state news
ಬೆಂಗಳೂರು(ಫೆ.18): ಮೇಲುಕೋಟೆಯ ಶ್ರೀ ಚಲುವನಾರಾಯಣ ಸ್ವಾಮಿ ವೈರಮುಡಿ ಬ್ರಹ್ಮೋತ್ಸವವು ಮಾಚ್೯ ೨೭ ರಿಂದ ಏಪ್ರಿಲ್ ೮ ರವರೆಗೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ: ಹೆಚ್ ಎನ್ ಗೋಪಾಲಕೃಷ್ಣ ಅವರು ತಿಳಿಸಿದರು.
ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪರ‍್ವಸಿದ್ಧತಾ ಸಭೆ ನಡೆಸಿ ಮಾತನಾಡಿದರು. ಮಾ. ೨೭ ರಿಂದ ಏ.೮ ರವರೆಗೆ ನಡೆಯುವ ಎಲ್ಲಾ ಕರ‍್ಯಕ್ರಮಗಳು ಅಚ್ಚುಕಟ್ಟಾಗಿ ನಡೆಯಬೇಕು. ಅಧಿಕಾರಿಗಳು ಇದಕ್ಕೆ ಬೇಕಿರುವ ಪರ‍್ವಸಿದ್ಧತೆಗಳನ್ನು ಮಾಡಿಕೊಳ್ಳಿ ಎಂದರು.
ಏ.೧ ರಂದು ವೈರಮುಡಿ ಕಿರೀಟ ಧಾರಣೆ ಮಹೋತ್ಸವಕ್ಕೆ ಕಿರೀಟವನ್ನು ಜಿಲ್ಲಾಖಜಾನೆಯಿಂದ ಮೇಲುಕೋಟೆಗೆ ತೆಗೆದುಕೊಂಡು ಹೋಗುವಾಗ ಮರ‍್ಗದಲ್ಲಿ ಗ್ರಾಮಸ್ಥರು ಪೂಜೆ ಸಲ್ಲಿಸುತ್ತಾರೆ. ಇದಕ್ಕೆ ಸೂಕ್ತ ರೂಟ್ ಮ್ಯಾಪ್ ಹಾಗೂ ಭದ್ರತಾ ವ್ಯವಸ್ಥೆಯಾಗಬೇಕು ಎಂದರು.
ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದ ಲಕ್ಷಾಂತರ ಭಕ್ತಾಧಿಗಳು ಕರ‍್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಭಕ್ತಾಧಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯಾಗಬೇಕು. ಹೆಚ್ಚು ಜನ ಸೇರುವ ವಾಹನ ಪರ‍್ಕಿಂಗ್ ಸ್ಥಳ ದೇವಸ್ಥಾನದ ಹತ್ತಿರ ಕುಡಿಯುವ ನೀರಿನ ಟ್ಯಾಂಕರ್ ಗಳ ವ್ಯವಸ್ಥೆ ಮಾಡಿ. ನೀರನ್ನು ಪ್ರತಿ ದಿನ ಪರೀಕ್ಷೆಗೆ ಒಳಪಡಿಸಿ ಎಂದರು.
ಆರೋಗ್ಯ ಇಲಾಖೆ ವತಿಯಿಂದ ಅಂಬ್ಯೂಲೆನ್ಸ್ ಗಳು ಹಾಗೂ ವೈದ್ಯಕೀಯ ಸಿಬ್ಬಂದಿಗಳ ನಿಯೋಜನೆಯಾಗಬೇಕು. ಕೊಳದ ಹತ್ತಿರ ನುರಿತ ಈಜುಗಾರರನ್ನು ನಿಯೋಜಿಸಿ ಎಂದರು.
ಮೇಲುಕೋಟೆಯ ಮುಖ್ಯ ರಸ್ತೆಗಳ ದುರಸ್ತಿ ಕರ‍್ಯಗಳು ಕೈಗೊಳ್ಳಿ, ಭಕ್ತಾಧಿಗಳ ಅಗತ್ಯತೆಗೆ ತಕ್ಕಂತೆ ಸಾರಿಗೆ ವ್ಯವಸ್ಥೆ, ಸಿ.ಸಿ ಟಿ.ವಿ, ನಿರಂತರ ವಿದ್ಯುತ್ ಸರಬರಾಜು ಹಾಗೂ ದೀಪಾಲಂಕಾರ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಮೇಲುಕೋಟೆಯಲ್ಲಿ ದಾಸೋಹ ಭವನದಲ್ಲಿ ಹೆಚ್ಚಿನ ಭಕ್ತಾಧಿಗಳು ಬರುವ ದಿನಗಳಂದು ದಸೋಹದ ವ್ಯವಸ್ಥೆ ಮಾಡುವಂತೆ ದೇವಸ್ಥಾನದ ಕರ‍್ಯನರ‍್ವಾಹಕ ಅಧಿಕಾರಿ ಮಹೇಶ್ ಅವರಿಗೆ ತಿಳಿಸಿದರು.
ವಾಹನ ಪರ‍್ಕಿಂಗ್ ಸ್ಥಳವನ್ನು ಸಮತಟ್ಟಾಗಿ ಯಾವುದೇ ಒಣ ಹುಲ್ಲು ಇಲ್ಲದಂತೆ ಸಿದ್ಧಪಡಿಸಿ. ಪರ‍್ಕಿಂಗ್ ಸ್ಥಳದಲ್ಲಿ ವಿದ್ಯುತ್ ದೀಪ (ಫೋಕಸ್ ಲೈಟ್) ವ್ಯವಸ್ಥೆ ಮಾಡಿ. ಭಕ್ತಾಧಿಗಳಿಗೆ ಗೋಚರಿಸುವಂತೆ ವ್ಯವಸ್ಥೆಗಳ ಬಗ್ಗೆ ಸೂಚನಾ ಪಲಕಗಳನ್ನು ಅಳವಡಿಸಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ಯತೀಶ್ ಅವರು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಡಾ.ಹೆಚ್ ಎಲ್ ನಾಗರಾಜು ಅವರು ಮಾತನಾಡಿ ತಾತ್ಕಲಿಕ ಶೌಚಾಲಯಗಳನ್ನು ೪ ರಿಂದ ೫ ಕಡೆ ಅಳವಡಿಸಿ. ತಾತ್ಕಲಿಕ ಶೌಚಾಲಯಗಳನ್ನು ಬಾಡಿಗೆ ಆಧಾರದ ಮೇಲೆ ಅಳವಡಿಸಲು ಹೆಚ್ಚಿನ ವೆಚ್ಚವಾದಲ್ಲಿ ಗ್ರಾಮ ಪಂಚಾಯತಿ ವತಿಯಿಂದ ಇರುವ ಸಮಯದಲ್ಲೇ ಶಾಶ್ವತವಾಗಿ ಸ್ಥಳಗಳನ್ನು ಗುರುತಿಸಿ ನರ‍್ಮಾಣ ಮಾಡಿ ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕರ‍್ಯನರ‍್ವಾಹಕ ಅಧಿಕಾರಿ ಶಾಂತ ಎಲ್ ಹುಲ್ಮನಿ, ಪಾಂಡವಪುರ ಉಪವಿಭಾಗಾಧಿಕಾರಿ ನಂದೀಶ್, ಪ್ರವಾಸೋದ್ಯಮ ಇಲಾಖೆ ಉಪನರ‍್ದೇಶಕಿ ಐಶ್ರ‍್ಯ, ಜಿಲ್ಲಾ ಆರೋಗ್ಯಾಧಿಕಾರಿ ಡಾ: ಧನಂಜಯ್, ವರ‍್ತಾಮತ್ತು ಸರ‍್ವಜನಿಕ ಸಂರ‍್ಕ ಇಲಾಖೆ ಸಹಾಯಕ ನರ‍್ದೇಶಕಿ ನರ‍್ಮಲ, ಮುಜರಾಯಿ ತಹಶೀಲ್ದಾರ್ ಉಮಾ, ದೇವಸ್ಥಾನದ ರ‍್ಚಕರಾದ ಕೃಷ್ಣಾಯ್ಯಾಂಗರ್ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ಬ್ರಹ್ಮೋತ್ಸವದ ವಿವರ ಮಾಚ್೯ ೨೭ ರಂದು ಶ್ರೀ ವೈರಮುಡಿ ಬ್ರಹ್ಮೋತ್ಸವಕ್ಕೆ ಅಂಕುರರ‍್ಪಣ(ಅಭಿಷೇಕ), ಮಾಚ್೯ ೨೮ ರಂದು ಕಲ್ಯಾಣೋತ್ಸವ -ಧಾರಾಮಹೋತ್ಸವ -ಅಧಿವಾಸನ- ರಕ್ಷಾ ಬಂಧನ – ಧ್ವಜ ಪ್ರತಿಷ್ಠೆ , ಮಾಚ್೯ ೨೯ ರಂದು ೧ನೇ ತಿರುನಾಳ್ ಧ್ವಜಾರೋಹಣ- ಭೇರಿತಾಡನ- ತಿರುಪ್ಪರೈ – ಹಂಸವಾಹನ -ಯಾಗಶಾಲಾ ಪ್ರವೇಶ, ಮಾಚ್೯ ೩೦ ರಂದು ೨ನೇ ತಿರುನಾಳ್ – ಶ್ರೀರಾಮನವಮಿ -ಶೇಷವಾಹನ ಪಡಿಯೇತ್ತ, ಮಾಚ್೯ ೩೧ ರಂದು ೩ನೇ ತಿರುನಾಳ್- ನಾಗವಲ್ಲಿ ಮಹೋತ್ಸವ- ನರಾಂಧೋಳಿಕಾರೋಹಣ -ಚಂದ್ರಮಂಡಲ ವಾಹನ -ಪಡಿಯೇತ್ತ, ಏಪ್ರಿಲ್ ೧ ರಂದು ೪ನೇ ತಿರುನಾಳ್- ಶ್ರೀ ವೈರಮುಡಿ ಕಿರೀಟಧಾರಣ ಮಹೋತ್ಸವ- ಪಡೆಯೇತ್ತ, ಏಪ್ರಿಲ್ ೨ ರಂದು ೫ನೇ ತಿರುನಾಳ್ – ಪ್ರಹ್ಲಾದ ಪರಿಪಾಲನ- ಗರುಡವಾಹನ- ವಿಶೇಷ ಪಡಿಯೇತ್ತ, ಏಪ್ರಿಲ್ ೩ ರಂದು ೬ನೇ ತಿರುನಾಳ್-ಗಜೇಂದ್ರ ಮೋಕ್ಷ -ಅನೆವಸನ್ತ-ಕುದುರೆ ವಾಹನ -ಆನೆ ವಾಹನ ವಿಶೇಷ ಪಡಿಯೇತ್ತ, ಏಪ್ರಿಲ್ ೪ರಂದು ೭ನೇ ತಿರುನಾಳ್ – ಶ್ರೀ ಮನ್ಮಹಾರಥೋತ್ಸವ, ಏಪ್ರಿಲ್ ೫ ರಂದು ೮ನೇ ತಿರುನಾಳ್ – ಪಂಗುನ್ಯುತ್ತರಮ್ – ತೆಪ್ಪೋತ್ಸವ – ಡೋಲೋತ್ಸವ ಕುದುರೆ ವಾಹನ – ಕಳ್ಳರ ಸುಲಿಗೆ, ಏಪ್ರಿಲ್ ೬ ರಂದು ೯ನೇ ತಿರುನಾಳ್ – ಸಂಧಾನ ಸೇವೆ – ಚರ‍್ಣಾಭಿಷೇಕ – ಅವಭೃಥ – ಪಟ್ಟಾಭಿಷೇಕ ಪುಷ್ಪಮಂಟಪಾರೋಹಣ – ಸಮರಭೂಪಾಲ ವಾಹನ – ಪಡಿಮಾಲೆ – ಪರ‍್ಣಾಹುತಿ, ಏಪ್ರಿಲ್ ೭ ರಂದು ೧೦ನೇ ತಿರುನಾಳ್ – ಶ್ರೀ ನಾರಾಯಣ ಸ್ವಾಮಿಗೆ ಮಹಾಭಿಷೇಕ – ಪುಷ್ಪಯಾಗ – ಕತ್ತಲು ಪ್ರದಕ್ಷಿಣೆ – ಹನುಮಂತವಾಹನ – ಉದ್ಘಾಸನ ಪ್ರಬಂಧ, ಏಪ್ರಿಲ್ ೮ ರಂದು ಶ್ರೀ ಅಮ್ಮನವರಿಗೆ ಶ್ರೀ ಯೋಗನರಸಿಂಹಸ್ವಾಮಿಗೆ ಮಹಾಭಿಷೇಕ- ಶರ‍್ತಿಸೇವೆ ಕೊಡೆ ತಿರುನಾಳ್ ಉತ್ಸವ ನಡೆಯಲಿ