ಹಾಸನ : ಪರಿಸರ ವಾದಿಗಳ ಬಗ್ಗೆ ಹಗುರವಾಗಿ ಮಾತನಾಡುವ ಜನಪ್ರತಿನಿಧಿಗಳು ಹಾಗೂ ಮುಖಂಡರು ತಾಕತ್ತಿದ್ದರೆ, ಅರಣ್ಯ ಪ್ರದೇಶದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ನಿಲ್ಲಿಸಲಿ ಎಂದು ಪರಿಸರವಾದಿ ಹಾಗೂ ಕಾಡಾನೆ ಸಂರಕ್ಷಣಾ ಸಂಘದ ಅಧ್ಯಕ್ಷ ವಿಕ್ರಂ ಗೌಡ ಸವಾಲು ಹಾಕಿದರು.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆನೆಗಳ ವಾಸಸ್ಥಾನಗಳಲ್ಲಿ ಅಕ್ರಮ ಗಣಿಗಾರಿಕೆಯಿಂದ ಆಗುತ್ತಿರುವ ಭಾರಿ ಶಬ್ದ ಆನೆಗಳನ್ನು ವಿಚಲಿತಗೊಳಿಸುತ್ತಿದ್ದು, ಇದರಿಂದಲೇ ಆನೆಗಳು ಕಾಡನ್ನು ಬಿಟ್ಟು ನಾಡಿಗೆ ಬರಲಾರಂಭಿಸಿವೆ ಎಂದು ಹೇಳಿದರು.
ಮೆಕ್ ಡೋನಾಲ್ಡ್‌ನಲ್ಲಿ ಹೆಣ್ಣು ಮಗುವಿಗೆ ಜನ್ಮ ಕೊಟ್ಟ ಮಹಿಳೆ..
ಕಾಡಾನೆಗಳು ನೀರು ಕುಡಿಯಲು ಬರುವ ನದಿ ದಂಡೆಯಲ್ಲಿ ಅಕ್ರಮ ಮರಳು ಗಣಿಗಾರಿಕೆಯಿಂದ ಆನೆಗಳಿಗೆ ಸಂಕಷ್ಟ ಎದುರಾಗಿದೆ. ಅಕ್ರಮ ಮರಳು ಹಾಗೂ ಕಲ್ಲು ಗಣಿಗಾರಿಕೆಯಿಂದ ಆನೆಗಳಿಗೆ ನೀರು ಕುಡಿಯಲು ಸಾಧ್ಯವಾಗುತ್ತಿಲ್ಲ. ಬಹುತೇಕ ಜನ ಪ್ರತಿನಿಧಿಗಳು ಗಣಿಗಾರಿಕೆಯಲ್ಲಿ ಶಾಮೀಲಾಗಿದ್ದು ಈ ಕಾರಣದಿಂದಲೇ ಗಣಿಗಾರಿಕೆ ನಿಲ್ಲಿಸಲು ಮುಂದಾಗುತ್ತಿಲ್ಲ ಎಂದು ದೂರಿದರು.
ರೈಲುಗಳಿಗೆ ಸಿಲುಕಿ ಕಾಡಾನೆಗಳಿಗೆ ಆಗುತ್ತಿರುವ ಅಪಘಾತಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ. ರೈಲು ಹಳಿಗಳ ಸುತ್ತ ಬೇಲಿ ನಿರ್ಮಾಣ ಮಾಡಬೇಕಿರುವ ಸರಕಾರ ಕಾಳಿಂಗ ಸರ್ಪ, ಜಿಂಕೆ, ಹಂದಿ, ಕಾಡುಕೋಣ ಸೇರಿದಂತೆ ಅನೇಕ ಕಾಡು ಪ್ರಾಣಿಗಳಿಗೆ ಮಾರಕವಾಗಿದೆ ಎಂದರು.
ಹಾಸನದಲ್ಲಿ ಎಟಿಎಂಗೆ ಅಪರಿಚಿತರಿಂದ ಪೂಜೆ.. ಅನುಮಾನ ವ್ಯಕ್ತಪಡಿಸಿದ ಸ್ಥಳೀಯರು.
ಈಗಾಗಲೇ ಸರಕಾರ ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಮಾಡಲು ಮುಂದಾಗಿದ್ದು ಇದು ಒಳ್ಳೆಯ ಬೆಳೆವಣಿಗೆ ಅಲ್ಲ, ಇದರಿಂದ ಆನೆಗಳಿಗೆ ಇನ್ನಷ್ಟು ಸಂಕಷ್ಟ ಎದುರಾಗಲಿದೆ ಸರಕಾರ ಈ ನಿರ್ಧಾರವನ್ನು ಬದಲಾಯಿಸಿಕೊಳ್ಳಬೇಕು. ಜನರ ರಕ್ಷಣೆ ದೃಷ್ಟಿಯಿಂದ ಸರಕಾರ ಗನ್ ಲೈಸೆನ್ಸ್ ನೀಡಿರುವುದು ಶ್ಲಾಘನೀಯ. ಆದರೆ ಪ್ರಾಣಿಗಳಿಗೆ ಮಾರಕವಾಗಿರುವ ಮದ್ದು, ಗುಂಡುಗಳನ್ನು ಗನ್ ಮಾಲೀಕರಿಗೆ ನೀಡಬಾರದು ಎಂದು ಮನವಿ ಮಾಡಿದರು.
ಕಳೆದ 25 ವರ್ಷಗಳಿಂದ ಪರಿಸರಕ್ಕೆ ಪೂರಕ ಹಾಗೂ ಆನೆಗಳ ಪರವಾಗಿ ಕೆಲಸ ಮಾಡುತ್ತಿದ್ದೇನೆ. ಜೀವದ ಹಂಗು ತೊರೆದು ಆನೆಗಳ ಸಂರಕ್ಷಣೆಗೆ ಕೆಲಸ ಮಾಡುತ್ತಿರುವ ನಮ್ಮ ಬಗ್ಗೆ ಕೆಲವರು ಮನಬಂದಂತೆ ಮಾತನಾಡುತ್ತಿದ್ದು ಇದನ್ನು ಬಿಡಬೇಕು. ಅಧಿಕಾರಿಗಳು ನಮ್ಮ ಸಹಕಾರ ಬೇಕಾದಾಗ ಪಡೆದುಕೊಂಡು ಮತ್ತೆ ನಮ್ಮನ್ನೇ ದೂರುವ ಕೆಲಸ ಮಾಡುತ್ತಿದ್ದಾರೆ ಎಂದು ತಮ್ಮ ಅಳಲು ತೋಡಿಕೊಂಡರು.