Wednesday, July 9, 2025

Latest Posts

 ದೇಶದೊಳಗಿದ್ದು ಕೊಳಕು ಕೆಲಸ ಮಾಡ್ತಿದ್ದ ಕ್ರಿಮಿಗಳು ಅಂದರ್‌ : ಪಾಕ್‌ಗೆ ಮಾಹಿತಿ ನೀಡ್ತಿದ್ದ ದುರುಳರ ಬೇಟೆ..!

- Advertisement -

ನವದೆಹಲಿ : ಭಾರತ ಹಾಗೂ ಪಾಕಿಸ್ತಾನದ ನಡುವಿನ ಸಂಘರ್ಷದ ಬಳಿಕ ದೇಶದೊಳಗಿದ್ದುಕೊಂಡೆ ರಣಹೇಡಿ ಶತ್ರು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐಗೆ ಮಾಹಿತಿ ನೀಡುತ್ತಿದ್ದ ದೇಶದ್ರೋಹಿ ಕ್ರಿಮಿಗಳ ಬೇಟೆಯನ್ನು ಎನ್‌ಐಎ ಹಾಗೂ ಉಗ್ರ ನಿಗ್ರಹ ದಳ ಭರ್ಜರಿಯಾಗಿಯೇ ಮುಂದುವರೆಸಿದೆ.

ಭಾರತದ ವಿರುದ್ಧ ಬೇಹುಗಾರಿಕೆ ಮಾಡ್ತಿದ್ದ ಕುಳಗಳು ಅಂದರ್..!

ಇನ್ನೂ ಭಾರತದಲ್ಲಿ ನಡೆಯುತ್ತಿರುವ ಸೇನಾ ಕಾರ್ಯಾಚರಣೆಗಳ ಮಾಹಿತಿಯನ್ನು ಪಾಕಿಸ್ತಾನಕ್ಕೆ ಸೋರಿಕೆ ಮಾಡುತ್ತಿದ್ದ ದುರುಳನನ್ನು ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳು ಬಂಧಿಸಿದ್ದಾರೆ. ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ ಐಎಸ್‌ಐ ಪರ ಕೆಲಸ ನಿರ್ವಹಿಸುತ್ತಿದ್ದ ಆರೋಪದ ಮೇಲೆ ರಾಂಪುರ ನಿವಾಸಿ ಶಹಜಾದ್ ಎಂಬಾತನನ್ನು ಮೊರಾದಾಬಾದ್‌ನಲ್ಲಿ ಬಂಧಿಸಲಾಗಿದೆ.

ಅಲ್ಲದೆ ಬಂಧಿತ ಶಹಜಾದ್​ ಐಎಸ್‌ಐಗೆ ಸೂಕ್ಷ್ಮ ಮಾಹಿತಿ ರವಾನಿಸುತ್ತಿದ್ದ ಹಾಗೂ ಅದರ ಕಾರ್ಯಕರ್ತರಿಗೆ ಸಹಾಯ ಮಾಡುತ್ತಿದ್ದ ಎಂಬ ಆರೋಪ ಇವನ ಮೇಲಿದೆ. ಶಹಜಾದ್ ಪಾಕಿಸ್ತಾನಿ ಸಂಸ್ಥೆಗೆ ಭಾರತದ ಗೌಪ್ಯ ವಿವರಗಳನ್ನು ಪೂರೈಸುತ್ತಿದ್ದನಲ್ಲದೆ, ಉತ್ತರ ಪ್ರದೇಶದಲ್ಲಿ ಸಕ್ರಿಯವಾಗಿರುವ ಐಎಸ್‌ಐ ಏಜೆಂಟ್‌ಗಳಿಗೆ ಹಣ ಮತ್ತು ಸಿಮ್ ಕಾರ್ಡ್‌ ಸಪ್ಲೈ ಮಾಡುತ್ತಿದ್ದ. ಭಾರತದ ವಿರುದ್ಧ ಬೇಹುಗಾರಿಕೆ ಚಟುವಟಿಕೆಗಳಿಗೆ ಸಹಾಯ ಮಾಡಿಕೊಡುತ್ತಿದ್ದ ಎಂದು ಉತ್ತರ ಪ್ರದೇಶದ ಉಗ್ರ ನಿಗ್ರಹ ದಳ ಮಾಹಿತಿ ನೀಡಿದೆ.

ಪಾಕ್‌ಗೆ ತೆರಳುವವರಿಗೆ ವೀಸಾ ವ್ಯವಸ್ಥೆ ಮಾಡ್ತಿದ್ದ ಖದೀಮ..

ಪ್ರಮುಖವಾಗಿ ಐಎಸ್‌ಐ ಜೊತೆ ವ್ಯವಹರಿಸಲು ಪಾಕಿಸ್ತಾನಕ್ಕೆ ತೆರಳುವ ವ್ಯಕ್ತಿಗಳಿಗೆ ವೀಸಾ ವ್ಯವಸ್ಥೆ ಮಾಡುವಲ್ಲಿ ಶಹಜಾದ್​ ಭಾಗಿಯಾಗಿದ್ದ ಎಂಬ ಅಂಶ ತನಿಖೆಯಿಂದ ಗೊತ್ತಾಗಿದೆ. ಭಾರತ-ಪಾಕಿಸ್ತಾನ ಬಾರ್ಡರ್‌ನಲ್ಲಿ ಗಡಿಯಾಚೆಗಿನ ಕಳ್ಳ ಸಾಗಣೆಯಲ್ಲಿ ಭಾಗಿಯಾಗಿರುವ ವ್ಯಕ್ತಿಯೊಬ್ಬ ಪಾಕಿಸ್ತಾನದ ಜೊತೆ ನಂಟು ಹೊಂದಿದ್ದು, ಬೇಹುಗಾರಿಕೆ ಮತ್ತು ರಾಷ್ಟ್ರವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದಾನೆ ಎಂಬ ಗುಪ್ತಚರ ಮಾಹಿತಿಯ ಮೇರೆಗೆ ಉಗ್ರ ನಿಗ್ರಹ ದಳವು ಯಶಸ್ವಿ ಕಾರ್ಯಾಚರಣೆ ನಡೆಸಿದೆ.

ಅಕ್ರಮ ವ್ಯಾಪಾರವೇ ಮಾಹಿತಿ ಸೋರಿಕೆಯ ಮೂಲ..!

ಶಹಜಾದ್ ಹಲವು ವರ್ಷಗಳಿಂದ ಪಾಕಿಸ್ತಾನಕ್ಕೆ ಮೇಲಿಂದ ಮೇಲೆ ಭೇಟಿ ನೀಡಿರುವ ಬಗ್ಗೆ ಪುರಾವೆಗಳು ಲಭ್ಯವಾಗಿವೆ. ಗಡಿಯಾಚೆಗಿನ ಸೌಂದರ್ಯವರ್ಧಕಗಳು, ಬಟ್ಟೆ, ಮಸಾಲೆಗಳು ಮತ್ತು ಇತರ ಸರಕುಗಳ ಅಕ್ರಮ ವ್ಯಾಪಾರದ ಮೂಲಕ ರಹಸ್ಯ ಕಾರ್ಯಾಚರಣೆ ನಡೆಸುತ್ತಿದ್ದ ಬಗ್ಗೆ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಹಲವಾರು ಐಎಸ್‌ಐ ಏಜೆಂಟ್‌ಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಆರೋಪಿಯು ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಎಂದು ತಿಳಿದು ಬಂದಿದೆ. ಶಹಜಾದ್ ವಿರುದ್ಧ ಅನೇಕ ದಾಖಲೆಗಳನ್ನು ಸಂಗ್ರಹಿಸಿರುವ ಉಗ್ರ ನಿಗ್ರಹ ದಳದ ಅಧಿಕಾರಿಗಳು ಲಕ್ನೋದಲ್ಲಿ ಈ ಬಗ್ಗೆ ಪ್ರಕರಣ ದಾಖಲಿಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

12 ಜನ ದೇಶ ದ್ರೋಹಿಗಳ ಬಂಧನ,

ಇಷ್ಟೇ ಅಲ್ಲದೆ ಪಾಕಿಸ್ತಾನದ ಹೇಸಿಗೆ ತಿನ್ನುವ ಈ ಕೆಲಸದಲ್ಲಿ ಪಂಜಾಬ್‌ನ ಗುರುದಾಸ್‌ಪುರದಲ್ಲಿ ಸುಖ್‌ಪ್ರೀತ್‌ ಸಿಂಗ್‌ ಹಾಗೂ ಕರುಣ್‌ ಬೀರ್‌ ಎಂಬ ಇಬ್ಬರು ಪಾಕ್‌ ಪರ ಬೇಹುಗಾರಿಕೆ ನಡೆಸುತ್ತಿದ್ದವರನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಈ ಮೂಲಕ ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡು ಬಂಧನವಾಗಿರುವ ಸಂಖ್ಯೆ 12ಕ್ಕೆ ಏರಿಕೆಯಾಗಿದೆ. ಪ್ರಮುಖವಾಗಿ ಹಣದ ಆಸೆಗಾಗಿ ನಮ್ಮ ಸೇನೆಯ ಮಾಹಿತಿಯನ್ನು ಸೋಷಿಯಲ್‌ ಮೀಡಿಯಾಗಳಲ್ಲಿ, ಮೆಸೇಜಿಂಗ್‌ ಅಪ್ಲಿಕೇಶನ್‌ಗಳ ಮೂಲಕ ಹಾಗೂ ವೈಯಕ್ತಿಕವಾಗಿ ಪಾಕ್‌ಗೆ ಭೇಟಿ ನೀಡಿ ಲೀಕ್‌ ಮಾಡುತ್ತಿದ್ದ ದುಷ್ಕರ್ಮಿಗಳ ಅಸಲಿಯತ್ತು ಬಯಲಾದಂತಾಗಿದೆ.

ಮೂರು ದಿನದ ಮಿಂಚಿನ ಕಾರ್ಯಾಚರಣೆ..

ಅಲ್ಲದೆ ಮುಖ್ಯವಾಗಿ ಹರಿಯಾಣ, ಪಂಜಾಬ್‌ ಹಾಗೂ ಉತ್ತರ ಪ್ರದೇಶಗಳಲ್ಲಿ ಕಳೆದ ಮೂರು ದಿನಗಳಲ್ಲಿ ನಡೆಸಿದ ಮಿಂಚಿನ ಕಾರ್ಯಾಚರಣೆಯಲ್ಲಿ ಯಟ್ಯೂಬರ್‌ ಜ್ಯೋತಿ ಮಲ್ಹೋತ್ರಾ, ಜಲಂಧರ್‌ನ ಆಪ್‌ ಡೆವಲಪರ್‌ ಮೊಹಮ್ಮದ್‌ ಮುರ್ತಾಜಾ, ವಿದ್ಯಾರ್ಥಿ ದೇವೆಂದ್ರ ಸಿಂಗ್‌ ದಿಲ್ಲೋನ್‌, ಪಾಣಿ ಪತ್‌ನ ಸೆಕ್ಯೂರಿಟಿ ಗಾರ್ಡ್‌ ನ್ಯೂಮನ್‌ ಇಲಾಹಿ, ಅಮೃತಸರದ ಕಾರ್ಮಿಕರಾದ ಪಾಲಕ್‌ ಶೇರ್‌, ಮಸೀಹ್‌, ಸೂರಜ್‌ ಮಸೀಹ್‌ ಅಲಿ, ಪಂಜಾಬ್‌ನ ಮಲೇರ್‌ಕೊಟ್ಲಾದ ಯಾಮೀನ್‌ ಮೊಹಮ್ಮದ್‌, ಗಜಾಲಾ, ನೂಹಾನ್‌ ಅರ್ಮಾನ್ ಸೇರಿದಂತೆ ಹಲವು ಕ್ರಿಮಿಗಳನ್ನು ಭದ್ರತಾ ಸಂಸ್ಥೆಗಳು ಬಂಧಿಸಿವೆ.

ಮೂರು ಮೊಬೈಲ್‌, 8 ಸಜೀವ ಗುಂಡುಗಳು ವಶ..

ಇನ್ನೂ ಪಂಜಾಬ್‌ನಲ್ಲಿ ಬಂಧಿತರಾಗಿರುವ ಸುಖ್‌ಪ್ರೀತ್‌ ಸಿಂಗ್‌ ಹಾಗೂ ಕರುಣ್‌ ಬೀರ್‌ ವಿರುದ್ಧ ಅಲ್ಲಿನ ಡಿಜಿಪಿ ಸ್ಫೋಟಕ ಮಾಹಿತಿ ಹೊರಹಾಕಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ‌ ಡಿಜಿಪಿ ಗೌರವ್‌ ಯಾದವ್, ಭಾರತದ ಆಪರೇಷನ್‌ ಸಿಂಧೂರ್‌ ಕುರಿತ ಮಾಹಿತಿಯನ್ನು ಈ ಇಬ್ಬರು ಐಎಸ್‌ಐಗೆ ರವಾನಿಸಿದ್ದರು. ಅಲ್ಲದೆ ಜಮ್ಮು ಮತ್ತು ಕಾಶ್ಮೀರ, ಪಂಜಾಬ್‌, ಹಿಮಾಚಲ ಪ್ರದೇಶದಲ್ಲಿರುವ ಪ್ರಮುಖ ಸೇನಾ ನೆಲೆಗಳ ಬಗ್ಗೆಯೂ ಮಾಹಿತಿ ನೀಡುತ್ತಿದ್ದರು. ಈ ಇಬ್ಬರ ಮೊಬೈಲ್‌ಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿ ವರದಿ ತರಿಸಿಕೊಳ್ಳಲಾಗಿದ್ದು, ಅದರಲ್ಲಿ ಇವರು ಸೂಕ್ಷ್ಮ ಮಾಹಿತಿ ಹಂಚಿಕೊಂಡಿರುವುದು ಹಾಗೂ ಐಎಸ್‌ಐ ಹ್ಯಾಂಡ್ಲರ್‌ಗಳ ಜೊತೆ ಸಂಪರ್ಕದಲ್ಲಿರುವುದು ದೃಢ ಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇಷ್ಟೇ ಅಲ್ಲದೆ ಈ ಆರೋಪಿಗಳಿಂದ ಮೂರು ಮೊಬೈಲ್‌ ಹಾಗೂ 8 ಸಜೀವ ಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ.

- Advertisement -

Latest Posts

Don't Miss