Friday, July 11, 2025

Latest Posts

ದೇಶದಿಂದಾಚೆಗೂ ಡಿ ಬಾಸ್ ಕ್ರಾಂತಿ ಹವಾ..?!

- Advertisement -

Film News:

ಡಿ ಬಾಸ್  ಅಭಿಮಾನದ  ಕೂಗು  ಇದೀಗ ದೇಶದಿಂದಾಚೆಗೂ  ಜೋರಾಗಿಯೇ  ಕೇಳಿ ಬರುತ್ತಿದೆ. ಚಾಲೆಂಜಿಂಗ್  ಸ್ಟಾರ್  ದರ್ಶನ್ ಮೋಸ್ಟ್  ಅವೈಟೆಡ್ ಸಿನಿಮಾ  ಪ್ರಚಾರ ವಿದೇಶದಲ್ಲಿ ನಡೆದಿದೆ.

ಬಾಕ್ಸ್  ಆಫೀಸ್  ಸುಲ್ತಾನ್  ಚಾಲೆಂಜಿಂಗ್  ಸ್ಟಾರ್  ಮೋಸ್ಟ್ ಅ ವೈಟೆಡ್  ಸಿನಿಮಾ ಕ್ರಾಂತಿ  ಚಿತ್ರದ  ಪ್ರಚಾರ   ಭರದಿಂದ  ಸಾಗುತ್ತಿದೆ. ಇದೀ ಗ   ದೇಶದಾಚೆಗೂ  ಕ್ರಾಂತಿ ಹವಾ ಹಾರಾಡಿದೆ. ಆಸ್ಟ್ರೇಲಿಯಾದಲ್ಲಿ ಕ್ರಾಂತಿ  ಚಿತ್ರದ   ಪ್ರೊಮೋಷನ್ ನ್ನು  ಅಭಿಮಾನಿಗಳು ವಿಭಿನ್ನವಾಗಿಯೇ ಕೈಗೊಂಡಿದ್ದಾರೆ.

ಹೌದು ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಅಭಿನಯದ ಆರಂಭದಿಂದಲೂ ಭಾರತದಾದ್ಯಂತ ಮನೆಮಾತಾಗಿರುವ ಮೋಸ್ಟ್ ಎಕ್ಸ್ಪೆಕ್ಟೆಡ್ ಪ್ಯಾನ್ ಇಂಡಿಯಾ ಸಿನಿಮಾ “ಕ್ರಾಂತಿ” ಸದ್ಯದಲ್ಲೇ ಬಿಡುಗಡೆಯಾಗಲಿದ್ದು ಕನ್ನಡ ಕಲಾಭಿಮಾನಿಗಳು ಡಿ ಬಾಸ್ ರವರ ಅಭಿಮಾನಿ ಸಮೂಹ ವೈಭವದಿಂದ ಚಿತ್ರದ ಪ್ರಚಾರ ಮಾಡುತ್ತ ವಿಶ್ವದಾದ್ಯಂತ ಪ್ರಚಂಡ ಯಶಸ್ಸು ಸಾಧಿಸಲಿ ಎಂದು ತುಂಬು ಮನಸ್ಸಿನಿಂದ ಹಾರೈಸುತ್ತಿದ್ದಾರೆ.

ಇಂದು ಆಸ್ಟ್ರೇಲಿಯದ ಸಿಡ್ನಿ ಯಲ್ಲಿ ಸಿಡ್ನಿ ಕನ್ನಡ ಅಭಿಮಾನಿಗಳು ಚಿತ್ರದ ಪೋಸ್ಟರ್ ಪ್ರದರ್ಶನ ಮಾಡುವ ಮೂಲಕ ಪ್ರಚಾರ ನಡೆಸಿದರು.ಕೈಯಲ್ಲಿ  ಕ್ರಾಂತಿ ಪೋಸ್ಟರ್  ಹಿಡಿದು  ಮನದಲ್ಲಿ  ಡಿ  ಬಾಸ್  ಅಭಿಮಾನ ತುಂಬಿ  ಏನೋ  ಒಂದು  ಹೊಸ ಉತ್ಸಾಹದಿಂದ  ದರ್ಶನ್ ಅಭಿಮಾನಿಗಳು ಕ್ರಾಂತಿ ಸಿನಿಮಾವನ್ನು ದೇಶದಿಂದಾಚೆಗೂ  ದೀರ್ಘವಾದ  ಪ್ರಚಾರದಲ್ಲಿ  ತೊಮಡಗಿದ್ದಾರೆ. ಆಸ್ಟ್ರೇಲಿಯಾದ ,ಪಾರ್ಕ್  ಹಾಗು ಪ್ರತಿಷ್ಟಿತ  ಜಾಗದಲ್ಲಿ   ಕ್ರಾಂತಿ ಸಿನಿಮಾದ ಪೋಸ್ಟರ್ ಹಿಡಿದು ಜೊತೆಗೆ  ಕೈಯಲ್ಲಿ ಕರುನಾಡ ಬಾವುಟ  ಹಿಡಿದು ದಚ್ಚು ಅಭಿಮಾನಿಗಳು  ಪ್ರಚಾರದಲ್ಲಿ ತೊಡಗಿದ್ದಿದ್ದು. ಕನ್ನಡ ಸಿನಿಮಾ ಲೋಕಕ್ಕೆ  ಮತ್ತಷ್ಟು  ಅಭಿಮಾನ ಹಾಗು ಬಲ ಬಂದಂತಾಗಿದೆ ಎನ್ನುತ್ತಾರೆ ನೆಟ್ಟಿಗರು.

ಬಾಲಿವುಡ್ ಗೆ ಎಂಟ್ರಿ ಕೊಟ್ಟ ಕರಾವಳಿಯ ಸೋಶಿಯಲ್ ಮೀಡಿಯಾ ಸ್ಟಾರ್ ..!

ರವಿಚಂದ್ರನ್ ಮನೆ ಶಿಫ್ಟ್..!ಕಾರಣ ಬಹಿರಂಗ..?!

“ಪೂರ್ಣಚಂದ್ರ ಫಿಲಂಸ್” ನಿರ್ಮಾಣದ ಚೊಚ್ಚಲ ಕಾಣಿಕೆ “ಬ್ರಹ್ಮ ಕಮಲ”.

 

- Advertisement -

Latest Posts

Don't Miss