Tuesday, September 16, 2025

Latest Posts

ಲಂಡನ್‌ಗೆ ಶಿಫ್ಟ್ ಆದ ವಿರುಷ್ಕಾ: ಅನುಷ್ಕಾ ಬಿಚ್ಚಿಟ್ಟ ಸತ್ಯ!

- Advertisement -

ಭಾರತದ ಅತ್ಯಂತ ಜನಪ್ರಿಯ ದಂಪತಿಗಳಲ್ಲಿ ಒಬ್ಬರಾದ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಇತ್ತೀಚೆಗೆ ಲಂಡನ್ ಜೀವನವನ್ನು ಆನಂದಿಸುತ್ತಿದ್ದಾರೆ. 2024ರಲ್ಲಿ ತಮ್ಮಿಬ್ಬರು ಮಕ್ಕಳಾದ ವಾಮಿಕಾ ಮತ್ತು ಅಕಾಯ್ ಜೊತೆ ಲಂಡನ್‌ಗೆ ಸ್ಥಳಾಂತರಗೊಂಡಿರುವ ಈ ಜೋಡಿ, ಭಾರತದಲ್ಲಿ ಎದುರಾಗುವ ತೀವ್ರ ಮಾಧ್ಯಮ ಗಮನ ಮತ್ತು ಸಾರ್ವಜನಿಕ ಒತ್ತಡದಿಂದ ದೂರವಿರಲು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ವಿಷಯವನ್ನು ಅವರು ಜೆಮಿಮಾ ರೊಡ್ರಿಗ್ಸ್ ಮತ್ತು ಸ್ಮೃತಿ ಮಂದಾನರೊಂದಿಗೆ ನಡೆದ ಭೇಟಿಯಲ್ಲಿ ಹಂಚಿಕೊಂಡಿದ್ದಾರೆ.

ಇದೇ ವೇಳೆ, ಮಾಧುರಿ ದೀಕ್ಷಿತ್ ಅವರ ಪತಿ ಡಾ. ಶ್ರೀರಾಮ್ ನೇನೆ, ಯೂಟ್ಯೂಬರ್ ರಣವೀರ್ ಅಲ್ಲಾಬಾಡಿಯಾ ಅವರ ಪಾಡ್‌ಕಾಸ್ಟ್‌ನಲ್ಲಿ ಈ ಸ್ಥಳಾಂತರದ ನಿಜವಾದ ಕಾರಣವನ್ನು ವಿವರಿಸಿದರು. ಅವರು ಅನುಷ್ಕಾ ಶರ್ಮಾ ಜೊತೆಗಿನ ಮಾತುಕತೆಯನ್ನು ಉಲ್ಲೇಖಿಸಿ – ಭಾರತದಲ್ಲಿ ಏನೇ ಮಾಡಿದರೂ ಅದಕ್ಕೆ ಅತಿಯಾದ ಗಮನ ಸೆಳೆಯುತ್ತದೆ. ಇದರಿಂದ ನಾವು ನಮ್ಮ ಯಶಸ್ಸನ್ನು ಶಾಂತಿಯಿಂದ ಅನುಭವಿಸಲು ಸಾಧ್ಯವಾಗುತ್ತಿಲ್ಲ. ಮಕ್ಕಳನ್ನು ಸಾಮಾನ್ಯ ವಾತಾವರಣದಲ್ಲಿ ಬೆಳೆಸಬೇಕೆಂಬ ಕಾರಣದಿಂದ ಲಂಡನ್‌ಗೆ ತೆರಳಲು ನಿರ್ಧರಿಸಲಾಯಿತು ಎಂದು ಹೇಳಿದರು. ಅಭಿಮಾನಿಗಳ ನಿರಂತರ ಸೆಲ್ಫಿ ವಿನಂತಿಗಳು ಮತ್ತು ಖಾಸಗಿತನದ ಕೊರತೆ ಇವರಿಗೆ ದೊಡ್ಡ ಸವಾಲಾಗಿತ್ತು.

ಇತ್ತೀಚೆಗೆ, ಜೆಮಿಮಾ ಮತ್ತು ಸ್ಮೃತಿ ಮಂದಾನ ಬ್ಯಾಟಿಂಗ್ ಸಲಹೆಗಾಗಿ ವಿರಾಟ್‌ರನ್ನು ಭೇಟಿ ಮಾಡಲು ಹೋದಾಗ, ಅವರು ದಂಪತಿಯೊಂದಿಗೆ ಲಂಡನ್‌ನ ಕಫೆ ಒಂದರಲ್ಲಿ ನಾಲ್ಕು ಗಂಟೆಗಳ ಕಾಲ ಮಾತುಕತೆ ನಡೆಸಿದರು. ಕ್ರಿಕೆಟ್‌ನಿಂದ ಆರಂಭವಾದ ಸಂಭಾಷಣೆ, ನಿಧಾನವಾಗಿ ವೈಯಕ್ತಿಕ ಜೀವನದ ಕಡೆ ತಿರುಗಿತು. ಈ ವೇಳೆ ಅನುಷ್ಕಾ, ನಿಮ್ಮಿಬ್ಬರಲ್ಲೂ ಮಹಿಳಾ ಕ್ರಿಕೆಟ್ ಬದಲಾಯಿಸುವ ಶಕ್ತಿ ಇದೆ ಎಂದು ಪ್ರೋತ್ಸಾಹಿಸಿದರೆಂದು ಅವರು ನೆನಪಿಸಿಕೊಂಡಿದ್ದಾರೆ. ಕೊನೆಗೆ, ಕಫೆಯ ಸಿಬ್ಬಂದಿ ಮುಚ್ಚುವ ಸಮಯವಾದ್ದರಿಂದ ಹೊರಹೋಗುವಂತೆ ಕೇಳಿಕೊಂಡಿದ್ದು, ಆ ಸಂಭಾಷಣೆ ಅಲ್ಲಿ ಅಂತ್ಯವಾಯಿತು.

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss