Tuesday, October 22, 2024

Latest Posts

ಹೃದಯಾಘಾತದಿಂದ ಹಿರಿಯ ಟಿವಿ ಪತ್ರಕರ್ತ ಕಮಾಲ್ ಖಾನ್ ನಿಧನ

- Advertisement -

ಕಮಾಲ್‌ಖಾನ್ ಹಿರಿಯ ಟಿವಿ ಪತ್ರಕರ್ತರಾಗಿದ್ದರು, ರಾಮನಾಥ್ ಗೋಯೆಂಕಾ ಪ್ರಶಸ್ತಿ ಮತ್ತು ಗಣೇಶ್ ಶಂಕರ್ ವಿದ್ಯಾರ್ಥಿ ಪ್ರಶಸ್ತಿಯನ್ನು ಸಹ ಪಡೆದಿದ್ದರು ಮುಖ್ಯ ಸುದ್ದಿ ವಾಹಿನಿ ಎನ್‌ಡಿಟಿವಿಯಲ್ಲಿ ಕಾರ್ಯನಿರ್ವಾಹಕಾ ಸಂಪಾದಕರಾಗಿ ಕೆಲಸ ಮಾಡುತ್ತಿದ್ದರು. ಅವರು ತೀವ್ರ ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ.61 ವಯಸ್ಸಾಗಿದ್ದ ಖಾನ್‌ರವರು ಉತ್ತರಪ್ರದೇಶದ ಲಖನೌದಲ್ಲಿರುವ ಬಟ್ಲರ್ ಕಾಲೋನಿಯ ನಿವಾಸದಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.

ಎನ್‌ಡಿಟಿವಿ ಖಾನ್ ರವರ ನಿಧನಕ್ಕೆ ತೀರ್ವ ಸಂತಾಪವನ್ನು ಸೂಚಿಸಿದ್ದು ಎನ್‌ಡಿಟಿವಿ ಕುಟುಂಬಕ್ಕೆ ಭರಿಸಲಾಗದ ನಷ್ಟ ಎಂದು ವಾಹಿನಿ ಹೇಳಿಕೆಯಲ್ಲಿ ತಿಳಿಸಿದೆ. ಇನ್ನು ಹಲವಾರು ಮಾಧ್ಯಮದವರು ಮತ್ತು ರಾಜಕಾರಣಿಗಳು ಖಾನ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

- Advertisement -

Latest Posts

Don't Miss