Dharwad News: ಧಾರವಾಡ : ಧಾರವಾಡದಲ್ಲಿ ಸಚಿವರಾದ ಹೆಚ್.ಕೆ.ಪಾಟೀಲ್ ಮಾತನಾಡಿದ್ದು, ಸದನದಲ್ಲಿ ಎಚ್ ಕೆ ಪಾಟೀಲ್ ಐದು ಸಂಪುಟಗಳ ಕೃತಿ ಬಿಡುಗಡೆ ಬಗ್ಗೆ ಹೇಳಿಕೆ ನೀಡಿದ್ದಾರೆ.
ನನ್ನ ಐದು ಸಂಪುಟಗಳ ಬಿಡುಗಡೆ ಕಾರ್ಯಕ್ರಮಕ್ಕೆ ಸಭಾಪತಿ,ಸಭಾಧ್ಯಕ್ಷರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಸಭೆಯಲ್ಲಿ ಹಲವಾರು ನಾಯಕರು ಭಾಗಿಯಾಗಿ ಶೋಭೆ ತಂದಿದ್ದಾರೆ. ಪ್ರಜಾಪ್ರಭುತ್ವದ ಪುನರುತ್ತಾನ ಸಲುವಾಗಿ ಮಾರ್ಗದರ್ಶನ ಮಾಡಿದರು. ಈ ಕಾರ್ಯಕ್ರಮ ಇದು ಸಭೆಯಲ್ಲಿ ವಿಶಿಷ್ಡವಾದ ವೇದಿಕೆಯಾಗಿದೆ. ಪ್ರಜಾಪ್ರಭುತ್ವ ಕ್ಕೆ ಅನೂಕೂಲವಾಗುವ ವಿಷಯ ಗಳನ್ನ ಎತ್ತಿ ತೋರಿಸಲಾಗಿದೆ. ಐದು ಸಂಪುಟಗಳಲ್ಲಿ ವಿಧಾನಮಂಡಲದಲ್ಲಿ ಏನೆಲ್ಲ ಬದಲಾವಣೆ ಆಗಬೇಕು. ಪ್ರಜಾಪ್ರಭುತ್ವ ದಲ್ಲಿ ಬದಲಾವಣೆ ಆಗಬೇಕು ಎಂಬುದರ ಬಗ್ಗೆ ತೋರಿಸಲಾಗಿದೆ ಎಂದು ಹೇಳಿದರು.
ಸಾರ್ವಜನಿಕರನ್ನ ಚಿಂತನೆ ಒಳಡಿಸಲಾಗಿದೆ. ಶಾಸಕರಿಗೆ ಓದಿನಲ್ಲಿ ಅನೂಕೂಲವಾಗಲಿ ಎಂದು ತೋರಿಸಲಾಗಿದೆ. ಧಾರವಾಡ, ಹಾವೇರಿ, ಬಾಗಲಕೋಟ, ಬೆಳಗಾವಿಯಿಂದ ಹಿತೈಶಿಗಳು ಆಗಮಿಸಿದ್ದರು. ಅವರು ನನ್ನ ಈ ಮಟ್ಟಕ್ಕೆ ಏರಿಸಿದ್ದಾರೆ ಎಲ್ಲರಿಗೂ ಧನ್ಯವಾದಗಳನ್ನ ಹೇಳುತ್ತೇನೆ. ಬಿಚ್ಚುಮನಸ್ಸಿನ ಚರ್ಚೆಯ ವೇದಿಕೆ ಕಾರ್ಯಕ್ರಮವಾಗಿದೆ ಎಂದು ಹೆಚ್.ಕೆ.ಪಾಟೀಲ್ ಹೇಳಿದರು.
ರಾಮ ಮಂದಿರ ಲೋಕಾರ್ಪಣೆ ವಿಚಾರವಾಗಿ ಮಾತನಾಡಿದ ಪಾಟೀಲರು, ಶಂಕರಾಚಾರ್ಯ ಬರಲಿ ಬಿಡಲಿ, ಯಾವ ಸ್ವಾಮಿಗಳು ಬಂದ್ರೆ ಬರಲಿ, ಬಿಟ್ರೆ ಬಡಲಿ ಎಂದು ಹೇಳುತ್ತಾರೆ. ಇವರು ರಾಜಕಾರಣ ಈ ಮಟ್ಡಕ್ಕೆಮಾಡ್ತಾ ಇರೋದರ ಬಗ್ಗೆ ನಾವು ತಲೆಕೆಡಸಿಕ್ಕೊಳ್ಳಲ್ಲ ಎಂದು ಸಚಿವ ಹೆಚ್.ಕೆ.ಪಾಟೀಲ್ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಕೋಟ್ಯಾಧೀಶನಿಗೆ ಸ್ಲೋ ಪಾಯಿಸನ್ ಕೊಟ್ಟು ಕೊಲೆ.. ಮೇರಿ ಮೇಲೆ ಆರೋಪ..!
ಲೋಕಸಭಾ ಟಿಕೆಟ್ ಕುರಿತು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅಚ್ಚರಿ ಹೇಳಿಕೆ..!