Friday, July 11, 2025

Latest Posts

ವಾರಿಜಶ್ರೀ ವೇಣುಗೋಪಾಲ್ ಗ್ರ್ಯಾಮಿ ಪ್ರಶಸ್ತಿಗೆ ನಾಮನಿರ್ದೇಶನ!

- Advertisement -

Bengaluru News: ಬೆಂಗಳೂರು ಮೂಲದ ಕರ್ನಾಟಕ ಸಂಗೀತ ಗಾಯಕಿ – ಕೊಳಲುವಾದಕಿ ವಾರಿಜಶ್ರೀ ವೇಣುಗೋಪಾಲ್ ಅವರು ಈ ವರ್ಷದ ಗ್ರ್ಯಾಮಿ ಪ್ರಶಸ್ತಿಗಳಿಗೆ ‘ಅತ್ಯುತ್ತಮ ಜಾಗತಿಕ ಸಂಗೀತ ಪ್ರದರ್ಶನ’ (Best global music performance) ವಿಭಾಗದಲ್ಲಿ ಯುಕೆ ಮೂಲದ ಸಂಗೀತಗಾರ ಜೇಕಬ್ ಕೊಲಿಯರ್ ಅವರ Djesse Vol 4 ಆಲ್ಬಮ್ಮಿನ ‘ಎ ರಾಕ್ ಸಮ್‌ವೇರ್’ ಹಾಡಿನಲ್ಲಿನ ಗಾಯನಕ್ಕಾಗಿ ನಾಮನಿರ್ದೇಶನಗೊಂಡಿದ್ದಾರೆ. ಇದೇ ವಿಭಾಗದಲ್ಲಿ ಪ್ರಸಿದ್ಧ ಸಿತಾರ್ ಕಲಾವಿದೆ ಅನುಷ್ಕಾ ಶಂಕರ್ ಕೂಡ ನಾಮನಿರ್ದೇಶನಗೊಂಡಿದ್ದಾರೆ.

30 ವರ್ಷಗಳ ಪ್ರದರ್ಶನದ ಅನುಭವದೊಂದಿಗೆ, ವಾರಿಜಶ್ರೀ ವೇಣುಗೋಪಾಲ್ ಅವರು ಅಂತರ-ಶೈಲಿ ಮತ್ತು ಅಂತರ-ಸಾಂಸ್ಕೃತಿಕ ವೇದಿಕೆಗಳಲ್ಲಿ ಭಾರತೀಯ ಗಾಯನದ ಅನನ್ಯ ಪ್ರಸ್ತುತಿಗಾಗಿ ಹೆಸರುವಾಸಿಯಾಗಿದ್ದಾರೆ ಮತ್ತು ಮೆಚ್ಚುಗೆ ಪಡೆದಿದ್ದಾರೆ. ಅಪರೂಪದ ಕಲಾವಿದೆಯಾಗಿ, ವಾರಿಜಶ್ರೀ ಇಂದು ವಿಶ್ವದ ಬಹು ಶ್ರೇಷ್ಠ ಕಲಾವಿದರೊಂದಿಗೆ ಸಹಯೋಗಿಸುತ್ತಿದ್ದಾರೆ.

ವಿವಿಧ ಸಂಸ್ಕೃತಿಗಳು ಮತ್ತು ಜಾಗತಿಕ ಶೈಲಿಗಳೊಂದಿಗೆ ಭಾರತೀಯ ಸಂಗೀತದ ಸಾರವನ್ನು ಮೇಳೈಸುವ ಅವರ ಅನನ್ಯ ಸಾಮರ್ಥ್ಯವು ಶ್ಲಾಘಿಸಲ್ಪಟ್ಟಿದೆ ಮತ್ತು ಪ್ರಪಂಚದಾದ್ಯಂತ ವಿವೇಚನಾಶೀಲ ಅಭಿಮಾನಿಗಳನ್ನು ಗಳಿಸಿದೆ. ಆಕೆಯ ಇತ್ತೀಚೆಗೆ ಬಿಡುಗಡೆಯಾದ ಆಲ್ಬಂ ‘ವಾರಿ’, ಸಂಯೋಜಕಿಯಾಗಿ, ಗೀತರಚನೆಗಾರ್ತಿಯಾಗಿ ಮತ್ತು ಗಾಯಕಿಯಾಗಿ ಆಕೆಯ ಸಾಮರ್ಥ್ಯಕ್ಕೆ ಒಂದು ಅನುಮೋದನೆಯಾಗಿದೆ, ಇದನ್ನು ಅಮೆರಿಕಾದ ಬಹು ಗ್ರ್ಯಾಮಿ ವಿಜೇತ ಕಲಾವಿದ ಹಾಗೂ ವಿಶ್ವ ವಿಖ್ಯಾತ ಜಾಝ್ ಫ್ಯೂಶನ್ ಬ್ಯಾಂಡ್ ಸ್ನಾರ್ಕಿ ಪಪ್ಪಿಯ ಸ್ಥಾಪಕರಾದ ಮೈಕಲ್ ಲೀಗ್ ಅವರು ನಿರ್ಮಿಸಿದ್ದಾರೆ.

- Advertisement -

Latest Posts

Don't Miss