Health tips
ಪ್ರತಿಯೊಬ್ಬರು ಫಿಟ್ ಆಗಿ ಸುಂದರವಾಗಿ ಕಾಣಲು ಬಯಸುತ್ತಾರೆ ಆದರೆ ರುಚಿರುಚಿಯಾದ ಜ೦ಕ್ ಫುಡ್ ಹಾಗು ಫ್ರಯ್ಡ್ ಫುಡ್ ಅನ್ನು ಅವರು ತಿನ್ನದೆ ಬಿಡುವುದಿಲ್ಲ ಇದರಿಂದ ಅವರು ಫಿಟ್ ಆಗಿ ಕಾಣುವ ಆಸೆಯು ಆಸೆಯಾಗಿಯೇ ಉಳಿದು ಹೋಗುತ್ತದೆ. ಹಾಗಾದರೆ
ಇಲ್ಲಿನಾವು ನಿಮಗೆ ಫಿಟ್ ಆಗಿರಲು ಕೆಲವು ಟಿಪ್ಸ ಅನ್ನು ಹೇಳುತ್ತೇವೆ ಈ ಟಿಪ್ಸ್ ಅನ್ನು ಅನುಸರಿಸಿದರೆ ಬೇಗ ತೂಕ ಕಡಿಮೆ ಮಾಡಿಕೊಳ್ಳ ಬಹುದು ಹಾಗು ಫಿಟ್ ಹಾಗಿ ಸುಂದರವಾಗಿ ಕಾಣಬಹುದು .
೧.ಕ್ಯಾಲೋರಿ ಕಡಿಮೆ ಇರುವ ಆಹಾರವನ್ನು ಸೇವಿಸಿ :
ತೂಕ ಕಡಿಮೆ ಮಾಡಲು ಮೊದಲು ನಿಮ್ಮ ಆಹಾರದಲ್ಲಿ ಕ್ಯಾಲೋರಿ ಕಡಿಮೆ ಇರುವಂತೆ ನೋಡ್ಕೋಬೇಕು ಬೆಳಗಿನ ಉಪಾಹಾರದಲ್ಲಿ ಓಟ್ಸ್, ಮಧ್ಯಾಹ್ನದ ಊಟದಲ್ಲಿ ದಾಲ್ ರೋಟಿ, ರಾತ್ರಿಯ ಊಟದಲ್ಲಿ ಯಾವುದೇ ಲಘು ಆಹಾರವನ್ನು ಸೇವಿಸಿ. ವೈಟ್ ರೈಸ್ ಆದಷ್ಟು ಕಡಿಮೆ ತಿನ್ನಿ , ಡಯಟ್ ಮಾಡುವವರು ವೈಟ್ ರೈಸ್ ತಿನ್ನದೇ ಇರುವುದೇ ಸೂಕ್ತ .
೨.ತಪ್ಪದೆ ವರ್ಕೌಟ್ ಮಾಡಬೇಕು :
ಡಾಕ್ಟರ್ಸ್ ಹೇಳುವ ಪ್ರಕಾರ ದಿನನಿತ್ಯ ವರ್ಕೌಟ್ ಮಾಡುವುದು ಬಹಳ ಮುಖ್ಯವಾಗಿರುತ್ತದೆ ದಿನಚರಿಯಲ್ಲಿ ನೀವು ವಾಕಿಂಗ್, ಯೋಗ, ಜಿಮ್ ಅಥವಾ ಯಾವುದೇ ಒಂದು ಕ್ರೀಡೆಯನ್ನು ಅನುಸರಿಸಬೇಕು ದಿನನಿತ್ಯ 8000 ಹೆಜ್ಜೆ ನಡೆಯಬೇಕು ಇದು ನಿಮ್ಮ ದೇಹದಲ್ಲಿನ ಕ್ಯಾಲೋರಿಸ್ ಅನ್ನು ಬರ್ನ್ ಮಾಡುತ್ತದೆ .
೩. ಸಕ್ಕರೆಯ ಪ್ರಮಾಣ ಕಡಿಮೆ ಮಾಡಿ :
ಹೌದು ನಿಮ್ಮ ದೇಹದ್ಲಲಿ ಕ್ಯಾಲೋರಿಸ್ ಜಾಸ್ತಿ ಯಾಗಲು ಸಕ್ಕರೆ ಪ್ರಮುಖವಾಗಿ ಪಾತ್ರ ವಹಿಸುತ್ತದೆ ಆದ್ದರಿಂದ ಸಕ್ಕರೆ ಪ್ರಮಾಣ ಕಡಿಮೆ ಮಾಡಿ .
೪. ಹಣ್ಣು ಮತ್ತು ತರಕಾರಿಗಳನ್ನು ಸೇವನೆ ಮಾಡಿ:
ನೀವು ಊಟ ಮಾಡುವ ಬದಲಾಗಿ ತಾಜಾ ಹಣ್ಣು ಮತ್ತು ತರಕಾರಿಗಳನ್ನು ತಿನ್ನುವುದು ಒಳ್ಳೆಯದು. ಇದು ನಿಮ್ಮ ತೂಕ ಇಳಿಕೆಗೆ ಗಮನಾರ್ಹವಾಗಿ ಸಹಾಯ ಮಾಡುತ್ತದೆ. ಅಲ್ಲದೆ, ಹಣ್ಣುಗಳು ಮತ್ತು ತರಕಾರಿಗಳಲ್ಲಿ ಕನಿಷ್ಟ ಕ್ಯಾಲೋರಿ ಮತ್ತು ಕೊಬ್ಬು ಇರುವುದರಿಂದ ನೀವು ಯಾವುದೇ ಸಂದೇಹವಿಲ್ಲದೆ, ಹಣ್ಣು ಮತ್ತು ತರಕಾರಿಗಳನ್ನು ನಿಮ್ಮ ಡಯಟ್ ಚಾರ್ಟ್‌ನಲ್ಲಿ ಸೇರಿಸಿ. ಇಂತಹ ಆಹಾರದಲ್ಲಿ ಅತಿ ಹೆಚ್ಚು ಜೀವಸತ್ವಗಳು ಮತ್ತು ಖನಿಜಗಳಿಂದ ತುಂಬಿರುತ್ತದೆ.
೫. ಸಾಕಷ್ಟು ನೀರು ಕುಡಿಯಿರಿ:
ದೇಹದ ತೂಕ ಕಡಿಮೆ ಮಾಡಿಕೊಳ್ಳಲು ನೀರು ಸಾಕಷ್ಟು ಪ್ರಯೋಜನಕಾರಿಯಾಗಿದೆ ಹೆಚ್ಚಾಗಿ ನೀರು ಕುಡಿಯುವುದರಿಂದ ನಿಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸಿ, ಚಯಾಪಚಯ ಕ್ರಿಯೆಗೆ ಸಹಾಯ ಮಾಡುತ್ತದೆ ಹಾಗಾಗಿ ನೀರು ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
೬.ಅಧಿಕ ನಾರಿನಂಶವಿರುವ ಆಹಾರ ಸೇವಿಸಿ :
ನೀವು ಅಧಿಕ ನಾರಿನಂಶವಿರುವ ಆಹಾರವನ್ನು ಸೇವನೆ ಮಾಡುವುದರಿಂದ ಇದು ದೀರ್ಘ ಕಾಲಿಕವಾಗಿ ಹೊಟ್ಟೆ ತುಂಬಿದ೦ತೆ ಇರುತ್ತದೆ ಇದರಿಂದ ನಿಮಗೆ ಹಸಿವಿನ ಪ್ರಮಾಣ ಕಡಿಮೆಯಾಗುತ್ತದೆ .
೭. ರಾತ್ರಿ ಊಟ ಬೇಗ ಮುಗಿಸಬೇಕು :
ರಾತ್ರಿಯ ಊಟವನ್ನು ಬೇಗ ಮುಗಿಸಿದರೆ ತೂಕ ಇಳಿಕೆ ಮಾಡಿಕೊಳ್ಳಲು ಇದು ಸುಲಭವಾದ ಉಪಾಯ, ಹೀಗೆ ಮಾಡುವುದರಿಂದ ಜೀರ್ಣಕ್ರಿಯೆ ಸುಗಮವಾಗುತ್ತದೆ ಆರೋಗ್ಯವು ಚೆನ್ನಾಗಿರುತ್ತದೆ .
ಸಕ್ಕರೆ ಸ್ಲೋ ಪಾಯಿಸನ್..?! ಸಕ್ಕರೆ ಬಳಸೋಕು ಮುನ್ನ ಈ ವಿಷಯದ ಬಗ್ಗೆ ತಿಳಿದುಕೊಳ್ಳಿ..!