ರಾಮಮಂದಿರಕ್ಕೆ ನಾವೂ ಇಟ್ಟಿಗೆ ಕೊಟ್ಟಿದ್ದೀವಿ, ಆದ್ರೆ ಬಿಜೆಪಿಯವರು ಧರ್ಮಗಳ ಮಧ್ಯೆ ತಂದಿಡುತ್ತಿದ್ದಾರೆ: ನಟ ವಿಜಿ

News: ರಾಜ್ಯದಲ್ಲಿ ಒಂದನೇ ಹಂತದ ಚುನಾವಣೆ ಮುಗಿದಿದ್ದು, ಮೇ 7ಕ್ಕೆ ಎರಡನೇಯ ಹಂತದ ಚುನಾವಣೆಗೆ ತಯಾರಿ ನಡೆದಿದೆ. ಶಿವಮೊಗ್ಗದಲ್ಲಿ ಕೂಡ ಇನ್ನು ಚುನಾವಣೆ ನಡೆಯಬೇಕಿದ್ದು, ಶಿವಮೊಗ್ಗದಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುತ್ತಿರುವ ಗೀತಾ ಶಿವರಾಜ್‌ಕುಮಾರ್ ಪರ ಆ್ಯಕಂರ್ ಅನುಶ್ರೀ, ಚಿಕ್ಕಣ್ಣ ಮತ್ತು ದುನಿಯಾ ವಿಜಯ್ ಪ್ರಚಾರ ನಡೆಸುತ್ತಿದ್ದಾರೆ.

ಪ್ರಚಾರದ ವೇಳೆ ಗೀತಾ ಶಿವರಾಜ್‌ಕುಮಾರ್ ಅವರಿಗೆ ಮತ ನೀಡಿ ಗೆಲ್ಲಿಸಬೇಕು ಎಂದು ಹೇಳಿರುವ ದುನಿಯಾ ವಿಜಯ್, ನಾವು ಯಾಕೆ ಕಾಂಗ್ರೆಸ್‌ಗೆ ಮತ ಹಾಕಬೇಕು ಅಂತಲೂ ವಿವರಿಸಿದ್ದಾರೆ. ರಾಮಮಂದಿರಕ್ಕೆ ನಾವು ಕೂಡ ಇಟ್ಟಿಗೆ ಕೊಟ್ಟಿದ್ದೀವಿ. ಆದರೆ ಬಿಜೆಪಿಗರು ಹಿಂದೂ ಮುಸ್ಲಿಂ ಮಧ್ಯೆ ತಂದಿಡುತ್ತಿದೆ ಎಂದು ವಿಜಿ ಹರಿಹಾಯ್ದಿದ್ದಾರೆ.

ಕಾಂಗ್ರೆಸ್‌ನವರು ಮೊದಲಿನಿಂದಲೂ ಹಿಂದೂ ಮುಸ್ಲಿಂ ಮಧ್ಯೆ ಹೊಂದಾಣಿಕೆಯಿಂದ ಇದ್ದೇವೆ. ಆದರೆ ಬಿಜೆಪಿಗರಿಗೆ ಇದೊಂದೇ ಅಸ್ತ್ರವಾಗಿದ್ದು, ಹಿಂದೂ ಮುಸ್ಲಿಂರ ನಡುವೆ ಜಗಳ ತಂದಿಡುತ್ತಿದ್ದಾರೆ. ಅಲ್ಲದೇ ಮಾತೆತ್ತಿದರೆ, ರಾಮಮಂದಿರ ಎನ್ನುತ್ತಾರೆ. ನಾವೂ ರಾಮಮಂದಿರಕ್ಕೆ ಇಟ್ಟಿಗೆ ಕೊಟ್ಟಿದ್ದೇವೆ. ರಾಮನ ಸೇವೆ ಮಾಡಿದವರಲ್ಲಿ ಮುಸ್ಲಿಂಮರೂ ಇದ್ದಾರೆ ಎಂದು ವಿಜಯ್ ಹೇಳಿದ್ದಾರೆ.

ಎಲ್ಲಾ ಜನಾಂಗದಲ್ಲೂ ಒಳ್ಳೆಯವರು, ಕೆಟ್ಟವರು ಇರುತ್ತಾರೆ. ಆದರೆ ಬಿಜೆಪಿಗರು ಮುಸ್ಲಿಂರು ಕೆಟ್ಟವರು ಅಂತಲೇ ನಿರೂಪಿಸೋಕ್ಕೆ ಹೊರಟಿದ್ದಾರೆ. ಬಂಗಾರಪ್ಪನವರು ಬರೀ ಸಿಎಂ ಆಗಿರಲಿಲ್ಲ. ಅವರು ದೊಡ್ಡ ಹೋರಾಟಗಾರರೂ ಆಗಿದ್ದರು. ಬಡವರ ಪರ ಇದ್ದವರು. ಅವರ ಮೇಲಿನ ಗೌರವದಿಂದ ನೀವೆಲ್ಲ ಈ ಕಾರ್ಯಕ್ರಮಕ್ಕೆ ಬಂದಿದ್ದೀರಾ. ನಿಮ್ಮ ಮನೆ ಬಾಗಿಲಿಗೆ ಹೆಣ್ಣು ಮಗು ಬಂದಿದೆ. ಆಶೀರ್ವಾಾದ ಮಾಡಿ, ಸ್ವಾಭಿಮಾನ ಉಳಿಸಿಕೊಳ್ಳುವುದು ನಿಮ್ಮ ಕೈಯಲ್ಲಿದೆ ಎಂದು ದುನಿಯಾ ವಿಜಿ ಮನವಿ ಮಾಡಿದ್ದಾರೆ.

ಕೆಲಸ ಮಾಡಿದ್ದೇನೆ ಓಟು ಕೊಡಿ ಎನ್ನುವ ಬದಲು ಕಾಂಗ್ರೆಸ್ ಬಗ್ಗೆ ಅಪಪ್ರಚಾರ ಮಾಡಿ ಓಟು ಕೇಳುತ್ತಾರೆ: ಸಿಎಂ

ಇದರ ನಡುವೆ ನೇಹಾ ಹಿರೇಮಠ ಕಗ್ಗೊಲೆ ಪ್ರಕರಣದ ತನಿಖೆ ದಿಕ್ಕುತಪ್ಪದಿರಲಿ: ಬಿ.ವೈ.ವಿಜಯೇಂದ್ರ

ಇವರ ಚಟಕ್ಕೆ ವಿಡಿಯೋ ಮಾಡಿಕೊಳ್ಳುತ್ತಾರೆ. ಇಂಥವರನ್ನ ಭಗವಂತನೂ ಕ್ಷಮಿಸಲ್ಲ: ಡಿ.ಕೆ.ಶಿವಕುಮಾರ್

About The Author