Uttar Pradesh News: ಉತ್ತರಪ್ರದೇಶದ ಗೋರಖ್ ಪುರದಲ್ಲಿ ವಧು ತಾನು ಬಾತ್‌ರೂಮಿಗೆ ಹೋಗಿ ಬರುತ್ತೇನೆ ಎಂದು ಹೋಗಿ, ಅಲ್ಲಿಂದಲೇ ದುಡ್ಡು, ಚಿನ್ನಾಭರಣದೊಂದಿಗೆ ಎಸ್ಕೇಪ್ ಆಗಿರುವ ಘಟನೆ ನಡೆದಿದೆ.
ಸೀತಾಪುರ ಜಿಲ್ಲೆಯ ಗೋವಿಂದಪುರ ಗ್ರಾಮದ ನಿವಾಸಿ ಕಮಲೇಶ್. ಈತನ ಮೊದಲ ಪತ್ನಿ ತೀರಿಹೋದ ಬಳಿಕ, ಎರಡನೇಯ ಮದುವೆಗೆ ಸಿದ್ಧನಾಗಿ, ಹೆಣ್ಣು ಹುಡುಕುತ್ತಿದ್ದವನಿಗೆ ಸಿಕ್ಕಿದ್ದೇ ಈ ಕಳ್ಳಿ. ಬ್ರೋಕರ್ ಮೂಲಕ 30 ಸಾಾವಿರ ರೂಪಾಯಿ ಕೊಟ್ಟು, ಎರಡೂ ಕಡೆ ಮನೆಯ ಒಪ್ಪಿಗೆ ಸಿಕ್ಕ ಬಳಿಕ, ಮದುವೆ ಫಿಕ್ಸ್ ಆಗಿತ್ತು.
ಸ್ಥಳೀಯ ಶಿವ ದೇವಸ್ಥಾನದಲ್ಲಿ ಮದುವೆ ಇಟ್ಟುಕೊಳ್ಳಲಾಗಿತ್ತು. ಈ ವೇಳೆ ವಧು ತನ್ನ ತಾಯಿಯೊಂದಿಗೆ ಮತ್ತು ವರ ತನ್ನ ಕುಟುಂಬದೊಂದಿಗೆ ದೇವಸ್ಥಾನಕ್ಕೆ ಆಗಮಿಸಿದ್ದ. ಆದರೆ ಸ್ವಲ್ಪ ಹೊತ್ತಿನ ಬಳಿಕ, ತನಗೆ ವಾಶ್‌ರೂಮ್‌ಗೆ ಹೋಗಬೇಕು ಎಂದು ಹೇಳಿದ್ದಕ್ಕೆ, ವಧುವಿನೊಂದಿಗೆ ಆಕೆಯ ತಾಯಿಯನ್ನು ಕಳುಹಿಸಿಕೊಡಲಾಗಿತ್ತು.
ಆದರೆ ಬಾತ್‌ರೂಮ್ ಹೋಗಿ ಸುಮಾರು ಹೊತ್ತಾದರೂ ಇನ್ನೂ ಬಾರದ ಕಾರಣ, ವವರನ ಕಡೆಯವರು ಹೋಗಿ ಚೆಕ್ ಮಾಡಿದಾಗ, ಆಕೆ ಹಣ, ಬಂಗಾರದೊಂದಿಗೆ ತಾಯಿಯನ್ನು ಕರೆದುಕೊಂಡು ಎಸ್ಕೇಪ್ ಆಗಿರುವುದು ಗೊತ್ತಾಗಿದೆ. ಈ ಬಗ್ಗೆ ಬೇಸರ ವ್ಯಕ್ತಪಡಿಸಿರುವ ವರ, ನಾನು ಆಕೆಯೊಂದಿಗೆ ಖುಷಿಯಾಗಿ ಸಂಸಾರ ನಡೆಸುವ ಕನಸು ಕಂಡಿದ್ದೆ. ಆಕೆಗೆ ಹಣ, ಸೀರೆ, ಮೆಕಪ್ ಕಿಟ್, ಮೊಬೈಲ್ ಎಲ್ಲವೂ ನೀಡಿದ್ದೆ. ಆದರೆ ಆಕೆ ಹೀಗೆ ಮಾಡಿ ಬಿಟ್ಟಳು ಎಂದು ಬೇಸಪ ವ್ಯಕ್ತಪಡಿಸಿದ್ದಾನೆ. ಇನ್ನು ಈ ಬಗ್ಗೆ ಯಾವುದೇ ದೂರು ದಾಖಲಾಗಲಿಲ್ಲ. ದೂರು ದಾಖಲಿಸಿದರೆ, ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.