Saturday, July 5, 2025

Latest Posts

ಸವಿತಾ ಸಮಾಜದ ವತಿಯಿಂದ ಹುಬ್ಬಳ್ಳಿಯಲ್ಲಿ ವೈಕುಂಠ ಏಕಾದಶಿ ಕಾರ್ಯಕ್ರಮ

- Advertisement -

Hubballi News: ಹುಬ್ಬಳ್ಳಿ: ಇಲ್ಲಿನ ಅರವಿಂದ ನಗರದ ಹುಬ್ಬಳ್ಳಿ ಸವಿತಾ ಸಮಾಜ (ರಿ) ವತಿಯಿಂದ ಡಿ.23 ರಂದು ವೈಕುಂಠ ಏಕಾದಶಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ನ ಕಾರ್ಯದರ್ಶಿ ಧನರಾಜ ಗೊಂಡಪಲ್ಲಿ ಹೇಳಿದರು.

ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ ವೆಂಕಟೇಶ್ವರ ಸ್ವಾಮಿಗೆ ವಿಶೇಷ ಪೂಜೆ ಮತ್ತು ಪುಷ್ಪಾಲಂಕಾರ ಸಲ್ಲಿಸಲಾಗುವುದು. ಬೆಳಿಗ್ಗೆ 7 ರಿಂದ ರಾತ್ರಿ 9 ರವರೆಗೆ ಸ್ವಾಮಿಯ ದರ್ಶನಕ್ಕೆ ಭಕ್ತಾದಿಗಳಿಗೆ ಅವಕಾಶವಿದೆ ಎಂದರು.

ಬೆಳಿಗ್ಗೆ 7 ಕ್ಕೆ ಭಜನಾ ಕಾರ್ಯಕ್ರಮ, ಮಧ್ಯಾಹ್ನ 12 & ಸಂಜೆ 6 ಗಂಟೆಗೆ ಸಂಗೀತ ಕಾರ್ಯಕ್ರಮ ಜರುಗಿದೆ. ಅಂದು ತಿರುಪತಿ ಮಾದರಿಯಲ್ಲಿ ದೇವಸ್ಥಾನದಲ್ಲಿ ಸಪ್ತ ಬಾಗಿಲನ್ನು ನಿರ್ಮಿಸಿ ಪೂರ್ವಾಭಿಮುಖವಾಗಿ ವೈಕುಂಠ ದರ್ಶನಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಲು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಸಹ ಕಾರ್ಯದರ್ಶಿ ಶಿವು ಗೋಪಾಲಪೇಟ್, ಸಂಘಟನಾ ಕಾರ್ಯದರ್ಶಿ ಮಂಜುನಾಥ ಕುಡಿಕಲ್, ಸಹ ಕಾರ್ಯದರ್ಶಿ ಪಾಂಡುರಂಗ ಮುಷ್ಟಿಪಲ್ಲಿ, ಖಜಾಂಚಿ ಹೇಮರಾಜ ಕಡೆಕುಂಟ್ಲಾ, ಉಪಾಧ್ಯಕ್ಷ ವೆಂಕಟೇಶ ಕಡಬನೂರ ಇದ್ದರು‌.

ಬಿಲ್ ಪಾಸ್ ಮಾಡಲು ಲಂಚ ಪಡೆಯುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಗಳು

ಧನಕರ್‌ಗೆ ಕರೆ ಮಾಡಿ ನಾನೂ 20 ವರ್ಷಗಳಿಂದ ಅವಮಾನ ಅನುಭವಿಸಿದ್ದೇನೆ, ಬೇಸರಿಸಬೇಡಿ ಎಂದ ಮೋದಿ

ಕೇಂದ್ರ ಗೃಹ ಸಚಿವ ಅಮಿತ್‌ ಶಾರನ್ನನು ಭೇಟಿಯಾಗಿ ಪರಿಹಾರಕ್ಕಾಗಿ ಮನವಿ ಮಾಡಿದ ಸಿಎಂ ಸಿದ್ದರಾಮಯ್ಯ

- Advertisement -

Latest Posts

Don't Miss