಹುದು.

ಹೀಗೆ ಮಾಡುವುದರಿಂದ ನಿಮ್ಮ ತ್ವಚೆ ಮೊದಲಿಗಿಂತ ಕ್ಲೀನ್ ಆಗಿರತ್ತೆ. ನಿಮ್ಮ ಮುಖದ ಮೇಲೆ ಮೊಡವೆ ಕಲೆ ಇದ್ದರೆ ಅದೂ ಹೋಗುತ್ತದೆ. ನಿಮ್ಮ ತ್ವಚೆ ಸಾಫ್ಟ್ ಆಗುತ್ತದೆ. ಕೆಮಿಕಲ್‌ ಯುಕ್ತ ಪ್ರಾಡಕ್ಟ್ ಬಳಕೆ ಬಗಲು, ಈ ಹಿಟ್ಟಿನ ಉಪಯೋಗ ಮಾಡುವುದು ತುಂಬಾ ಉತ್ತಮ.  ಇನ್ನು ಇಲ್ಲಿ ಹೇಳಿರುವ ವಸ್ತುಗಳಲ್ಲಿ ಯಾವುದಾದರೂ ವಸ್ತುವನ್ನ ಬಳಸಿದ್ದಲ್ಲಿ ನಿಮಗೆ ಅಲರ್ಜಿ ಎಂದಾದ್ದಲ್ಲಿ, ಈ ಬಗ್ಗೆ ವೈದ್‌ಯರ ಬಳಿ ವಿಚಾರಿಸಿ, ನಂತರ ಬಳಸುವುದು ಉತ್ತಮ.

- Advertisement -

Latest Posts

Don't Miss