Monday, December 23, 2024

Latest Posts

ವಿಕ್ರಾಂತ್ ರೋಣನ ಪವರ್ ಫುಲ್ ಲುಕ್ ಗೆ ಫ್ಯಾನ್ಸ್ ಫಿದಾ..!

- Advertisement -

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಮೋಸ್ಟ್ ಅವೇಯ್ಟೆಡ್ ಸಿನಿಮಾ ಫ್ಯಾಂಟಮ್.. ಲಾಕ್ ಡೌನ್ ಕಾರಣದಿಂದಾಗಿ ಚಿತ್ರದ ಶೂಟಿಂಗ್ ನ್ನ ಪೋಸ್ಟ್ ಪೋನ್ ಮಾಡಿದ್ದ ಚಿತ್ರತಂಡ , ಲಾಕ್ ಡೌನ್ ಬಳಿಕ ಹೈದರಾಬಾದ್ ನ ಅನ್ನಪೂರ್ಣ ಸ್ಟುಡಿಯೋದಲ್ಲಿ ಸರಳವಾಗಿ ಪೂಜೆ ಮಾಡುವ ಮೂಲಕ ಶೂಟಿಂಗ್ ಆರಂಭಿಸಿತ್ತು.. ನಂತ್ರ ಚಿತ್ರದ ಕೆಲ ಚಿಕ್ಕ ಚಿಕ್ಕ ವೀಡಿಯೋ ತುಣುಕುಗಳನ್ನ ರಿವೀಲ್ ಮಾಡಿ, ಸಿನಿಮಾ ಬಗ್ಗೆ ಸಿನಿಪ್ರಿಯರಲ್ಲಿ ಸಾಕಷ್ಟು ಕುತೂಹಲ ಮೂಡಿಸಿತ್ತು.. ಇದೀಗ ಚಿತ್ರದ ನಾಯಕನ ಪಾತ್ರದ ಪೋಸ್ಟರ್ ನ್ನ ರಿವೀಲ್ ಮಾಡಿದೆ.. ಕಿಚ್ಚನ ಸ್ಟೈಲಿಶ್ ಅಂಡ್ ಪವರ್ ಫುಲ್ ಲುಕ್ ಇರುವ ಫ್ಯಾಂಟಮ್ ಚಿತ್ರದ ಈ ಪೋಸ್ಟರ್ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ..

ಕಿಚ್ಚನ ಫ್ಯಾಂಟಮ್ ಚಿತ್ರವನ್ನ ಅನೂಪರ್ ಭಂಡಾರಿ ನಿರ್ದೇಶನ ಮಾಡ್ತಿದ್ದಾರೆ.. ತಮ್ಮ ಹಿಂದಿನ ಟ್ವೀಟ್ ನಲ್ಲಿ ಚಿತ್ರದ ಪ್ರತಿಯೊಂದು ಪಾತ್ರಗಳನ್ನ ಕ್ಯಾರೆಕ್ಟರ್ ಇಂಟ್ರೋ ಪೋಸ್ಟರ್ ಗಳ ಮೂಲಕ ರಿವೀಲ್ ಮಾಡೋದಾಗಿ ತಿಳಿಸಿದ್ರು.. ಜೊತೆಗೆ ಮೊದಲು ಚಿತ್ರದ ನಾಯಕ ವಿಕ್ರಾಂತ್ ರೋಣನ ಪೋಸ್ಟರ್ ನ್ನ ರಿವೀಲ್ ಮಾಡೋದಾಗಿಯೂ ನಿರ್ದೇಶಕರು ತಿಳಿಸಿದ್ರು.. ಅದರಂತೆ ಇದೀಗ ಹೀರೋ ಇಂಟ್ರೊಡಕ್ಷನ್ ಬಗ್ಗೆ ಒಂದು ಸ್ಮಾಲ್ ವೀಡಿಯೋ ಜೊತೆಗೆ ವಿಕ್ರಾಂತ್ ರೋಣ ಕ್ಯಾರೆಕ್ಟರ್ ಪೋಸ್ಟರ್ ನ್ನ ರಿವೀಲ್ ಮಾಡಿದ್ದಾರೆ ಅನೂಪ್ ಭಂಡಾರಿ..

ಫ್ಯಾಂಟಮ್ ಚಿತ್ರದ ಪ್ರಮುಖ ಪಾತ್ರ ವಿಕ್ರಾಂತ್ ರೋಣ.. ವಿಕ್ರಾಂತ್ ರೋಣ ಹೆಸರಿನಲ್ಲಿ ಎಷ್ಟು ಪವರ್ ಇದ್ಯೋ ಆ ಕ್ಯಾರೆಕ್ಟರ್ ನಲ್ಲೂ ಅಷ್ಟೇ ಪವರ್ ಇದೆ..  ಈತ ಏನು ಮಾಡ್ತಾನೆ, ಹೇಗೆ ಮಾಡ್ತಾನೆ, ಯಾಕೆ ಮಾಡ್ತಾನೆ ಅನ್ನೋದು ಯಾರಿಗೂ ಅರ್ಥವಾಗೋದಿಲ್ಲ.. ಆದ್ರೆ ಅವನು ಏನೇ ಮಾಡಿದ್ರೂ ಅದಕ್ಕೊಂದು ಕಾರಣ ಇರುತ್ತೆ, ಅಂತ ಚಿತ್ರದ ನಾಯಕನ ಪರಿಚಯ ಮಾಡಿಕೊಡುವ ಒಂದು ಚಿಕ್ಕ ವೀಡಿಯೋವನ್ನ ಹಂಚಿಕೊಂಡಿದ್ದಾರೆ.. ಜೊತೆಗೆ ವಿಕ್ರಾಂತ್ ರೋಣನ ಪೋಸ್ಟರ್ ನ್ನ ರಿವೀಲ್ ಮಾಡಿದ್ದಾರೆ.. ಸ್ಟೈಲಿಶ್ ಕ್ಯಾಪ್ ತೊಟ್ಟು ಕೈಯಲ್ಲಿ ಒಂದು ಗನ್ ಹಿಡಿದು ಕುಳಿತಿರುವ ಕಿಚ್ಚನ ಪವರ್ ಫುಲ್ ಲುಕ್ ಇರುವ ಈ ಪೋಸ್ಟರ್ ಕಿಚ್ಚನ ರೋಲ್ ಹಾಗೂ ಫ್ಯಾಂಟಮ್ ಸಿನಿಮಾ ಬಗ್ಗೆ ಪ್ರೇಕ್ಷಕರಲ್ಲಿರುವ ಕ್ಯೂರಿಯಾಸಿಟಿಯನ್ನ ಡಬಲ್ ಮಾಡಿದೆ..

ಫ್ಯಾಂಟಮ್ ಚಿತ್ರವನ್ನ ಜಾಕ್ ಮಂಜು ಹಾಗೂ ಶಾಲಿನಿ ಮಂಜುನಾಥ್ ಅವರು ನಿರ್ಮಾಣ ಮಾಡ್ತಿದ್ದಾರೆ.. ಇನ್ನೂ ಈ ಚಿತ್ರದಲ್ಲಿ ಸುದೀಪ್ ಗೆ ಜೋಡಿಯಾಗಿ ನಟಿ ಶ್ರದ್ಧಾ ಶ್ರೀನಾಥ್ ಬಣ್ಣ ಹಚ್ಚಿದ್ದಾರೆ.. ಅಲ್ಲದೆ ನಟ ನಿರೂಪ್ ಭಂಡಾರಿ ಕೂಡ ಚಿತ್ರದ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ.. ಬಿ.ಅಜನೀಶ್ ಲೋಕನಾಥ್ ಈ ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡ್ತಿದ್ದಾರೆ.. ರಂಗಿತರಂಗ ಚಿತ್ರದಲ್ಲಿ ಕೆಲಸ ಮಾಡಿದ್ದ ಸಾಕಷ್ಟು ಜನ ಕಲಾವಿದರು ಈ ಚಿತ್ರದಲ್ಲೂ ವರ್ಕ್ ಮಾಡ್ತಿದ್ದಾರೆ.. ಸದ್ಯ ಫ್ಯಾಂಟಮ್ ಚಿತ್ರದ ಚಿತ್ರೀಕರಣ ಭರದಿಂದ ಸಾಗ್ತಿದೆ.. ಕಿಚ್ಚನ ವಿಕ್ರಾಂತ್ ರೋಣ ನ ಲುಕ್ ಗೆ ಇದೀಗ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ..

ಚಂದನ.ಎಸ್ ಕರ್ನಾಟಕ ಟಿವಿ

- Advertisement -

Latest Posts

Don't Miss