ಫೈವ್ ಸ್ಟಾರ್ ಹೊಟೇಲ್‌ನಲ್ಲಿ, ಪ್ಲೇನ್‌ನಲ್ಲಿ, ದೊಡ್ಡ ದೊಡ್ಡ ಮಾಲ್‌ನಲ್ಲೆಲ್ಲಾ ತಿಂಡಿ ರೇಟ್ ಜಾಸ್ತಿ ಇರುವ ಬಗ್ಗೆ ಹಲವರು ಧ್ವನಿ ಎತ್ತಿದ್ದನ್ನ ನಾವು ನೋಡಿದ್ದೇವೆ. ಆದ್ರೆ ಏನೂ ಪ್ರಯೋಜನವಿಲ್ಲ. ಯಾಕಂದ್ರೆ ಈ ಸ್ಥಳಗಳಲ್ಲಿ ಇಷ್ಟೇ ರೇಟ್‌ನ ತಿಂಡಿನೇ ಸಿಗೋದು. ಇಂದು ಪ್ಲೇನ್ ಒಂದರಲ್ಲಿ ವಡಾಪಾವ್ ಬೆಲೆ 250 ರೂಪಾಯಿ ಇದ್ದು, ಇದನ್ನ ನಾನು ತಿಂದದ್ದು ಕಂಡ್ರೆ, ಪ್ಲೇನ್‌ನಿಂದಲೇ ನನ್ನನ್ನು ಎತ್ತಿ ಎಸೆಯಿರಿ ಎಂದು ತನ್ನ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾನೆ.
ನಾವು ರೋಡ್ ಸೈಡಲ್ಲಿ ಮಾರೋ ವಡಾಪಾವ್ ತಿಂದ್ರೆ, ಅದರ ಬೆಲೆ 10 ರೂಪಾಯಿ ಇರತ್ತೆ. ಹೊಟೇಲ್‌ನಲ್ಲಿ 15ರಿಂದ 20 ರೂಪಾಯಿಗೆ ಸಿಗತ್ತೆ. ಇನ್ನೂ ಹೆಚ್ಚಿನ ರೇಟ್ ಅಂದ್ರೆ 25 ರೂಪಾಯಿ ಅಂದುಕೊಳ್ಳೋಣ. ಆದ್ರೆ 250 ರೂಪಾಯಿಗೆ ಒಂದೇ ಒಂದು ವಡಾಪಾವ್ ಸಿಗತ್ತೆ ಅಂದ್ರೆ, ಮಿಡಲ್ ಕ್ಲಾಸ್ ಜನರ ಹೊಟ್ಟೆ ಉರಿದೇ ಇರತ್ತಾ ಹೇಳಿ..? ಪುಲ್ಕಿತ್ ಕೋಚಾರ್ ಎಂಬ ವ್ಯಕ್ತಿ ಫ್ಲೈಟ್‌ನಲ್ಲಿ ಪ್ರಯಾಣಿಸುತ್ತಿರುವಾಗ, ಈ ಘಟನೆ ನಡೆದಿದ್ದು, ಟ್ವಿಟರ್‌ನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
ವಿಮಾನದಲ್ಲಿ ಸಿಗುವ ಮೆನುವಿನ ಫೋಟೋವನ್ನು ಹಂಚಿಕೊಂಡಿರುವ ಪುಲ್ಕಿತ್, ನಾನು ತಿಂದದ್ದು ಕಂಡ್ರೆ, ಪ್ಲೇನ್‌ನಿಂದಲೇ ನನ್ನನ್ನು ಎತ್ತಿ ಎಸೆಯಿರಿ ಎಂದು ಹೇಳಿದ್ದಾರೆ. ಇದಕ್ಕೆ ಹಲವರು ಕಾಮೆಂಟ್ ಮಾಡಿದ್ದು, ಪುಲ್ಕಿತ್ ಪರ ಧ್ವನಿ ಎತ್ತಿದ್ದಾರೆ. ಅಲ್ಲದೇ, ತಮಗಾದ ಅನುಭವವನ್ನು ಹಂಚಿಕೊಂಡಿದ್ದಾರೆ. ಇಷ್ಟೇ ಅಲ್ಲದೇ, ಮೆನುವಿನ ಚಿತ್ರದಲ್ಲಿ ನಾನ್‌ವೆಜ್ ಬೆಲೆಯೂ ಕಾಣಿಸುತ್ತಿದ್ದು, 500 ರೂಪಾಯಿ ಅಂತಾ ಬರೆದಿದೆ. ಒಟ್ಟಿನಲ್ಲಿ ಪ್ಲೇನ್‌ನಲ್ಲಿ ತಿಂಡಿ ಖರೀದಿಸಲು ಮಿಡ್ಲಕ್ಲಾಸ್ ಜನ ಪಡುವ ಪಾಡು ಅಷ್ಟಿಷ್ಟಲ್ಲ. ಇತ್ತ ತಿನ್ನುವ ಹಾಗೂ ಇಲ್ಲ, ಅತ್ತ ತಿನ್ನದೇ ಇರುವ ಹಾಗೂ ಇಲ್ಲ.

