Friday, April 4, 2025

Latest Posts

ಚಿಕ್ಕೋಡಿಯಲ್ಲಿ ವರುಣನ ಆರ್ಭಟ: 4,500 ಕುಟುಂಬಳು ಕಾಳಜಿ ಕೇಂದ್ರಕ್ಕೆ ಶಿಫ್ಟ್

- Advertisement -

Chikkodi News: ಚಿಕ್ಕೋಡಿ: ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳ ಮಳೆಯಿಂದಾಗಿ, ಬೆಳಗಾವಿ ಜಿಲ್ಲೆಯ ಸಪ್ತ ನದಿ ಪಾತ್ರದಲ್ಲಿ ಪ್ರವಾಹ ಸೃಷ್ಟಿಯಾಗಿದೆ.

ಜನಜೀವನ ಅಸ್ತವ್ಯಸ್ತವಾಗಿದ್ದು, ಕಾಳಜಿ ಕೇಂದ್ರಕ್ಕೆ 7 ತಾಲೂಕಿನಲ್ಲಿ 4,500 ಕುಟುಂಬಗಳನ್ನು ಶಿಫ್ಟ್ ಮಾಡಲಾಗಿದೆ. ಕೃಷ್ಣಾ, ಘಟಪ್ರಭಾ, ವೇದಗಂಗಾ, ದೂಧಗಂಗಾ, ಮಾರ್ಕಂಡೇಯ, ಹೀರಣ್ಯಕೇಶಿ ನದಿಗಳ ಆರ್ಭಟದಿಂದ ಜನ ಕಂಗಾಲಾಗಿದ್ದಾರೆ.

ಅಥಣಿ, ಕಾಗವಾಡ, ಗೋಕಾಕ, ಮೂಡಲಗಿ, ರಾಯಬಾಗ, ನಿಪ್ಪಾಣಿ, ಚಿಕ್ಕೋಡಿ ತಾಲೂಕಿನಲ್ಲಿ ಹಾನಿಯುಂಟಾಗಿದ್ದು, 57 ಕಾಳಜಿ ಕೇಂದ್ರದಲ್ಲಿ 13500 ಜನರನ್ನು ಜಿಲ್ಲಾಡಳಿತ ಶಿಫ್ಟ್ ಮಾಡಿದೆ. ಈವರೆಗೂ 700 ಮನೆಗಳಿಗೆ ಮಳೆಯಿಂದ ಹಾನಿಯಯುಂಟಾಗಿದ್ದು, ಇನ್ನೂ 38 ಸೇತುವೆಗಳ ಸಂಪರ್ಕ ಕಡಿತಗೊಂಡಿದೆ.

ಮಹಾರಾಷ್ಟ್ರ, ಬೆಳಗಾವಿ ಜಿಲ್ಲೆ ಡ್ಯಾಂ ಶೇಕಡಾ 90 ರಷ್ಟು ಭರ್ತಿಯಾಗಿದ್ದು, ಈಗ ಮಳೆ ಜೊತೆಗೆ ಡ್ಯಾಂನಿಂದ ಬಿಡುವ ನೀರಿನಿಂದಲೂ ಪ್ರವಾಹದ ಆತಂಕ ಉಂಟಾಗಿದೆ.

- Advertisement -

Latest Posts

Don't Miss