Saturday, October 19, 2024

Latest Posts

ಜೈಲಿನ ಖೈದಿಗಳ ಹಕ್ಕಿನ ಬಗ್ಗೆ ವಿವಿಧ ಜಾಗೃತಿ ಕಾರ್ಯಕ್ರಮ: ನ್ಯಾ. ಬಿ.ಜಿ.ರಮಾ

- Advertisement -

ಮಂಡ್ಯ: ಜೈಲಿನ ಖೈದಿಗಳಿಗೂ ಸಹ ಹಕ್ಕುಗಳಿವೆ. ಜೈಲಿನ ಖೈದಿಗಳ ಹಕ್ಕಿನ ಬಗ್ಗೆ ಜಾಗೃತಿ ಮೂಡಿಸಲು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾದ ಬಿ.ಜಿ ರಮಾ ಅವರು ತಿಳಿಸಿದರು.

ಗರ್ಭಿಣಿ ಉದ್ಯೋಗಿಯಾಗಿದ್ದರೆ ಈ ವಿಷಯಗಳನ್ನು ನೆನಪಿನಲ್ಲಿಡ ಬೇಕು..!

ಅವರು ಇಂದು ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಜಿಲ್ಲಾಡಳಿತ ಜಿಲ್ಲಾ ಪಂಚಾಯತ್, ಪೊಲೀಸ್ ಇಲಾಖೆ, ಜಿಲ್ಲಾ ಕಾರ್ಯಗ್ರಹ ಮತ್ತು ಸುಧಾರಣಾ ಸೇವೆ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಹಾಗೂ ಇತರೆ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಹಕ್ ಹಮಾರಾ ಬಿ ಹೈ ಕಾನೂನು ಅರಿವು ಕಾರ್ಯಕ್ರಮ ಹಾಗೂ ಕಾನೂನು ಅರಿವಿನ ಮೂಲಕ ನಾಗರೀಕರ ಸಬಲೀಕರಣ ಹಾಗೂ ಜಾಥಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರತಿ ವರ್ಷ ನವೆಂಬರ್ 09 ರಂದು ಕಾನೂನು ಸೇವೆಗಳ ದಿನಾಚರಣೆಯನ್ನು ಆಚರಣೆ ಮಾಡುತ್ತೇವೆ. ಸಾರ್ವಜನಿಕರಲ್ಲಿ ಕಾನೂನಿನ ಬಗ್ಗೆ ಅರಿವು ಮೂಡಿಸುವುದು ಕಾನೂನು ಸೇವೆಗಳ ದಿನಾಚರಣೆಯ ಮುಖ್ಯ ಉದ್ದೇಶವಾಗಿರುತ್ತದೆ. ಕಾನೂನಿನ ಅರಿವು ಪ್ರತಿ ಹಳ್ಳಿಯ ಸಾರ್ವಜನಿಕರಿಗೂ ಸಹ ತಿಳಿಯಬೇಕು ಎಂಬುವಂತಹ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದೇವೆ ಎಂದರು.

ನಿಮ್ಮ ಚರ್ಮದ ಮೇಲಿನ ಕಪ್ಪು ಕಲೆಗಳನ್ನು ಹೋಗಲಾಡಿಸಲು ಬಯಸುವಿರಾ..? ಟೊಮೆಟೊಗಳನ್ನು ಹೀಗೆ ಬಳಸಿ..

ಹಕ್ ಅಮರ ಬಿ ಹೈ ಎನ್ನುವ ಕಾರ್ಯಕ್ರಮದ ಅಡಿಯಲ್ಲಿ ಜೈಲಿನಲ್ಲಿರುವ ಕೈದಿಗಳ ಹಕ್ಕುಗಳ ಕುರಿತು ಸಾರ್ವಜನಿಕರಿಗೆ  ಅರಿವು ಮೂಡಿಸುವುದು, ಅವರ ಹಕ್ಕುಗಳು ರಕ್ಷಣೆ ಅಥವಾ ಉಲ್ಲಂಘನೆ ಆಗುತ್ತಿರುವುದೇ ಎಂಬುವುದನ್ನು ಅರಿವು ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನಳಿನಿ ಕುಮಾರಿ,  ಜಿಲ್ಲಾಧಿಕಾರಿ ಡಾ.ಎಚ್ ಎನ್ ಗೋಪಾಲಕೃಷ್ಣ, ಜಿ.ಪಂ.ಸಿ.ಇ.ಒ. ಶಾಂತ ಎಲ್ ಹುಲ್ಮನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್, ಮಿಮ್ಸ್ ನಿರ್ದೇಶಕ ಡಾ. ಮಹೇಂದ್ರ, ವಕೀಲ ಸಂಘದ  ಅಧ್ಯಕ್ಷ ರಾಜೇಂದ್ರ, ಕಾರ್ಯದರ್ಶಿ ಸಿದ್ದರಾಜು, ಖಜಾಂಚಿ ಬಿ.ಎಂ ಮಹೇಶ್  ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

- Advertisement -

Latest Posts

Don't Miss