Friday, November 22, 2024

Latest Posts

ಕಾಫಿ ಪ್ರಿಯರಿಗೆ ಗುಡ್ ನ್ಯೂಸ್…! ಕಾಫಿ ಕುಡಿದರೆ ಎಷ್ಟೊಂದು ಪ್ರಯೋಜನ ಇದೆ ಗೊತ್ತಾ…?

- Advertisement -

Health tips

ಮುಂಜಾನೆ ಬೆಡ್ ಕಾಫಿ ಇಲ್ಲದೆ ಕೆಲವರ ದಿನ ಆರಂಭವಾಗುವುದಿಲ್ಲ ಇನ್ನು ಕೆಲವರಿಗೆ ಜುಳುಜುಳು ಮಳೆಯಾಗುತ್ತಿರುವ ಸಮಯದಲ್ಲಿ ಒಂದು ಕಪ್​ ಬಿಸಿಬಿಸಿ ಕಾಫಿಯನ್ನು ಸವಿಯುವುದೆಂದರೆ ಬಹಳ ಇಷ್ಟ ಕೆಲವರು ಕಾಫಿ ಸೇವನೆ ಅರೋಗ್ಯ ದೃಷ್ಟಿಯಿಂದ ಒಳ್ಳೆಯದಲ್ಲ ಎಂದು ಹೇಳುತ್ತಾರೆ ಇನ್ನು ಕೆಲವರಂತೂ ಕಾಫಿ ಕುಡಿಯಬೇಕೋ ಬಿಡಬೇಕೋ ಎಂಬ ಗೊಂದಲದಲ್ಲಿರುತ್ತಾರೆ ,ಇನ್ನು ಕೆಲವರು ಏನೂ ತಲೆಗೆ ಹಾಕಿಕೊಳ್ಳದೆ ಅವರಿಗೆ ಇಷ್ಟಬಂದ ಹಾಗೆ ಕುಡಿಯುತ್ತಾರೆ ಆದರೆ ಇತ್ತೀಚಿನ ಸಂಶೋಧನೆಯೊಂದರಲ್ಲಿ, ಕಾಫಿಯ ದೈನಂದಿನ ಸೇವನೆಯ ಬಗ್ಗೆ ಹೊಸದೊಂದು ವಿಷಯ ಬೆಳಕಿಗೆ ಬಂದಿದೆ ಅದೇನೆಂದರೆ.

ಚೀನಾದ ಗುವಾಂಗ್‌ಝೌನಲ್ಲಿರುವ ದಕ್ಷಿಣ ವೈದ್ಯಕೀಯ ವಿಶ್ವವಿದ್ಯಾಲಯದ ಸಂಶೋಧಕರು ಸಕ್ಕರೆ ಇಲ್ಲದೆ ಕಾಫಿ ಕುಡಿಯುವವರು ಮತ್ತು ಸಕ್ಕರೆ ಹಾಕಿ ಕಾಫಿ ಕುಡಿಯುವವರ ಆರೋಗ್ಯದ ಬಗ್ಗೆ ಸಂಶೋಧನೆ ನಡೆಸಿದ್ದಾರೆ. ಈ ಪೈಕಿ ಸಕ್ಕರೆ ಇಲ್ಲದೇ ಕಾಫಿ ಕುಡಿಯುವವರ ಜೀವಿತಾವಧಿ ಹೆಚ್ಚಾಗುತ್ತದೆ ಎನ್ನುವುದು ಪತ್ತೆಯಾಗಿದೆ. ಕಾಫಿ ಕುಡಿಯುವುದರಿಂದ ಸಾವಿನ ಅಪಾಯ ಕಡಿಮೆಯಾಗುತ್ತದೆ, ಮಾತ್ರವಲ್ಲ ಏಳು ವರ್ಷಗಳವರೆಗೆ ವ್ಯಕ್ತಿಯ ಜೀವ ಹೆಚ್ಚಿಸುತ್ತದೆ ಎಂದು ತಿಳಿದು ಬಂದಿದೆ.

ಕಾಫಿ ನಮ್ಮ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಹೃದ್ರೋಗ, ಟೈಪ್​ 2 ಡಯಾಬಿಟಿಸ್​, ಖಿನ್ನತೆ, ಸಿರೋಸಿಸ್,​ ಆತ್ಮಹತ್ಯೆ ಮನೋಭಾವ, ಪಿತ್ತಜನಕಾಂಗದ ಕ್ಯಾನ್ಸರ್​ ನಂತಹ ಸಮಸ್ಯೆಗಳಿಂದ ದೂರವಿರಬಹುದು. ಇವುಗಳ ವಿರುದ್ಧ ಹೋರಾಡಬಲ್ಲ ಪೌಷ್ಟಿಕ ಅಂಶಗಳು ಕಾಫಿಯಲ್ಲಿ ಸಿಗುತ್ತವೆ. ಕಾಫಿಯಲ್ಲಿರುವ ಕೆಫೀನ್ ಅಂಶವು ನರಮಂಡಲವನ್ನು ಚುರುಕುಗೊಳಿಸುತ್ತದೆ ಹಾಗು ನಿಮ್ಮ ಮೆದುಳಿನಲ್ಲಿ ಚಯಾಪಚಯ ಶಕ್ತಿ ಹೆಚ್ಚಾಗುತ್ತದೆ. ನೀವು ಮೀಟಿಂಗ್ ಅಥವಾ ಸಂದರ್ಶನಕ್ಕೆ ಹೊರಟಿದ್ದರೆ, ಹೋಗುವ ಮುನ್ನ ಒಂದು ಕಪ್ ಕಾಫಿ ಕುಡಿಯಿರಿ, ಅದರ ವ್ಯತ್ಯಾಸವನ್ನು ನೀವೇ ಗಮನಿಸಬಹುದು. ದಿನಕ್ಕೆ ಎರಡರಿಂದ ಮೂರು ಕಪ್ ಕಾಫಿ ಕುಡಿಯಬಹುದು ಎಂದು ತಜ್ಞರು ಸಲಹೆ ನೀಡುತ್ತಾರೆ.ಆದರೆ ಅತಿಯಾದ ಕಾಫಿ ಸೇವನೆಯಿಂದ ನಿದ್ರೆಯ ಸಮಸ್ಯೆಗೆ ಒಳಗಾಗ ಬಹುದು ಹಾಗು ಇನ್ನ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಎಷ್ಟೇ ಪ್ರಯತ್ನ ಪಟ್ಟರು ನಿಮ್ಮ ತೂಕ ಕಡಿಮೆಯಾಗುತ್ತಿಲ್ವಾ..?! ಹಾಗಾದ್ರೆ ಒಮ್ಮೆ ಈ ಟಿಪ್ಸ್ ಫಾಲೋ ಮಾಡಿ :

ಬರಿಗಾಲಿನಲ್ಲಿ ನಡೆದರೆ ಎಷ್ಟೊಂದು ಪ್ರಯೋಜನ ಗೊತ್ತಾ ?

ಸಕ್ಕರೆ ಸ್ಲೋ ಪಾಯಿಸನ್..?! ಸಕ್ಕರೆ ಬಳಸೋಕು ಮುನ್ನ ಈ ವಿಷಯದ ಬಗ್ಗೆ ತಿಳಿದುಕೊಳ್ಳಿ..!

 

- Advertisement -

Latest Posts

Don't Miss