ದೇಶಾದ್ಯಂತ ಕೇಂದ್ರ ಚುನಾವಣಾ ಆಯೋಗದಿಂದ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ ನಡೆಯುತ್ತಿದ್ದು, ಲಕ್ಷಾಂತರ ಜನರ ಮತದಾರರ ಹೆಸರು ರದ್ದಾಗುವ ಭೀತಿ ಎದುರಾಗಿದೆ. ನಿಮ್ಮ ವೋಟರ್ ಐಡಿ ಸುರಕ್ಷಿತವಾಗಿದೆಯೋ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ.
ಈ ವೋಟ್ಗಳು ಯಾಕೆ ಡಿಲೀಟ್ ಆಗ್ತಿವೆ ಅಂದರೆ, ವಿಳಾಸ ಬದಲಾವಣೆ ಮಾಡಿರೋದು, ಮತದಾರರು ಮರಣ ಹೊಂದಿರೋದು, ಒಂದಕ್ಕಿಂತ ಹೆಚ್ಚು ವೋಟರ್ ಐಡಿಗಳನ್ನು ಹೊಂದಿರೋದು ಇದಕ್ಕೆ ಮುಖ್ಯ ಕಾರಣಗಳಾಗಿವೆ. ಇದರ ಜೊತೆಗೆ ಬೂತ್ನಲ್ಲಿ ಮತದಾರರು ಸಿಗದೇ ಇರೋದು ಮತ್ತು ಬಿಎಲ್ಒಗಳು ಮನೆ ಮನೆಗೆ ಬಂದು ಕೊಟ್ಟಿದ್ದ ಎನ್ಯುಮರೇಷನ್ ಫಾರ್ಮ್ಗಳನ್ನು ಇನ್ನು ಫಿಲ್ ಮಾಡಿ ಕೊಡದೇ ಇರೋದು ಕೂಡ ಮತಗಳು ಪಟ್ಟಿಯಿಂದ ರದ್ದಾಗಲು ಪ್ರಮುಖ ಕಾರಣಗಳಾಗಿವೆ.
ಸರಿ, ಹಾಗಾದ್ರೆ ನಿಮ್ಮ ಹೆಸರು ವೋಟರ್ ಲಿಸ್ಟ್ನಲ್ಲಿದೆಯಾ ಅಂತ ಚೆಕ್ ಮಾಡೋದು ಹೇಗೆ? ಅದಕ್ಕೆ ತುಂಬಾ ಸುಲಭವಾದ ದಾರಿಯಿದೆ. ನಿಮ್ಮ ಮೊಬೈಲ್ನಲ್ಲಿ ECI ಅಂತ ಟೈಪ್ ಮಾಡಿ, ಒಂದು ಸ್ಪೇಸ್ ಕೊಟ್ಟು ನಿಮ್ಮ ವೋಟರ್ ಐಡಿ ನಂಬರ್ ಹಾಕಿ, ಅದನ್ನ 1950 ಈ ನಂಬರ್ಗೆ ಎಸ್.ಎಂ.ಎಸ್. ಕಳುಹಿಸಬೇಕು. ಒಂದು ವೇಳೆ ನಿಮ್ಮ ವಿಧಾನಸಭಾ ಕ್ಷೇತ್ರ, ಪೋಲಿಂಗ್ ಸೆಂಟರ್, ಸೀರಿಯಲ್ ನಂಬರ್ ಮೆಸೇಜ್ ಮೂಲಕ ಬಂದ್ರೆ ನಿಮ್ಮ ವೋಟ್ ಸೇಫ್ ಆಗಿದೆ ಅಂತರ್ಥ. ಏನೂ ಮೆಸೇಜ್ ಬರ್ಲಿಲ್ಲ ಅಂದ್ರೆ ತಕ್ಷಣ ನಿಮ್ಮ ಬೂತ್ ಮಟ್ಟದ ಅಧಿಕಾರಿ ಅಂದ್ರೆ BLO ಅಥವಾ ಚುನಾವಣಾ ಅಧಿಕಾರಿಗಳನ್ನು ಒಮ್ಮೆ ಸಂಪರ್ಕಿಸಿ ಪರಿಶೀಲಿಸಿಕೊಳ್ಳಿ.
ಒಂದು ವೇಳೆ ಕರಡು ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲ ಅಂದ್ರೆ ಭಯಪಡುವ ಅವಶ್ಯಕತೆ ಇಲ್ಲ. ಆಗಸ್ಟ್ 30ರ ಒಳಗೆ ನೀವು Form-6 ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬೇಕು. ಚುನಾವಣಾ ಅಧಿಕಾರಿಗಳು ನಿಮ್ಮ ದಾಖಲೆಗಳನ್ನು ಪರಿಶೀಲಿಸಿ ನಿಮ್ಮ ಹೆಸರನ್ನು ವಾಪಸ್ ಮತದಾರರ ಪಟ್ಟಿಗೆ ಸೇರಿಸಿ ಹೊಸ ವೋಟರ್ ಐಡಿ ನೀಡುತ್ತಾರೆ. ಯಾವುದೇ ತಡ ಮಾಡಿಕೊಳ್ಳದೆ ಈಗಲೇ ನಿಮ್ಮ ವೋಟರ್ ಐಡಿ ಸ್ಟೇಟಸ್ ಚೆಕ್ ಮಾಡಿಕೊಳ್ಳಿ.




