ಬರ್ಮಿಂಗ್ ಹ್ಯಾಮ್ : ಐದನೆ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧ ಭರ್ಜರಿಯಾಗಿ ಸವಾರಿ ಮಾಡಿದೆ. ಮೂರನೆ ದಿನದಾಟದ ಪಂದ್ಯದಲ್ಲಿ ಇಂಗ್ಲೆಂಡ್ ಮೇಲುಗೈ ಸಾಧಿಸಿತ್ತಾದರೂ ದಿನದಾಟದ ಅಂತ್ಯದ ಎರಡನೆ ಇನ್ನಿಂಗ್ಸ್ ನಲ್ಲಿ ಚೇತೇಶ್ವರ ಪೂಜಾರ ಮತ್ತು ರಿಷಬ್ ಪಂತ್ ಅರ್ಧ ಶತಕ ಸಿಡಿಸಿ ತಿರುಗೇಟು ನೀಡಿದರು.
ಇದೀಗ ಟೀಮ್ ಇಂಡಿಯಾ ಪಾಳೆಯದಲ್ಲಿ ಹೊಸ ವಿಷಯವೊಂದು ಚರ್ಚೆಗೆ ಬಂದಿದೆ. ರನ್ ಹೊಡೆಯುತ್ತಿಲ್ಲ, ಶತಕ ಸಿಡಿಸುತ್ತಿಲ್ಲ 3 ವರ್ಷದಿಂದ ಿದೇ ಕತೆಯಾದರೆ ಹೆಂಗೆ ಅಂತಾ ಕ್ರಿಕೆಟ್ ಅಭಿಮಾನಿಗಳು ಪ್ರಶ್ನೆ ಮಾಡ್ತಿದ್ದಾರೆ. ಶತಕ ಸಿಡಿಸಿದ ನಂತರ ವಿರಾಟ್ ಕೊಹ್ಲಿ 18 ಟೆಸ್ಟ್ ಪಂದ್ಯಗಳಿಂದ ಗಳಿಸಿದ್ದು 852 ರನ್ ಸರಾಸರಿ 27.48 ಹೊಂದಿದ್ದಾರೆ.
ಇನ್ನು ಪೂಜಾರ 3 ವರ್ಷದಿಂದ ವೈಫಲ್ಯ ಅನುಭವಿಸುತ್ತಿದ್ದಾರೆ. ಒಮ್ಮೆ ಪೂಜಾರ ಅವರನ್ನು ಕೈಬಿಡಲಾಗಿತ್ತು. ಕೌಂಟಿಯಲ್ಲಿ ಒಳ್ಳೆ ಪ್ರದರ್ಶನ ನೀಡಿದ್ದರಿಂದ ಮತ್ತೆ ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು. ಪೂಜಾರ ಶತಕ ನಂತರ 28 ಪಂದ್ಯಗಳಿಂದ 1300 ಹೊಡೆದಿದ್ದಾರೆ. 12 ಬಾರಿ ಅರ್ಧ ಶತಕ ಸಿಡಿಸುತ್ತಿದ್ದಾರೆ. 27.08 ಸರಾಸರಿ ಹೊಂದಿದ್ದಾರೆ.
ನಿನ್ನೆ ಎರಡನೆ ಇನ್ನಿಂಗ್ಸ್ ಈ ಇಬ್ಬರು ಆಟಗಾರರಿಗೆ ಡು ಆರ್ ಡೈ ಮ್ಯಾಚ್ ಎಂದು ಹೇಳಲಾಗುತ್ತಿದೆ. ಆಯ್ಕೆ ಮಂಡಳಿಯವರು ವಿರಾಟ್ ಮತ್ತು ಪೂಜಾರಾಗೆ ಮತ್ತೆ ಮತ್ತೆ ಅವಕಾಶ ಕೊಡಲ್ಲ ಆಡಿದ್ರೆ ಆಡಿ ಬಿಟ್ಟರೆ ಬಿಡಿ ಎಂದು ಹೇಳಿದ್ದಾರಂತೆ.
2ನೇ ಇನ್ನಿಂಗ್ಸ್ ನಲ್ಲಿ ವಿರಾಟ್ ಕೊಹ್ಲಿ 20 ರನ್ ಹೊಡೆದು ಫೇಲ್ ಆದ್ರೆ ಚೇತೇಶ್ವರ ಪೂಜಾರ 50 ರನ್ ಹೊಡೆದು ಪಾಸ್ ಆಗಿದ್ದಾರೆ.