Political News: ಈಗ ಉಡುಪಿ ಜಿಲ್ಲೆಗೂ ವಂದೇ ಭಾರತ್ ರೈಲು ಬರಲು ಸಜ್ಜಾಗಿದೆ. ಇನ್ನು ನೀವು ಉಡುಪಿಯಿಂದ ಬೆಂಗಳೂರಿಗೆ ಆರಾಮವಾಗಿ ವಂದೇ ಭಾರತ್ ರೈಲಿನಲ್ಲಿ ಸಂಚರಿಸಬಹುದು.
ಈ ಬಗ್ಗೆ ಬಿಜೆಪಿ ನಾಯಕ ಸುನಿಲ್ ಕುಮಾರ್ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ. ಕರಾವಳಿ ಜನರ ಬೇಡಿಕೆಯಾದ ವಂದೇ ಭಾರತ್ ರೈಲನ್ನು ಮಂಜೂರು ಮಾಡಿದ ಪ್ರಧಾನಿ ನರೇಂದ್ರ ಮೊದಿ ಜಿ ಯವರಿಗೂ ಹಾಗೂ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನ್ ವೈಶ್ಣವ್ ಅವರಿಗೂ ಮತ್ತು ಈ ರೈಲನ್ನು ಉಡುಪಿಗೆ ತರುವಲ್ಲಿ ವಿಶೇಷ ಮುತುವರ್ಜಿವಹಿಸಿದ ಕೇಂದ್ರ ಸಚಿವರಾದ ಶ್ರೀ ಶೋಭಾ ಕರಂದ್ಲಾಜೆಯವರಿಗೂ ಹೃತ್ಪೂರ್ವಕ ಅಭಿನಂಧನೆಗಳು ಎಂದು ಬಿಜೆಪಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮತ್ತು ಪ್ರಧಾನಿ ಮೋದಿಯವರಿಗೆ ಸುನಿಲ್ ಕುಮಾರ್ ಧನ್ಯವಾದ ತಿಳಿಸಿದ್ದಾರೆ.
ಕರಾವಳಿ ಜನರ ಬೇಡಿಕೆಯಾದ ವಂದೇ ಭಾರತ್ ರೈಲನ್ನು ಮಂಜೂರು ಮಾಡಿದ ಪ್ರಧಾನಿ ನರೇಂದ್ರ ಮೊದಿ ಜಿ ಯವರಿಗೂ ಹಾಗೂ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನ್ ವೈಶ್ಣವ್ ಅವರಿಗೂ ಮತ್ತು ಈ ರೈಲನ್ನು ಉಡುಪಿಗೆ ತರುವಲ್ಲಿ ವಿಶೇಷ ಮುತುವರ್ಜಿವಹಿಸಿದ ಕೇಂದ್ರ ಸಚಿವರಾದ ಶ್ರೀ ಶೋಭಾ ಕರಂದ್ಲಾಜೆಯವರಿಗೂ ಹೃತ್ಪೂರ್ವಕ ಅಭಿನಂಧನೆಗಳು. @ShobhaBJP @BJP4Karnataka pic.twitter.com/o1pnGNrg12
— Sunil Kumar Karkala (@karkalasunil) December 28, 2023

