Saturday, October 25, 2025

Latest Posts

ವಿಶ್ವಸುಂದರಿಯನ್ನ ಕೆಣಕಿದ ಅ’ವಿವೇಕ್’ ಒಬೇರಾಯ್- ನೆಟ್ಟಿಗರಿಂದ ಮಂಗಳಾರತಿ

- Advertisement -

ಲೋಕಸಭಾ ಚುನಾವಣಾ ಎಕ್ಸಿಟ್ ಪೋಲ್ ವರದಿಯ ಬಗ್ಗೆ ದೇಶಾದ್ಯಂತ ಇಂಟೆರೆಸ್ಟಿಂಗ್ ಚರ್ಚೆಗಳು ನಡೀತಿರೋ ಮಧ್ಯೆ ನಟ ವಿವೇಕ್ ಒಬೇರಾಯ್ ಮಾಡಿರೋ ಟ್ವೀಟ್ ನೆಟ್ಟಿಗರ ಕಣ್ಣು ಕೆಂಪಾಗಿಸಿದೆ.

ಒಂದು ಕಾಲದ ತಮ್ಮ ಗೆಳತಿ, ವಿಶ್ವಸುಂದರಿ ಐಶ್ವರ್ಯ ರೈ ಬಗ್ಗೆ ಒಬೇರಾಯ್ ಟೀಕೆ ಮಾಡೋ ರೀತಿ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ನಲ್ಲಿ ಐಶ್ವರ್ಯಾ ರೈ ಮಾಜಿ ಪ್ರಿಯಕರ ಸಲ್ಮಾನ್ ಖಾನ್ ಜೊತೆಗಿರೋ ಫೋಟೋವನ್ನ OPINION POLL ಎಂದು, ತಮ್ಮ ಜೊತೆ ಐಶು ಇರೋ ಫೋಟೋಗೆ EXIT POLL ಎಂದು ಹಾಗೂ ಐಶ್ವರ್ಯಾ ತಮ್ಮ ಪತಿ ಹಾಗೂ ಪುತ್ರಿಯೊಂದಿಗಿರೋ ಫೋಟೋವನ್ನ FINAL RESULT ಗೆ ಹೋಲಿಸಿದ್ದಾರೆ. ಅಲ್ಲದೆ, ಇದರಲ್ಲಿ ಯಾವುದೇ ರಾಜಕೀಯ ಇಲ್ಲ, ಇದುವೇ ಜೀವನ ಅಂತ ಬರೆದುಕೊಂಡಿದ್ದಾರೆ.

ಈ ಟ್ವೀಟ್ ನಿಂದ ನಟ ವಿವೇಕ್ ಒಬೇರಾಯ್ ನೆಟ್ಟಿಗರಿಂದ ಸಾಕಷ್ಟು ಟೀಕೆಗೆ ಗುರಿಯಾಗಿದ್ದಾರೆ. ತಮ್ಮ ಜೀವನದ ಹಳೆಯ ನೆನಪುಗಳನ್ನ ಒಳ್ಳೆ ರೀತಿಯಲ್ಲಿ ಮೆಲುಕು ಹಾಕಬೇಕೆ ಹೊರತು ಈ ರೀತಿ ಟೀಕೆ ಸರಿಯಲ್ಲ ಅಂತ ನೆಟ್ಟಿಗರು ನಟನ ಮುಖಕ್ಕೆ ಮಂಗಳಾರತಿ ಮಾಡಿದ್ದಾರೆ.

https://twitter.com/vivekoberoi/status/1130380916142907392

‘ನಿಖಿಲ್ ಎಲ್ಲಿದ್ದೀಯಪ್ಪಾ’ ಸಿನಿಮಾನ ಫಸ್ಟ್ ಡೇ ಫರ್ಸ್ಟ್ ಶೋ ನೋಡ್ತಾರಂತೆ ಅಭಿಷೇಕ್ ಅಂಬರೀಶ್. ಇನ್ನೂ ಏನ್ ಹೇಳಿದ್ರು ಗೊತ್ತಾ ಅಭಿ? ತಿಳಿದುಕೊಳ್ಳೋಕೆ ಈ ವಿಡಿಯೋ ತಪ್ಪದೇ ನೋಡಿ.

- Advertisement -

Latest Posts

Don't Miss