International News: ಮೊದಲೆಲ್ಲ ಅನಾರೋಗ್ಯಕ್ಕೆ ಒಳಗಾದರೆ, ಜನ ವೈದ್ಯರ ಬಳಿ ಹೋಗುತ್ತಿದ್ದರು. ಆದರೀಗ ಸೋಶಿಯಲ್ ಮೀಡಿಯಾನೇ ಡಾಕ್ಟರ್ ಆಗಿ ಬಿಟ್ಟಿದೆ. ಸಾಮಾನ್ಯ ಆರೋಗ್ಯ ಸಮಸ್ಯೆಗೆ ಯುಟ್ಯೂಬ್ ನೋಡಿ ಮನೆಮದ್ದು ಮಾಡಿಕೊಳ್ಳಬಹುದು. ಆದರೆ ಇಲ್ಲೋರ್ವ ಮಹಿಳೆ, ಕ್ಯಾನ್ಸರ್‌ಗಾಗಿ ಯುಟ್ಯೂಬ್ ನೋಡಿ, ಮನೆ ಮದ್ದು ಮಾಡಿ, ಆಸ್ಪತ್ರೆ ಪಾಲಾಗಿದ್ದಾಳೆ.
ಯುನೈಟೆಡ್ ಕಿಂಗ್‌ಡಮ್ ನಲ್ಲಿ ಈ ಘಟನೆ ನಡೆದಿದ್ದು, ಐರಿನಾ ಎಂಬ ಮಹಿಳೆಗೆ 2021ರಲ್ಲೇ ಕ್ಯಾನ್ಸರ್ ಇರುವುದು ಧೃಡಪಟ್ಟಿತ್ತು. ಆಕೆ ಯುಟ್ಯೂಬ್ ನೋಡಿ ಕ್ಯಾನ್ಸರ್ ಇದ್ದವರು ಕ್ಯಾರೇಟ್ ಜ್ಯೂಸ್ ಕುಡಿಯಬೇಕು ಎಂದು ತಿಳಿದು, ಸರಿಯಾಗಿ ಆಹಾರ ಸೇವಿಸದೇ, ಬರೀ ಕ್ಯಾರೇಟ್ ಜ್ಯೂಸ್ ಸೇವಿಸಿದ್ದಾರೆ. ಅಲ್ಲದೇ, ಕಿಮೋ ಥೆರಿಪಿ ಕೂಡ ನಿರ್ಲಕ್ಷಿಸಿದ್ದಾರೆ.
ಹೀಗಾಗಿ ಸದ್ಯ ಆಕೆಯ ಪರಿಸ್ಥಿತಿ ಚಿಂತಾಜನಕವಾಗಿದ್ದು, ಮೈ ತುಂಬ ಗಡ್ಡೆ ಬೆಳೆದಿದೆ ಮತ್ತು ಮೈಯಲ್ಲಿ ದ್ರವ ಪದಾರ್ಥ ತುಂಬಿ ಹೋಗಿದೆ ಎಂದು ವೈದ್ಯರು ಹೇಳಿದ್ದರು. ಆದರೆ ವೈದ್ಯರು ಆಕೆಗೆ ಚಿಕಿತ್ಸೆ ಕೊಟ್ಟು, ಸದ್ಯ ಆ ಮಹಿಳೆ ಕೊಂಚ ಚೇತರಿಸಿಕೊಂಡಿದ್ದಾರೆ.
ಪೊಲೀಸ್ ವ್ಯವಸ್ಥೆ ಕುಸಿದಿದೆ, ರಾಜ್ಯ ಈಗ ಸಂಪೂರ್ಣ ಗೂಂಡಾ ರಾಜ್ಯವಾಗಿದೆ: ಮಾಜಿ ಸಿಎಂ ಶೆಟ್ಟರ್ ಕಿಡಿ
ಹಿಜಬ್ ಧರಿಸದೇ, ಮಾಡರ್ನ್ ಬಟ್ಟೆಯಲ್ಲಿದ್ದ ಮಗಳನ್ನು ಲೈವ್‌ನಲ್ಲೇ ಥಳಿಸಿದ ಪೋಷಕರು
ಇನ್ನು ಮುಂದೆ ವಿಧಾನಸೌಧ ಪ್ರವೇಶಿಸಬೇಕು ಅಂದ್ರೆ ಕ್ಯೂ ಆರ್ ಕೋಡ್ ಪಾಸ್ ಇರಲೇಬೇಕು