ಬರ್ಮಿಂಗ್ ಹ್ಯಾಮ್: ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಭಾರತದ ಪದಕ ಬೇಟೆ ಮುಂದುವರೆದಿದೆ. ಮಂಗಳವಾರ ಪುರುಷರ 96 ಕೆಜಿ ವಿಭಾಗದಲ್ಲಿ ವಿಕಾಸ್ ಠಾಕೂರ್ ಮಹಿಳೆಯರ 71 ಕೆಜಿ ವಿಭಾಗದಲ್ಲಿ ಹರ್ಚಿಂದರ್ ಕೌರ್ ಪದಕಕ್ಕೆ ಮುತ್ತಿಕ್ಕಿದರು.
ವಿಕಾಸ್ 346 ಕೆಜಿ (ಸ್ನ್ಯಾಚ್ ನಲ್ಲಿ 155ಕೆಜಿ +ಕ್ಲೀನ್ ಅಂಡ್ ಜರ್ಕನಲ್ಲಿ 191ಕೆಜಿ) ಭಾರ ಎತ್ತಿ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ 3ನೇ ಪದಕ ಗೆದ್ದ ಸಾಧನೆ ಮಾಡಿದರು.
ಸವೊವಾ ದೇಶದ ಡಾನ್ ಒಪೆಲೊಚಿ 381 ಕೆಜಿ (171+210ಕೆಜಿ) ಚಿನ್ನ ಗೆದ್ದರೆ ಫಿಜಿಯ ರನಿಯೆಲಾ 381 ಕೆಜಿ ಭಾರ ೆತ್ತಿ ಕಂಚು ಜಯಿಸಿದರು. ವಿಕಾಸ್ ಗಿದು ಕ್ರೀಡಾಕೂಟದಲ್ಲಿ 2ನೇ ಬೆಳ್ಳಿ ಆಗಿದೆ. 2014ರ ಗ್ಲಾಸ್ಗೊ ಕ್ರೀಡಾಕೂಟದಲ್ಲಿ ಬೆಳ್ಳಿ ಗೆದ್ದಿದ್ದರು. 2018ರ ಕೂಟದಲ್ಲಿ ಕಂಚು ಪಡೆದಿದ್ದರು.
ಹರಿದ್ವಾರ್ ಅವರಿಗೆ ಪದಕ ಗೆಲ್ಲಲು ಅದೃಷ್ಟ ಜೊತೆಗಿತ್ತು.ಚಿನ್ನ ಗೆಲ್ಲುವ ಫೇವರಿಟ್ ಎನಿಸಿದ್ದ ನೈಜಿರಿಯಾದ ಜಾಯ್ ಏಜೆ ಕ್ಲೀನ್ ಅಂಡ್ ಜರ್ಕನ ಮೂರು ಯತ್ನಗಳಲ್ಲಿ ವೈಫಲ್ಯ ಅನುಭವಿಸಿದ್ದರು.
ಇಂಗ್ಲೆಂಡ್ ನ ಸಾರಾ ಸಾರಾ ಡೇವಿಸ್ ಒಟ್ಟು 299 ಕೆಜಿ ಭಾರ ಎತ್ತಿ ಚಿನ್ನ ಗೆದ್ದರು. ಹರಿಚಂದರ್ 212 ಕೆಜಿ (ಸ್ನಾಚ್ ನಲ್ಲಿ 93 ಕೆಜಿ + ಕ್ಲೀನ್ ಅಂಡ್ ಜರ್ಕ್ ನಲ್ಲಿ 119 ಕೆಜಿ)ಭಾರ ಎತ್ತಿ ಪದಕ ಖಚಿತ ಪಡಿಸಿಕೊಂಡರು.