Political News: ಬೆಂಗಳೂರು: ಪಕ್ಷದ ರಾಜ್ಯಾಧ್ಯಕ್ಷನಾಗಿ ಜವಾಬ್ದಾರಿ ಸ್ವೀಕರಿಸಿದ ತರುವಾಯ ಬಿ.ವೈ.ವಿಜಯೇಂದ್ರ ಅವರು ಇಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಜನ್ಮದಿನವಾದ ಇಂದೇ ಅವರನ್ನು ಭೇಟಿಯಾಗಿ ಕೃತಜ್ಞತೆ ಸಮರ್ಪಿಸಿ ಆಶೀರ್ವಾದ ಪಡೆದರು. ಅಲ್ಲದೇ ಶುಭಾಶಯ ಕೋರಿದರು.

ಭಾರತೀಯ ಜನತಾ ಪಾರ್ಟಿಗೆ ಹೊಸ ಚೈತನ್ಯ ತುಂಬಲು ಯುವ ಪೀಳಿಗೆಯನ್ನು ಉತ್ತೇಜಿಸುತ್ತಿರುವ ಮಾನ್ಯ ನಡ್ಡಾ ಜೀ ಅವರು ನನ್ನ ಬಗ್ಗೆ ಇರಿಸಿರುವ ಅಚಲ ನಂಬಿಕೆಯ ನುಡಿಗಳು ಅದಮ್ಯ ಆತ್ಮವಿಶ್ವಾಸದ ಉತ್ಸಾಹ ಮೂಡಿಸುವುದರೊಂದಿಗೆ, ಬಹು ದೊಡ್ಡ ಹೊಣೆಗಾರಿಕೆಯನ್ನೂ ನೆನಪಿಸಿತು ಎಂದು ವಿಜಯೇಂದ್ರ ತಿಳಿಸಿದ್ದಾರೆ.
ವರಿಷ್ಠರು ಇರಿಸಿರುವ ನಿರೀಕ್ಷೆಯ ಗುರಿ ತಲುಪುವುದೇ ನನ್ನ ಮಹಾ ಸಂಕಲ್ಪವಾಗಿದೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಜಿ.ವಿ. ಅವರು ಉಪಸ್ಥಿತರಿದ್ದರು.
‘ನನ್ನ ವಯಸ್ಸು ಮಜಾ ಮಾಡುವ ವಯಸ್ಸಲ್ಲ. ಮತ್ತು ಮಜಾ ಮಾಡುವ ವ್ಯಕ್ತಿಯು ನಾನಲ್ಲ’




