ಉತ್ತರಪ್ರದೇಶ: ಮದುವೆಯಾದವಳನ್ನೇ ಪ್ರೀತಿಸಿ ಗರ್ಭಿಣೆ ಮಾಡಿ ಮದುವೆಯಾಗು ಎಂದಿದ್ದಕ್ಕೆ ಸ್ನೇಹಿತರ ಜೊತೆ ಸೇರಿ ಪ್ರೀತಿಸಿದಾಕೆಯನ್ನೆ ಕೊಲೆ ಮಾಡಿ ಶವವನ್ನು ಹೊಲದಲ್ಲಿ ಬಿಸಾಡಿ ಪರಾರಿಯಾದ ಘಟನೆ ಉತ್ತರಪ್ರದೇಶದ ಮೀರತ್ ಜಿಲ್ಲೆಯಲ್ಲಿ ನಡೆದಿದೆ.
2015ರಲ್ಲಿ ರಾಂಬಿರಿ ಎನ್ನುವ ಯುವತಿ ಉತ್ತರಪ್ರದೇಶದ ವಿನೋಧ ಎನ್ನುವ ಯುವಕನ ಜೊತೆ ಮದುವೆಯಾಗಿದ್ದಳು. ಒಂದು ವರ್ಷದ ನಂತರ ಸಂಸಾರದಲ್ಲಿ ಬಿರುಕು ಉಂಟಾಗಿ ವಿಚ್ಛೇಧನ ಪಡೆದುಕೊಂಡು ತವರುಮನೆಯಲ್ಲಿ ವಾಸವಾಗಿದ್ದಳು. ನಂತರ ಅದೇ ಗ್ರಾಮದಲ್ಲಿರುವ ಆದೇಶ್ ಎನ್ನುವವನ ಜೊತೆ ಸ್ನೇಹ ಬೆಳೆಯಿತು ಸ್ನೇಹ ಪ್ರೀತಿಗೆ ತಿರುಗಿ ದೈಹಿಕ ಸಂಪರ್ಕ ಹೊಂದಿದರು ನಂತರ ಅವಳು ಗರ್ಭಿಣಿಯಾಗಿದ್ದಾಳೆ.
ರಾಂಬಿರಿ ನಾನು ಗರ್ಭೀಣಿಯಾಗಿದ್ದೇನೆ ನನ್ನನ್ನು ಮದುವೆಯಾಗು ಎನ್ನುವಂತೆ ಪದೇ ಪದೇ ಕೆಳಿದ್ದಾಳೆ. ಅಗ ಆದೇಶ ಜುಲೈ 2 ರಂದು ಅವಳನ್ನು ಬೇಟಿ ಮಾಡುವುದಾಗಿ ನಿರ್ಜನ ಪ್ರದೇಶಕ್ಕೆ ಕರೆಸಿ ನಾಲ್ಕು ಜನ ಸ್ನೇಹಿತರಾದ ದೀಪಕ್ ಆರ್ಯನ್ ಸಂದೀಪ್ ಮತ್ತು ರೋಹಿತ್ ಜೊತೆ ಸೇರಿ ಅವಳನ್ನು ಇಟ್ಟಿಗೆಯಿಂದ ತಲೆಗೆ ಹೊಡೆದು ಕೊಲೆ ಮಾಡಿ ಯುವತಿಯ ಶವವನ್ನು ಹೊಲದಲ್ಲಿ ಬಿಟ್ಟು ಪರಾರಿಯಾಗಿದ್ದಾರೆ.
ಮಗಳ ಕೊಲೆಯಾಗಿದೆ ಎಂದು ಆರೋಪಿಸಿ ಪೋಷಕರು ದೂರು ನೀಡಿದ್ದಾರೆ. ಪೋಲಿಸರು ಕಾರ್ಯಚರಣೆ ನಡೆಸಿ ಶವವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.ನಾಲ್ಕು ಜನ ಅಪರಾಧಿಗಳನ್ನು ಬಂದಿಸಿದ್ದಾರೆ.
ಭಯೋತ್ಪಾದನೆಗೆ ಹಣಕಾಸು ನೆರವು ನೀಡುವವರ ವಿರುದ್ಧ ನಿರ್ಣಾಯಕ ಕ್ರಮ ತೆಗೆದುಕೊಳ್ಳವ ಅಗತ್ಯವಿದೆ -ಮೋದಿ