Tuesday, May 28, 2024

Latest Posts

ದೇಶದ ಆರ್ಥಿಕ ವ್ಯವಸ್ಥೆ ಬುಡಮೇಲು ಮಾಡಿದ ಮೋದಿ: ವೀರಪ್ಪ ಮೊಯಿಲಿ ಆರೋಪ

- Advertisement -

Dharwad News: ಧಾರವಾಡ,ಮೇ 01: ಪ್ರಧಾನಿ ಮೋದಿ ಒಬ್ಬ ಸುಳ್ಳುಗಾರ, ಪ್ರಚಾರಪ್ರಿಯ ಮತ್ತು ಜೋಕರ್. ಪ್ರಧಾನಿಯಾಗಲು ಅನರ್ಹವಾದ ವ್ಯಕ್ತಿ. ದೇಶದ ಅರ್ಥ ವ್ಯವಸ್ಥೆ ಹಾಳು ಮಾಡಿ, ದೇಶದ ಆರ್ಥಿಕ ವ್ಯವಸ್ಥೆಯನ್ನೆ ಬುಡಮೇಲು ಮಾಡಿದ್ದಾನೆ ಎಂದು ಮಾಜಿ ಮುಖ್ಯಮಂತ್ರಿ ಎಂ ವೀರಪ್ಪ ಮೊಯಿಲಿ ಅವರು ಹರಿಹಾಯ್ದರು.

ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ವಿನೋದ್‌ ಅಸೂಟಿ ಅವರ ಪರ ಪ್ರಚಾರದ ಅಂಗವಾಗಿ ಹುಬ್ಬಳ್ಳಿ ಪೂರ್ವ ಕ್ಷೇತ್ರದ ಗಂಗಾಧರ ನಗರದ (ಸೆಟಲಮೆಂಟ್- ಕೆಡಿಓ ಮೈದಾನ) ಹನುಮಾನ ದೇವಸ್ಥಾನದಿಂದ – ಬಂಕಾಪೂರ ಚೌಕವರೆಗೆ ಹಮ್ಮಿಕೊಳ್ಳಲಾಗಿದ್ದ ಬೃಹತ್ ರೋಡ್ ಶೋನಲ್ಲಿ ಮತಯಾಚಿಸಿ ಮಾತನಾಡಿದರು.

ಅಮಿತ್ ಶಾ ವಿರುದ್ಧ ಹರಿಹಾಯ್ದ ಮೊಯಿಲಿ: ಅಮಿತ್ ಶಾ ಒಬ್ಬ ನರಹಂತಕ. ಪ್ರಲ್ಹಾದ್ ಜೋಶಿ ನರೇಂದ್ರ ಮೋದಿಯ ಬಾಲದಂತೆ, ಕಳಸಾ-ಬಂಡೂರಿ, ಮಹದಾಯಿ 2019 ರಲ್ಲಿ ಜಾರಿಗೆ ತರುತ್ತೇನೆ ಎಂದು ಬಿಜೆಪಿಯ ಎಲ್ಲಾ ನಾಯಕರು ಹೇಳಿದ್ದರು. ರಕ್ತದಲ್ಲಿ ಪತ್ರ ಬರೆದುಕೊಡುತ್ತೇನೆ ಎಂದು ಯಡಿಯೂರಪ್ಪನವರು ಹೇಳಿದ್ದರು. ಆದರೆ ಜೋಶಿಯವರಿಗೆ ಮಹದಾಯಿಗೆ ಪರಿಸರ ಇಲಾಖೆಯ ಅನುಮತಿ ಪಡೆಯಲು ಆಗಲಿಲ್ಲ. ಇಂತಹ ವ್ಯಕ್ತಿಯನ್ನು ಇಪ್ಪತ್ತು ವರ್ಷಗಳಿಂದ ಚುನಾಯಿಸಿ ತಪ್ಪು ಮಾಡಿದ್ದೀರಿ, ಈ ಬಾರಿ ವಿನೋದ ಅಸೂಟಿಯವರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.

ವಿನೋದ ಅಸೂಟಿ ಗೆಲ್ಲಿಸಿ
ರೋಡ್‌ ಶೋನಲ್ಲಿ ಮಾತನಾಡಿದ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಅವರು, ನಮ್ಮ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಕೊಟ್ಟ ಭರವಸೆಗಳನ್ನು ಹತ್ತು ತಿಂಗಳಲ್ಲಿ ಈಡೇರಿಸಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಕ್ರಮಸಂಖ್ಯೆ 2 ಕ್ಕೆ ಮತಚಲಾಯಿಸಿ ವಿನೋದ ಅಸೂಟಿಯವರನ್ನು ಗೆಲ್ಲಿಸಿ ಎಂದು ವಿನಂತಿಸಿಕೊಂಡರು.

ರೋಡ್‌ ಶೋ ಉದ್ದಕ್ಕೂ ಸಾವಿರಾರು ಕಾರ್ಯಕರ್ತರು, ಮಹಿಳೆಯರು ಕಾಂಗ್ರೆಸ್ ಪರ ಜಯಘೋಷಗಳನ್ನು ಕೂಗುತ್ತಾ ಸಾಗಿದರು.

ಈ ಸಂದರ್ಭದಲ್ಲಿ ಅಭ್ಯರ್ಥಿ ಶ್ರೀ ವಿನೋದ ಅಸೂಟಿ, ಶಾಸಕರಾದ ಶ್ರೀ ಪ್ರಸಾದ ಅಬ್ಬಯ್ಯ, ಸದಾನಂದ ಡಂಗನವರ, ನಗರಸಭೆ ಸದಸ್ಯರಾದ ಮಂಜುಳಾ ಜಾಧವ, ಮೋಹನ ಅಸುಂಡಿ, ಅನ್ವರ್ ಮುಧೋಳ, ಶಕ್ತಿ ಮುದ್ದೇಬಿಹಾಳ, ಮೈಮೂದ್ ಕೋಳೂರ, ಶ್ಯಾಮ್ ಜಾಧವ್, ಪಿ ಪ್ರಭಾಕರ್ ಪಕ್ಷದ ಮುಖಂಡರು, ಕ್ಷೇತ್ರದ ಹಿರಿಯರು, ಮಹಿಳೆಯರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

ಇವರ ಚಟಕ್ಕೆ ವಿಡಿಯೋ ಮಾಡಿಕೊಳ್ಳುತ್ತಾರೆ. ಇಂಥವರನ್ನ ಭಗವಂತನೂ ಕ್ಷಮಿಸಲ್ಲ: ಡಿ.ಕೆ.ಶಿವಕುಮಾರ್

ಕೆಲಸ ಮಾಡಿದ್ದೇನೆ ಓಟು ಕೊಡಿ ಎನ್ನುವ ಬದಲು ಕಾಂಗ್ರೆಸ್ ಬಗ್ಗೆ ಅಪಪ್ರಚಾರ ಮಾಡಿ ಓಟು ಕೇಳುತ್ತಾರೆ: ಸಿಎಂ

ರಾಮಮಂದಿರಕ್ಕೆ ನಾವೂ ಇಟ್ಟಿಗೆ ಕೊಟ್ಟಿದ್ದೀವಿ, ಆದ್ರೆ ಬಿಜೆಪಿಯವರು ಧರ್ಮಗಳ ಮಧ್ಯೆ ತಂದಿಡುತ್ತಿದ್ದಾರೆ: ನಟ ವಿಜಿ

- Advertisement -

Latest Posts

Don't Miss