Dharwad: ಧಾರವಾಡ : ಪರಿಸರ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಾಗೂ ಭಾರತೀಯ ಶಿಕ್ಷಣ ಪದ್ಧತಿಯಲ್ಲಿ ಗಿಡಗಳ ಪೋಷಣೆ ಕುರಿತು ತರಬೇತಿ ಶಿಕ್ಷಣ ಸೇರಿಸುವಂತೆ ಅಯೋಧ್ಯೆಯ ಯುವಕ ಅಶುತೋಷ್ ಪಾಂಡೆ ಪಾದಯಾತ್ರೆ ನಡೆಸುತ್ತಿದ್ದಾರೆ.
ಅಯೋಧ್ಯೆಯಿಂದ 21 ರಾಜ್ಯದಲ್ಲಿ ಈ ಪಾದಯಾತ್ರೆಯನ್ನು ನಡೆಸುತ್ತಿದ್ದೇನೆ, ಪರಿಸರ ಉಳಿದರೆ ನಮ್ಮ ಜೀವನ. ಇಲ್ಲವೇ ಇಡೀ ಸೃಷ್ಟಿಯೇ ಅಧಪತನವಾಗಲಿದೆ. ಈ ಕುರಿತು ಸರ್ಕಾರಗಳು ಶಿಕ್ಷಣದಲ್ಲಿ ಗಿಡ ನೆಡುವ ತರಬೇತಿ ಶಿಕ್ಷಣ ಸೇರಿಸಬೇಕು ಹಾಗೂ ಪರಿಸರ ಸಂರಕ್ಷಣೆ ಕುರಿತು ಯುವಕರಿಗೆ ಹೆಚ್ಚೆಚ್ಚು ಜಾಗೃತಿ ಮೂಡಿಸುವ ಅವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ ಈ ಪಾದಯಾತ್ರೆ ನಡೆಸುತ್ತಿದ್ದೇನೆ.
ಈಗಾಗಲೇ ಬಿಹಾರ, ಮಹಾರಾಷ್ಟ್ರ, ಛತ್ತೀಸ್ ಗಡ, ಜಾರ್ಖಂಡ್ ಸೇರಿದಂತೆ ವಿವಿಧ ರಾಜ್ಯಗಳ ಪಾದಯಾತ್ರೆ ಕೈಗೊಂಡು ಕರ್ನಾಟಕದ ಧಾರವಾಡಕ್ಕೆ ಬಂದಿದ್ದು, ಕರ್ನಾಟಕದ ವಿದ್ಯಾರ್ಥಿಗಳು ಹಾಗೂ ಜನರು ಪ್ರೀತಿ ತೋರಿ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ ಎಂದು ತಿಳಿಸಿದರು.
ಅಶುತೋಷ್ ಪಾಂಡೆ ಕೈಗೊಂಡ “ಪರಿಸರ ಉಳಿಸಿ” ಸಂದೇಶದ ಈ ಜಾಗೃತಿ ಪಾದಯಾತ್ರೆ ಧಾರವಾಡದಲ್ಲಿನ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿತು.
ಈ ಪಾದಯಾತ್ರೆಗೆ ರೋಟರಿ ಕ್ಲಬ್ ಧಾರವಾಡ ಅಧ್ಯಕ್ಷ ಸುನೀಲ್ ಬಾಗೇವಾಡಿ, ಪ್ರಮೋದ್ ಕಾರಕೂನ, ವಿವೇಕ ಎರಿ, ಪಂಪಾಪತಿ ಸಿಂಗಾಪುರ, ವಿನಾಯಕ ಜೋಶಿ, ಅಶ್ವಿನ್ ಭೊಸಾರೆ, ಆನಂದ್ ಕುಲಕರ್ಣಿ, ರಮೇಶ್ ಉಳ್ಳಾಗಡ್ಡಿ ಸೇರಿದಂತೆ ಹಲವರು ಧಾರವಾಡದಲ್ಲಿ ಸಾಥ್ ನೀಡಿದರು.
HalaShree: ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹಾಲಾಶ್ರೀ ಕೋಟಿ ವಂಚನೆ..!
ಸರ್ಕಾರಿ ಕಾಲೇಜಿನಲ್ಲಿ ಸೌಲಭ್ಯವಿರದ ಕಾರಣ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು..!