Sunday, December 22, 2024

Latest Posts

ನಾವು ಗಾಂಧಿ ತತ್ವದವರು, ಅವರದು ಗೋಡ್ಸೆ ಸಿದ್ದಾಂತ: ಈಶ್ವರಪ್ಪ ಹೇಳಿಕೆಗೆ ಪ್ರಸಾದ್ ಅಬ್ಬಯ್ಯ ತಿರುಗೇಟು

- Advertisement -

Hubballi News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಶಾಸಕ ಪ್ರಸಾದ್ ಅಬ್ಬಯ್ಯ ಮಾತನಾಡಿದ್ದು, ಗುಂಡಿಕ್ಕಿ ಕೊಲ್ಲಬೇಕು ಅನ್ನೋ ಈಶ್ವರಪ್ಪ ಹೇಳಿಕೆಗೆ ಶಾಸಕ ಅಬ್ಬಯ್ಯ ತಿರುಗೇಟು ನೀಡಿದ್ದಾರೆ.

ನಾವೆಲ್ಲ ಗಾಂಧಿ ತತ್ವದವರು‌. ಅಂತಹ ಮಾತು ಈಶ್ವರಪ್ಪನವರ ಸಂಸ್ಕೃತಿ ತೋರಿಸುತ್ತೆ. ನಾವು ಗಾಂಧಿ ತತ್ವದವರು, ಅವರದು ಗೋಡ್ಸೆ ಸಿದ್ದಾಂತ. ಅವರಿಗೆ ಗೋಡ್ಸೆ ಆದರ್ಶಪ್ರಾಯ. ಗಾಂಧೀಜಿಯನ್ನೆ ಕೊಂದವರು ಇವರು. ಗುಂಡಿಕ್ಕಿ ಕೊಲ್ಲಿ ಅನ್ನೋರು ಮೂರ್ಖರು. ಸಂವಿಧಾನ ಬದಲಾಯಿಸಬೇಕು ಅನ್ನೋ ಮೂರ್ಖರು ಇವರೆಲ್ಲ ಎಂದು ಪ್ರಸಾದ್ ಅಬ್ಬಯ್ಯ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಪ್ರತಿ ಚುನಾವಣೆಗೆ ಒಂದು ಅಸ್ತ್ರ ಬೇಕು. ದೇವರು,‌ ಧರ್ಮದ ಹೆಸರಲ್ಲಿ ರಾಜಕಾರಣ ಆಗಬಾರದು. ಬರೀ ಎಮೋಷನಲ್ ಬ್ಲ್ಯಾಕ್‌ಮೇಲ್ ಮಾಡ್ತಿರೋದು ದುರ್ದೈವ ಎಂದು ಪ್ರಸಾದ್ ಅಬ್ಬಯ್ಯ ಹೇಳಿದ್ದಾರೆ.

ಪಾಕಿಸ್ತಾನ, ಬಾಂಗ್ಲಾದೇಶ ವಿಭಜನೆ ಮಾಡಿದರು, ಇನ್ನೇನು ಮಾಡುತ್ತಾರೋ ಗೊತ್ತಿಲ್ಲ: ಕಾಂಗ್ರೆಸ್ ವಿರುದ್ಧ ಮುತಾಲಿಕ್ ಕಿಡಿ

ಡಿವೋರ್ಸ್ ವದಂತಿಗೆ ಫುಲ್‌ಸ್ಟಾಪ್ ಹಾಕಿದ ನಟಿ ಅಂಕಿತಾ ಲೋಖಂಡೆ- ವಿಕ್ಕಿ ಜೈನ್

ಕನಸಿನಲ್ಲಿ ಈ ಪ್ರಾಣಿಗಳನ್ನು ಕಂಡರೆ ಏನರ್ಥ ಗೊತ್ತಾ..?

- Advertisement -

Latest Posts

Don't Miss