ಬೆಂಗಳೂರು:ಆಂಗ್ಲರ ನಾಡಲ್ಲಿ ರನ್ ಮಷೀನ್ ವಿರಾಟ್ ಕೊಹ್ಲಿಯ ಕಳಪೆ ಪ್ರದರ್ಶನ ಮುಂದುವರೆದಿದೆ.
ಚೇಸಿಂಗ್ ನಲ್ಲಿ ಕಿಂಗ್ ಎನಿಸಿಕೊಂಡಿದ್ದ ವಿರಾಟ್ ನಿನ್ನೆ ನಡೆದ 3ನೇ ಟಿ20 ಪಂದ್ಯದಲ್ಲಿ 6 ಎಸೆತಗಳಲ್ಲಿ 1 ಸಿಕ್ಸರ್ 1 ಬೌಂಡರಿ ಸೇರಿ 11 ರನ್ ಹೊಡೆದೆರು. ತುಂಬ ಅಗತ್ಯವಿದ್ದ ಸಂದರ್ಭದಲ್ಲೆ ವಿರಾಟ್ ಕೊಹ್ಲಿ ಪೆವಿಲಿಯನ್ ಸೇರಿದ್ದು ತಂಡ ಮತ್ತಷ್ಟು ಇಕ್ಕಟ್ಟಿನಲ್ಲಿ ಸಿಲುಕಿತು.
ಇದೀಗ ಕೊಹ್ಲಿಯನ್ನು ತಂಡದಿಂದ ಕೈಬಿಡುವಂತೆ ಅನೇಕ ಮಂದಿ ಧ್ವನಿಗೂಡಿಸಿದ್ದಾರೆ. ಈ ಸಾಲಿಗೆ ತಂಡದ ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ಕೂಡ ಸೇರಿದ್ದಾರೆ.
ಅದೊಂದು ಸಮಯವಿತ್ತು. ಕಳಪೆ ಫಾರ್ಮ್ ನಿಂದ ಬಳಲುತ್ತಿದ್ದ ಆಟಗಾರರನ್ನು ತಂಡದಿಂದ ಮುಲಾಜಿಲ್ಲದೇ ಕೈಬಿಡಲಾಗುತ್ತಿತ್ತು. ಆತ ಎಷ್ಟೆ ಖ್ಯಾತಿಯನ್ನು ಪಡೆದುಕೊಂಡಿರಲಿ.
ಸೌರವ್,ಸೆಹ್ವಾಗ್, ಯುವರಾಜ್, ಜಹೀರ್ ಭಜ್ಜಿ ಇವರೆಲ್ಲರನ್ನು ಕೈಬಿಡಲಾಗಿತ್ತು. ಅವರೆಲ್ಲಾ ಮತ್ತೆ ದೇಸಿ ಟೂರ್ನಿ ಆಡಿ ಮತ್ತೆ ತಂಡಕ್ಕೆ ಮರಳಿದ್ದಾರೆ ಎಂದು ವೆಂಕಟೇಶ್ ಪ್ರಸಾದ್ ಟ್ವೀಟ್ ಮಾಡಿದ್ದಾರೆ.
ಇನ್ನು ಮಾಜಿ ನಾಯಕ ಕಪಿಲ್ ದೇವ್ ವಿರಾಟ್ ಕುರಿತು, ವಿರಾಟ್ ಕಳೆದ 3 ವರ್ಷಗಳಿಂದ ದೊಡ್ಡ ಇನ್ನಿಂಗ್ಸ್ ಆಡಲು ಹೋರಾಡುತ್ತಿದ್ದಾರೆ. ಭಾರತೀಯ ತಂಡದ ಆಡಳಿತ ಮಂಡಳಿ ಯುವ ಆಟಗಾರರಿಗೆ ಅವಕಾಶ ಕೊಡದಿದ್ದರೆ ಅವರಿಗೆ ಅನ್ಯಾಯ ಮಾಡಿದಂತಾಗುತ್ತದೆ.
ಫಾರ್ಮ್ ನಲ್ಲಿ ಇರುವವರಿಗೆ ಅವಕಾಶ ಕೊಡಿ.ಫಾರ್ಮ್ ಗೆ ಮರಳಲು ಹೋರಾಡುತ್ತಿರುವ ವಿರಾಟ್ ಕೊಹ್ಲಿಯನ್ನು ಕೈಬಿಡಿ ಎಂದು ಹೇಳಿದ್ದಾರೆ.

