- Advertisement -
ಮುಂಬೈ: ಇತ್ತೀಚಿನ ವರ್ಷದಲ್ಲಿ ಉತ್ತಮ ರನ್ ಗಳಿಸದಿರುವ ವಿರಾಟ್ ಕೊಹ್ಲಿ ಮುಂಬರುವ ಏಶ್ಯಾ ಕಪ್‍ಗಾಗಿ ಪ್ರಾಕ್ಟಿಸ್ ಆರಂಭಿಸಿದ್ದಾರೆ.
ಮುಂಬೈಯ ಒಳಾಂಗಣ ಕ್ರಿಕೆಟ್ ಅಕಾಡೆಮಿಯಲ್ಲಿ ಕೊಹ್ಲಿ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಜತೆ ಪ್ರಾಕ್ಟಿಸ್ ನಡೆಸುತ್ತಿರುವುದು ಕಂಡುಬಂತು. ಈ ಕುರಿತಾದ ವಿಡಿಯೋವೊಂದನ್ನು ಕೊಹ್ಲಿ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.
ಕಳೆದೆರಡು ವರ್ಷಗಳಿಂದ ರನ್ ಬರ ಅನುಭವಿಸುತ್ತಿರುವ ವಿರಾಟ್ ಕೊಹ್ಲಿ ಇದೀಗ ತಂಡದಲ್ಲಿ ಸ್ಥಾನ ಪಡೆಯಲೇ ಹೆಣಗಬೇಕಾಗಿ ಬಂದಿದೆ. ಅವರಿಗೆ ಇತರ ಆಟಗಾರರಿಂದ ತೀವ್ರ ಪೈಪೋಟಿ ಎದುರಾಗಿದೆ.
ಏಶ್ಯಾಕಪ್ ಆಗಸ್ಟ್ 27ರಿಂದ ಆರಂಭವಾಗಲಿದ್ದು, ಭಾರತವು ತನ್ನ ಮೊದಲ ಪಂದ್ಯವನ್ನು ಆ.28ರಂದು ಪಾಕಿಸ್ಥಾನದ ವಿರುದ್ಧ ಆಡಲಿದೆ.
ಆರಂಭದಲ್ಲಿ ಏಶ್ಯಾ ಕಪ್ 50 ಓವರುಗಳ ಪಂದ್ಯವಾಗಿದ್ದರೂ ಇದೀಗ ಅದನ್ನು 20 ಓವರುಗಳ ಪಂದ್ಯಕ್ಕೆ ಇಳಿಸಲಾಗಿದೆ.
- Advertisement -