Hubballi News: ಹುಬ್ಬಳ್ಳಿ: ಸೈಬರ್ ವಂಚನೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಸೊಶೀಯಲ್ ಮಿಡಿಯಾ ಬಳಕೆ ಮಾಡಿಕೊಂಡು ವಂಚನೆ ಮಾಡುವ ವಂಚಕರ ಜಾಲ ದಿನಕಳೆದಂತೆ ವೃದ್ಧಿಸುತ್ತಲೇ ಇದೆ. ವಿಡಿಯೋ ಕಾಲ್ ಮೂಲಕ ವ್ಯಕ್ತಿ ಮುಖವನ್ನು ಸೆರೆ ಹಿಡಿದು ಬ್ಲಾಕ್ ಮೇಲ್ ಮಾಡುವ ವಂಚಕರು ಜನರನ್ನು ವಂಚನೆ ಮಾಡುತ್ತಿದ್ದಾರೆ.
ಹುಬ್ಬಳ್ಳಿಯ ಓರ್ವ ವ್ಯಕ್ತಿಗೆ ಅಪರಿಚಿತ ಮಹಿಳೆಯೊಬ್ಬಳು, ಸೋಶಿಯಲ್ ಮೀಡಿಯಾ ಮೂಲಕ ಪರಿಚಯ ಮಾಡಿಕೊಂಡು ವಿಡಿಯೋ ಕಾಲ್ ಮಾಡಿ, ಸುಮಾರು 2.40 ಲಕ್ಷ ವಂಚನೆ ಮಾಡಿದ್ದಾರೆ. ವಿಡಿಯೋ ಕಾಲ್ ಮಾಡಿ ನಗ್ನ ದೃಶ್ಯ ತೋರಿಸಿ, ನಂತರ ಪೊಲೀಸ್ ಹೆಸರಲ್ಲಿ ಹಾಗೂ ಯುಟೂಬರ್ ಹೆಸರಲ್ಲಿ ಬೆದರಿಕೆ ಹಾಕಿ, ನಾಲ್ಕು ಕಂತುಗಳಲ್ಲಿ ಸುಮಾರು 2.40 ಲಕ್ಷ ಹಣವನ್ನು ಹಾಕಿಸಿಕೊಂಡು ವಂಚನೆ ಮಾಡಿದ್ದಾರೆ. ವಂಚನೆಗೆ ಒಳಗಾದ ಹುಬ್ಬಳ್ಳಿಯ ವ್ಯಕ್ತಿ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇನ್ನೂ ದತ್ತಾತ್ರೇಯ ಎಂಬುವವರಿಗೆ ಸೋಶಿಯಲ್ ಮಿಡಿಯಾ ಮೂಲಕ ಪರಿಚಯ ಮಾಡಿಕೊಂಡು ವಿಡಿಯೋ ಕಾಲ್ ನಲ್ಲಿ ನಗ್ನ ದೃಶ್ಯಗಳನ್ನು ತೋರಿಸಿ ವಂಚನೆ ಮಾಡಿದ್ದಾರೆ. ವಿಡಿಯೋಗಳನ್ನು ನ್ಯೂಸ್ ಚಾನಲ್ ಗಳಿಗೆ ನೀಡುತ್ತೇನೆ. ನಿನ್ನ ಜೀವನ ಹಾಳು ಮಾಡುತ್ತೇನೆ ಎಂದು ವಂಚಕರು ಚಾಟಿಂಗ್ ಕೂಡ ಮಾಡಿದ್ದಾರೆ. ಅಲ್ಲದೇ ದೆಹಲಿ ಪೊಲೀಸರ ಹೆಸರಲ್ಲಿ ಮಾತನಾಡಿದ ವಂಚಕರು 2.40 ಲಕ್ಷ ಹಣವನ್ನು ಜಮಾ ಮಾಡಿಸಿಕೊಂಡು ವಂಚಿಸಿರುವುದು ಬೆಳಕಿಗೆ ಬಂದಿದೆ. ಈಗಾಗಲೇ ಸಾಕಷ್ಟು ಸೈಬರ್ ಕ್ರೈಮ್ ಪ್ರಕರಣ ನಡೆಯುತ್ತಿದ್ದರು ಕಡಿವಾಣ ಹಾಕಲು ಮಾತ್ರ ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ನ್ಯಾಯ ಕೊಡಿಸುವಂತೆ ವಂಚಕನ ಸ್ನೇಹಿತ ಮನವಿ ಮಾಡಿದ್ದಾನೆ.
ಒಟ್ಟಿನಲ್ಲಿ ಸೋಶಿಯಲ್ ಮಿಡಿಯಾ ಹೆಸರಿನಲ್ಲಿ ವಂಚನೆ ಮಾಡುವ ವಂಚಕರ ಜಾಲ ಸಕ್ರಿಯವಾಗಿದ್ದು, ಈ ಬಗ್ಗೆ ಪೊಲೀಸರು ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡುವ ಮೂಲಕ ಜನರಲ್ಲಿ ಅರಿವು ಮೂಡಿಸಬೇಕಿದೆ.
‘ಅನ್ನಭಾಗ್ಯ ಅಂತೀರಿ.. ನನಗೆ ರೇಷನ್ ಕಾರ್ಡೇ ಮಾಡಿ ಕೊಡ್ತಿಲ್ಲ.. ಏನ್ ಸ್ವಾಮಿ ಇದು?’
ಡಿಸಿಎಂ ಡಿಕೆಶಿ ಸಿಬಿಐ ತನಿಖೆ ಹಿಂಪಡೆದ ಬಗ್ಗೆ ಸಚಿವ ಸಂತೋಷ್ ಲಾಡ್ ಹೇಳಿದ್ದೇನು..?
‘ಮೋದಿ ವಿರುದ್ಧ ಹೇಳಿಕೆ ನೀಡಿದಷ್ಟು, ಮೋದಿಯವರ ಮೇಲೆ ಜನಾಶೀರ್ವಾದ ಹೆಚ್ಚಾಗುತ್ತೆ’