National Political News: ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಜ್ಞಾನವ್ಯಾಪಿ ಮಂದಿರಕ್ಕೆ ಭೇಟಿ ನೀಡಿ, ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಕಾಶಿಗೆ ತೆರಳಿದ್ದ ಯೋಗಿ ಆದಿತ್ಯನಾಥ್, ಕಾಶಿ ವಿಶ್ವೇಶ್ವರನ ದರ್ಶನ ಮಾಡಿದರು. ಬಳಿಕ ಜ್ಞಾನವ್ಯಾಪಿ ಮಂದಿರದ ಕೆಳಮಹಡಿಯಲ್ಲಿರುವ ದೇವಸ್ಥಾನದಲ್ಲಿ, ದೇವರಿಗೆ ಪೂಜೆ ಸಲ್ಲಿಸಿದ್ದಾರೆ.
ಇನ್ನು ಕೆಲ ದಿನಗಳಲ್ಲೇ ಪ್ರಧಾನಿ ಮೋದಿ, ತಮ್ಮ ಕ್ಷೇತ್ರವಾದ ವಾರಣಾಸಿಗೆ ಭೇಟಿ ನೀಡಲಿದ್ದು, ಲೋಕಸಭಾ ಚುನಾವಣೆಗಾಗಿ ಪ್ರಚಾರ ಕಾರ್ಯ ಆರಂಭಿಸಲಿದ್ದಾರೆ. ಹೀಗಾಗಿ ಮೊದಲೇ ಅಲ್ಲಿನ ಸಿದ್ಧತೆಗಳನ್ನು ನೋಡಿಕೊಳ್ಳಲು, ಯೋಗಿ ಆದಿತ್ಯನಾಥ್ ವಾರಣಾಸಿಗೆ ಭೇಟಿ ನೀಡಿದ್ದರು.
ಜ್ಞಾನ ವ್ಯಾಪಿ ಮಂದಿರದ ಕೇಸ್ ಕೋರ್ಟ್‌ನಲ್ಲಿದ್ದು, ನೆಳಮಾಳಿಗೆಯಲ್ಲಿ ಪೂಜೆ ಸಲ್ಲಿಸಲು ಕೋರ್ಟ್ ಅನುಮತಿ ನೀಡಿದೆ. ಹಿಂದೂಗಳು ಕೋರ್ಟ್ ಅವಕಾಶ ಕೊಟ್ಟ ಮಧ್ಯರಾತ್ರಿಯಂದೇ ಪೂಜೆ ಸಲ್ಲಿಸಿತ್ತು. ಅಂದಿನಿಂದ ದೇವರಿಗೆ ತಪ್ಪದೇ, ಪೂಜೆ ಮಾಡಲಾಗುತ್ತಿದೆ. ಇಂದು ಯೋಗಿಜಿ ಕೂಡ ಅದೇ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ.




