Friday, April 18, 2025

Latest Posts

ಅರಣ್ಯವಾಸಿಗಳ ಪುನರ್ವಸತಿಯಲ್ಲಿ ನಿಯಮ ಉಲ್ಲಂಘನೆ..! ರಾಜ್ಯಕ್ಕೆ ಬಿಸಿ ಮುಟ್ಟಿಸಿದ ಕೇಂದ್ರ

- Advertisement -

National News: ರಾಜ್ಯದಲ್ಲಿ ಅರಣ್ಯವಾಸಿಗಳಿಗೆ ಪುನರ್ವಸತಿ ಕಲ್ಪಿಸುವ ವಿಚಾರದಲ್ಲಿ ಅರಣ್ಯವಾಸಿಗಳ ಸಮ್ಮತಿ ಪಡೆದು ನ್ಯಾಯಯುಕ್ತವಾಗಿ ಹಾಗೂ ಪಾರದರ್ಶಕತೆಯಿಂದ ಸಂಪೂರ್ಣ ಪ್ರಕ್ರಿಯೆಯನ್ನು ನಡೆಸುವಂತೆ ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯ ರಾಜ್ಯ ಸರ್ಕಾರಕ್ಕೆ ತಿಳಿಸಿದೆ.

ನಿಮ್ಮ ರಾಜ್ಯದಲ್ಲಿ ಕಾನೂನು ನಿಯಮಗಳನ್ನು ಉಲ್ಲಂಘಿಸುವ ಮೂಲಕ ಅರಣ್ಯವಾಸಿಗಳನ್ನು ಸ್ಥಳಾಂತರ ಮಾಡಲಾಗುತ್ತಿದೆ ಎನ್ನುವ ದೂರುಗಳು ನಮಗೆ ಬರುತ್ತಿವೆ ಎಂದು ರಾಜ್ಯದ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದು ವರದಿ ಸಲ್ಲಿಸುವಂತೆ ಸೂಚಿಸಿದೆ. ಈ ಕುರಿತು ಮಂಗಳೂರಿನ ಸುರತ್ಕಲ್‌ನ ರೇಷ್ಮಾ ಎನ್ನುವ ಮಹಿಳೆ ನೀಡಿದ್ದ ದೂರನ್ನು ಗಂಭೀರವಾಗಿ ಪರಿಗಣಿಸಿರುವ ಸಚಿವಾಲಯವು ಪತ್ರದ ಮೂಲಕ ಚಾಟಿ ಬೀಸಿದೆ.

ಇನ್ನೂ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಪ್ರಕಾರ ಹುಲಿಗೆ ಮೀಸಲಿರುವ ಅರಣ್ಯಗಳ ಹೃದಯ ಭಾಗದಲ್ಲಿ ಜೀವನ ನಡೆಸುವ ಅರಣ್ಯವಾಸಿಗಳಿಗೆ ಮಾತ್ರ ಪುನರ್ವಸತಿ ವ್ಯವಸ್ಥೆಯನ್ನು ಕಲ್ಪಿಸಲು ಅವಕಾಶವಿದೆ. ಅಲ್ಲದೆ ಮೀಸಲಿರುವ ಪ್ರದೇಶದ ವ್ಯಾಪ್ತಿಯಲ್ಲಿ ವಾಸಿಸುತ್ತಿರುವವರ ಸ್ಥಳಾಂತರಕ್ಕೆ ಅವಕಾಶವಿಲ್ಲ, ಅದಕ್ಕೆ ಕಾಯ್ದೆಯಲ್ಲಿ ನಿರ್ಬಂಧವಿದೆ. ಅಲ್ಲದೆ ವನ್ಯಜೀವಿ ಕಾಯ್ದೆ ಹಾಗೂ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದಲ್ಲಿ ಸೂಚಿಸಿರುವ ಮಾಋಗಸೂಚಿಗಳನ್ನು ಉಲ್ಲಂಘಿಸಿ ಕಾಳಿ ಮೀಸಲು ಅರಣ್ಯದಲ್ಲಿ ಸ್ಥಳಾಂತರ ಮಾಡಲಾಗಿದೆ.

ಇನ್ನೂ ಇಲ್ಲಿನ ಬಪರ್‌ ಝೋನ್‌ಗಳಾಗಿರುವ ಕಲಭಾವಿ, ಸುಲಾವಳಿ, ಕರಂಜೆ ಗ್ರಾಮಗಳ ಅರಣ್ಯವಾಸಿಗಳನ್ನು ಎತ್ತಂಗಡಿ ಮಾಡಲಾಗಿತ್ತು. ಅಲ್ಲದೆ ಅರಣ್ಯ ಇಲಾಖೆ ನೀಡುವ ಪರಿಹಾರ ಸಾಕಾಗುವುದಿಲ್ಲ ಇದರಿಂದ ಕೃಷಿಯನ್ನೇ ನಂಬಿಕೊಂಡಿರುವ ಅರಣ್ಯವಾಸಿಗಳಿಗೆ ಅನ್ಯಾಯವಾಗುತ್ತಿದೆ. ಭೂ ಸ್ವಾಧೀನ ಹಾಗೂ ಪುನರ್ವಸತಿ ಕಾಯ್ದೆ 2013ರಂತೆ ಅ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು. ಸ್ಥಳಾಂತರ ವೇಳೆ ಪರ್ಯಾಯ ಜಮೀನನ್ನು ಕಡ್ಡಾಯವಾಗಿ ನೀಡಬೇಕೆಂದು ದೂರಿನಲ್ಲಿ ಒತ್ತಾಯಿಸಲಾಗಿತ್ತು.

ಅಲ್ಲದೆ ಹುಲಿ ಸಂರಕ್ಷಿತ ಪ್ರದೇಶಗಳೆಂದು ಗುರುತಿಸಿಕೊಳ್ಳದ ಮಹದೇಶ್ವರ ಬೆಟ್ಟ, ದಾಂಡೇಲಿ, ಚಿಂಚೋಳಿ ಸೇರಿದಂತೆ ಭೀಮಗಡ ಸೇರಿದಂತೆ ಹಲವು ಅಭಯಾರಣ್ಯಗಳು ಹಾಗೂ ರಾಷ್ಟ್ರೀಯ ಉದ್ಯಾನಗಳಲ್ಲಿನ ಪುನರ್ವಸತಿಯನ್ನು ಕೂಡಲೇ ಕೈಬಿಡಬೇಕೆಂದು ದೂರುದಾರರು ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದರು.

- Advertisement -

Latest Posts

Don't Miss