Political News: ಬಿಜೆಪಿ ನಾಯಕ ಇಂಡುವಾಳು ಸಚ್ಚಿದಾನಂದ ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದು, ಚುನಾವಣೆಯಲ್ಲಿ ಸೋಲಾಗಿದ್ದಕ್ಕೆ ಕಾರಣವೇನು ಎಂಬ ಬಗ್ಗೆ ವಿವರಿಸಿದ್ದಾರೆ.
2023ರಲ್ಲಿ ಸಚ್ಚಿದಾನಂದ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಆದರೆ 42 ಸಾವಿರಕ್ಕೂ ಅಧಿಕ ಮತಗಳನ್ನು ಪಡೆದರೂ, ಅವರು ಚುನಾವಣೆಯಲ್ಲಿ ಸೋಲನ್ನಪ್ಪಿದ್ದರು. ಪಕ್ಷ ವಿರೋಧಿ ಚಟುವಟಿಕೆಯೇ ಸೋಲಿಗೆ ಕಾರಣ ಅಂತಾರೆ ಸಚ್ಚಿದಾನಂದ.
ಅವತ್ತು ಜನ ನನ್ನನ್ನು ನಂಬಲಿಲ್ಲ. ಆದರೂ 42 ಸಾವಿರ ಮತಗಳು ಬಂದಿತ್ತು. ಆಗ ಕೆಲವರು ನಿಮಗೆ ಇಷ್ಟು ಬೆಂಬಲ ಸಿಕ್ಕಾಗ, ನಾವೂ ನಿನಗೆ ಬೆಂಬಲಿಸುತ್ತಿದ್ದೆವು ಎಂದು ಹೇಳಿದ್ದೂ ಇದೆಯಂತೆ. ಇದೀಗ ಮೋದಿ ಅಲೆ, ಅಭಿವೃದ್ಧಿ ಕೆಲಸ ನೋಡಿ, ನಮ್ಮ ಕೆಲಸ ನೋಡಿ, ಜನ ಬೆಂಬಲಿಸಲು ಮುಂದಾಗುತ್ತಿದ್ದಾರೆ. ಆ ಬಗ್ಗೆ ಭವಿಷ್ಯದಲ್ಲಿ ನೋಡೋಣ ಎಂದಿದ್ದಾರೆ ಸಚ್ಚಿದಾನಂದ.
ಇನ್ನು ಮನೆ ಮಂದಿಯ ಬೆಂಬಲದ ಬಗ್ಗೆ ಮಾತನಾಡಿರುವ ಸಚ್ಚಿದಾನಂದ, ನಮ್ಮ ಮನೆಯವರೂ ಕೆಲಸದಲ್ಲಿ ಬ್ಯುಸಿಯಾಗಿರುತ್ತಾರೆ. ಅವರ ಬೆಂಬಲದಿಂದಲೇ ನಾನು ಇಲ್ಲಿಯವರೆಗೆ ಬಂದಿದ್ದು, ಆದರೆ ನನಗೆ ಮನೆಯವರಿಗೆಲ್ಲ ಸಮಯ ನೀಡಲಾಗುತ್ತಿಲ್ಲ. ಅದರಲ್ಲಿ ನಾನು ವಿಫಲನಾಗಿದ್ದೇನೆ ಎಂದು ಸಚ್ಚಿದಾನಂದ ಬೇಸರ ವ್ಯಕ್ತಪಡಿಸಿದ್ದಾರೆ. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.




