Friday, November 22, 2024

Latest Posts

ಗೋಕಾಕ್ ಫಾಲ್ಸ್‌ನಲ್ಲಿ ಜಲವೈಭವ ಸೃಷ್ಟಿ: ರಮಣೀಯ ದೃಶ್ಯ ನೋಡಲು ಬಂದ ಪ್ರವಾಸಿಗರ ದಂಡು

- Advertisement -

Gokak News: ಗೋಕಾಕ್: ಪಶ್ಚಿಮ ಘಟ್ಟದಲ್ಲಿ ಚೆನ್ನಾಗಿ ಮಳೆ ಸುರಿಯುತ್ತಿರುವ ಪರಿಣಾಮ, ಬೆಳಗಾವಿಯ ಸಪ್ತನದಿಗಳಿಗೆ ಜೀವಕಳೆ ಬಂದಿದೆ.

ಘಟಪ್ರಭಾ ನದಿಗೆ ಒಳಹರಿವು ಹೆಚ್ಚಳವಾಗಿದ್ದು, ಐತಿಹಾಸಿಕ ಗೋಕಾಕ್ ಫಾಲ್ಸ್‌ನಲ್ಲಿ ಜಲವೈಭವ ಸೃಷ್ಟಿಯಾಗಿದೆ. ಈ ಜಲಪಾತದಲ್ಲಿ 180 ಅಡಿ ಎತ್ತರದಿಂದ ನೀರು ಧುಮ್ಮಿಕ್ಕುತ್ತಿದ್ದು, ಈ ದೃಶ್ಯವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗಳು, ಗೋಕಾಕ್ ಫಾಲ್ಸ್‌ಗೆ ಪ್ರವಾಸಕ್ಕಾಗಿ ಬರುತ್ತಿದ್ದಾರೆ.

ಆದರೆ ಇಲ್ಲಿ ಬರುವ ಪ್ರವಾಸಿಗರು ಫೋಟೋಕ್ಕಾಗಿ, ಜಲಪಾತದ ಬಳಿ ಹುಚ್ಚಾಟ ಮೆರೆದಿದ್ದು, ಪ್ರವಾಸಿಗರ ಮೇಲೆ ನಿಗಾ ಇಡಲು ಪ್‌ರವಾಸೋದ್ಯಮ ಇಲಾಖೆ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.

- Advertisement -

Latest Posts

Don't Miss