Sunday, December 22, 2024

Latest Posts

ಯಡಿಯೂರಪ್ಪ, ಶೆಟ್ಟರ್, ಬೊಮ್ಮಾಯಿ ಕಾಲದಲ್ಲಿ ಬಾಂಬ್ ಬ್ಲಾಸ್ಟ್ ಆಗಿಲ್ಲವೇ..?: ಸಂತೋಷ್ ಲಾಡ್ ಪ್ರಶ್ನೆ

- Advertisement -

Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಾತನಾಡಿದ ಸಚಿವ ಸಂತೋಷ್ ಲಾಡ್, ಹುಬ್ಬಳ್ಳಿ – ಯಡಿಯೂರಪ್ಪ, ಶೆಟ್ಟರ್, ಬೊಮ್ಮಾಯಿ ಕಾಲದಲ್ಲಿ ಬಾಂಬ್ ಬ್ಲಾಸ್ಟ್ ಆಗಿಲ್ಲವೇ..? ಬಿಜೆಪಿ ಅಧಿಕಾರದಲ್ಲಿದ್ದಾಗಲೂ ರಾಜ್ಯದಲ್ಲಿ ಬಾಂಬ್ ಬ್ಲಾಸ್ಟ್ ಗಳಾಗಿವೆ. ಆಗ ಬಿಜೆಪಿಗೆ ನೈತಿಕತೆ ಇರಲಿಲ್ಲವೆ..? ಎಂದು ಪ್ರಶ್ನಿಸಿದ್ದಾರೆ.

ಇಂತಹ ಚಟುವಟಿಕೆಗಳಿಗೆ ಯಾವುದೇ ಪಕ್ಷ ಬೆಂಬಲ ಕೊಡಲ್ಲ. ಚುನಾವಣೆ ಬಂದಿರೋದ್ರಿಂದ ಪಾಕಿಸ್ತಾನ್, ಬ್ಲಾಸ್ಟ್ ಇತ್ಯಾದಿ ಬರ್ತಿವೆ. ಪಾಕಿಸ್ತಾನ, ಅಫ್ಗಾನಿಸ್ತಾನ್, ಟೆರರಿಸ್ಟ್ ಈ ಪದ ಬಿಟ್ಟರೆ ಅಭಿವೃದ್ಧಿ ವಿಚಾರವೇ ಇಲ್ಲ. ಇಂತಹ ವಿಚಾರಗಳ ಮೇಲೆಯೇ ಚುನಾವಣೆ ಹೋಗುತ್ತಿದೆ. ಬಿಜೆಪಿಗೆ ಐದು ಪದ ಬಿಟ್ಟರೆ ಬೇರೆ ಪದಗಳೇ ಗೊತ್ತಿಲ್ಲ. ಒಂದು ವಿಷಯವನ್ನಿಟ್ಟುಕೊಂಡು ಚುನಾವಣೆ ಮಾಡಲು ಹೋಗ್ತಾರೆ. ಕಳೆದ ಹತ್ತು ವರ್ಷದಿಂದಲೂ ಅದನ್ನೇ ಮಾಡಿದ್ದಾರೆ ಎಂದು ಸಂತೋಷ್ ಲಾಡ್ ಹೇಳಿದ್ದಾರೆ.

ಪಾಕ್ ಪರ ಹೇಳಿಕೆ ಸಾಬೀತಾಗಿರೋದ್ರಿಂದ ಸಿಎಂ, ಡಿಸಿಎಂ ರಾಜೀನಾಮೆ ನೀಡಬೇಕೆಂಬ ಆಗ್ರಹ ವಿಚಾರದ ಬಗ್ಗೆ ಮಾತನಾಡಿದ ಸಂತೋಷ್ ಲಾಡ್,  ಮಂಡ್ಯದಲ್ಲಿ ಕೇಸರಿ ಶಾಲು ಹಾಕಿಕೊಂಡು ಪಾಕ್ ಪರ ಘೋಷಣೆ ಕೂಗಿದ್ದಾರೆ. ಈ ಘಟನೆಯ ನೈತಿಕ ಹೊಣೆ ಹೊತ್ತು ಪ್ರಧಾನಿ ರಾಜೀನಾಮೆ ನೀಡಬೇಕಾ..? ಶೆಟ್ಟರ್ ಅವರು ಇದ್ರ ಬಗ್ಗೆ ಏನ್ ಹೇಳ್ತಾರೆ. ಎಲ್ಲ ಉತ್ತರಗಳೂ ಅವರ ಬಳಿಯೇ ಇವೆ. ಜಗದೀಶ್ ಶೆಟ್ಟರ್ ಅವರು ಸದ್ಯ ಬಹಳ ಸ್ಪೀಡ್ ನಲ್ಲಿದ್ದಾರೆ ಎಂದು ಸಂತೋಷ್ ಲಾಡ್ ಹೇಳಿದ್ದಾರೆ.

ನರೇಗಾ ಯೋಜನೆ ಕೂಲಿ ಹಣ ಬಿಡುಗಡೆಯಾಗದೇ ಇರೋದಕ್ಕೆ ಕಿಡಿಕಾರಿದ ಲಾಡ್, ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಬೇಕು. ಆದ್ರೆ ಕೂಲಿ ಮಾಡಿ ನಾಲ್ಕೈದು ತಿಂಗಳಾದ್ರೂ ಹಣ ಬಿಡುಗಡೆಯಾಗಿಲ್ಲ. ರಾಜ್ಯಕ್ಕೆ 1400 ಕೋಟಿ ರೂಪಾಯಿ ಬಾಕಿ ಹಣವಿದೆ. ಬರ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ 50 ದಿನಕ್ಕೆ ಹೆಚ್ಚಿನ ಕೆಲಸ ಕೇಳಿದ್ದೇವೆ. ಆದರೆ ಇದುವರೆಗೂ ಕೇಂದ್ರ ಒಪ್ಪಿಗೆ ಸೂಚಿಸಿಲ್ಲ. ಬರಗಾಲದ ಪರಿಹಾರವಾಗಿ ನಾವು ಕೈಲಾದಷ್ಟು ಕೊಟ್ಟಿದ್ದೇವೆ. ಆದ್ರೆ ಕೇಂದ್ರ ಸರ್ಕಾರ ನಯಾಪೈಸೆ ಹಣ ಬಿಡುಗಡೆ ಮಾಡಿಲ್ಲ ಎಂದಿದ್ದಾರೆ.

ಕಾರ್ಮಿಕ ಇಲಾಖೆಯಲ್ಲಿ ಲ್ಯಾಪ್ ಟಾಪ್ ಖರೀದಿಯಲ್ಲಿ ಅವ್ಯವಹಾರ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಲಾಡ್‌,
ಯಾವುದೇ ರೀತಿಯಲ್ಲಿ ಅಕ್ರಮ ನಡೆದಿಲ್ಲ ಎಂದಿದ್ದಾರೆ.  ಲೋಕಸಭಾ ಚುನಾವಣೆಗೆ ಸ್ಪರ್ಧಿಸೋ ಕುರಿತು ಪ್ರತಿಕ್ರಿಯಿಸಲು ಲಾಡ್ ನಿರಾಕರಿಸಿದ್ದು,  ಹಾಲಿ ಸಚಿವರು, ಮಾಜಿ ಸಚಿವರು ಕೆಲವೆಡೆ ಸ್ಪರ್ಧಿಸ್ತಾರೆ. ಗಂಗೂಬಾಯಿ ಹಾನಗಲ್ ಗುರುಕುಲ ಸಮಸ್ಯೆ ಬಗೆಹರಿಸ್ತೇವೆ ಎಂದಿದ್ದಾರೆ.

ಶೆಟ್ಟರ್ ಹೇಳಿದಂತೆ ಫ್ಲಡ್ ಗೇಟ್ ಆದ್ರೂ ಓಪನ್ ಆಗ್ಲಿ. ನಮ್ಮಲ್ಲಿರೋ ಬರಗಾಲನಾದ್ರೂ ನಿವಾರಣೆಯಾಗುತ್ತೆ ಎಂದು ಜಗದೀಶ್ ಶೆಟ್ಟರ್ ರ ಫ್ಲಡ್ ಗೇಟ್ ಓಪನ್ ಹೇಳಿಕೆಗೆ ಸಂತೋಷ್ ಲಾಡ್ ಟಾಂಗ್ ಕೊಟ್ಟಿದ್ದಾರೆ. ಮಳೆ ಜೋರು ಬಂದರೆ ಫ್ಲಡ್ ಅಂತಾರೆ. ರಾಜ್ಯದ 223 ತಾಲೂಕು ಬರ ಅಂತ ಘೋಷಿಸಿದ್ದೇವೆ. ಫ್ಲಡ್ ಬಂದು ಕರ್ನಾಟಕಕ್ಕೆ ಒಂದಷ್ಟು ನೀರಾದ್ರೂ ಬರಲಿ. ಜಗದೀಶ್ ಶೆಟ್ಟರ್ ಯಾವ ಫ್ಲಡ್ ಬಗ್ಗೆ ಹೇಳ್ತಿದಾರೋ ಗೊತ್ತಿಲ್ಲ ಎಂದು ಕಾಂಗ್ರೆಸ್ ನಾಯಕರು ಬಿಜೆಪಿ ಸೇರೋ ಕುರಿತ ಶೆಟ್ಟರ್ ಹೇಳಿಕೆಗೆ ಲಾಡ್ ಕಿಡಿಕಾರಿದ್ದಾರೆ.

ನಮ್ಮಸರ್ಕಾರದ 5 ಗ್ಯಾರೆಂಟಿ ಜನತೆಯ ಮುಂದಿಟ್ಟು ಚುನಾವಣೆ ಎದುರಿಸ್ತೇವೆ. ಅದ್ರ ಜೊತೆಗೆ ಬಿಜೆಪಿ ಸುಳ್ಳುಗಳನ್ನು ಜನರಿಗೆ ಮುಟ್ಟಿಸುವ ಕೆಲಸ ಮಾಡ್ತೇವೆ. 2014 ರಿಂದ ಡಾಲರ್ ಹಾಗೂ ರೂಪಾಯಿ ಮೌಲ್ಯದ ವ್ಯತ್ಯಾಸ ಹೆಚ್ಚಾಗಿದೆ? ಅದರ ಬಗ್ಗೆ ಬಿಜೆಪಿ ಅವರು ಉತ್ತರ ಕೊಡಲ್ಲ. ಸಂತೋಷ ಲಾಡ್ ರನ್ನು ಬೈಯೋಕೆ ಇಟ್ಕೊಂಡಿದ್ದಾರೆ ಅಂತಾರೆ. ರಾಹುಲ್ ಗಾಂಧಿಯಂತೆ ಮಾತಾಡ್ತಾರೆ ಅಂತ ಲೇವಡಿ ಮಾಡ್ತಾರೆ. ಬಲಿಷ್ಠ ಪ್ರಧಾನಮಂತ್ರಿ, ಸರ್ಕಾರ ಅಂತಾರೆ. 9 ವರ್ಷದಲ್ಲಿ ಡಾಲರ್ ಮೌಲ್ಯ 30 ರೂಪಾಯಿ ಹೆಚ್ಚಾಗಲು ಕಾರಣ ಏನು? ಎಂದು ಲಾಡ್ ಪ್ರಶ್ನಿಸಿದ್ದಾರೆ.

ನೋಟ್ ಬ್ಯಾನ್ ಮಾಡಿದ್ರು, ಮತ್ತೆ ಪ್ರಿಂಟ್ ಮಾಡಲು 25 ಸಾವಿರ ಕೋಟಿ ಖರ್ಚ ಆಯ್ತು. ಮೇಕ್ ಇನ್ ಇಂಡಿಯಾ ಎಲ್ಲಿದೆ? ಏನೇನು ಮಾಡಿದ್ದಾರೆ..? ಶ್ರೀಮಂತರಿಗೆ ಲಾಭ ಆಗಿದೆ ಹೊರತು ಬಡವರಿಗೆ ಏನು ಲಾಭ ಆಗಿಲ್ಲ. ಬಿಜೆಪಿಯ ಯೋಜನೆಗಳು ಏನಾಗಿವೆ? ನೀವು ಸ್ವಂತ ಟ್ರಸ್ಟ್ ಮಾಡ್ಕೊಂಡು 35 ಸಾವಿರ ಕೋಟಿ ತಗೊಂಡ್ರಿ. ನಿಮ್ಮ ಹೆಸರ ಮೇಲೆ ಸ್ಟೇಡಿಯಂ ಕಟ್ಟಿದ್ರಿ, ಆಸ್ಪತ್ರೆ ಕಟ್ಟಿದ್ದೀರಾ? ದೇಶದಲ್ಲಿ 12 ಸಾವಿರಕ್ಕಿಂತ ಹೆಚ್ಚು ಟ್ರೈನ್ ಗಳಿವೆ, 75 ಒಂದೇ ಭಾರತ್ ಮಾಡಿ ಎಷ್ಟು ಪ್ರಚಾರ ತಗೋತಾರೆ.

ಗ್ಯಾರೆಂಟಿ ವಿಚಾರದಲ್ಲಿ ಕಾಂಗ್ರೆಸ್ ನ ಕಾಪಿ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸಂತೋಷ್, ಕಾಂಗ್ರೆಸ್ ಪಕ್ಷದ ಗ್ಯಾರೆಂಟಿಗಳನ್ನ ಯಾಕೆ ಕಾಪಿ ಮಾಡಿದ್ರಿ ಅಂತ ಮೋದಿಯವರನ್ನ ಕೇಳ್ರಿ.. ಅವರು ಇದಕ್ಕೆ ಉತ್ತರ ಕೊಡಲ್ಲ ಎಂದು ಸಂತೋಷ ಲಾಡ್ ಹೇಳಿದ್ದಾರೆ.

ಶೇಕ್‌ ಹ್ಯಾಂಡ್ ಮಾಡಲು ಬಂದ ರಾಹುಲ್ ಗಾಂಧಿಗೆ ಆಲೂಗಡ್ಡೆ ಕೊಟ್ಟ ಬಿಜೆಪಿ ಕಾರ್ಯಕರ್ತರು

ಅಯೋಧ್ಯೆಗೆ ಭೇಟಿ ನೀಡಿ, ಚಾಮರ ಸೇವೆ ಸಲ್ಲಿಸಿದ ಬಿಜೆಪಿ ನಾಯಕ ನಳೀನ್ ಕುಮಾರ್ ಕಟೀಲ್

ಅನಂತ್‌-ರಾಧಿಕಾ ಪ್ರಿವೆಡ್ಡಿಂಗ್ ಕಾರ್ಯಕ್ರಮದಲ್ಲಿ ಚಿನ್ನದ ಶರ್ಟ್‌ನಲ್ಲಿ ಮಿಂಚಿದ ಮಾರ್ಕ್

- Advertisement -

Latest Posts

Don't Miss