Monday, December 23, 2024

Latest Posts

‘ನಮಗೆ ಹಣ ಸಂಗ್ರಹ ಮಾಡಿ ಕೊಡುವ ಪರಿಸ್ಥಿತಿ ಇಲ್ಲ’

- Advertisement -

Hassan Political News: ಹಾಸನ: ಹಾಸನದ ಸಕಲೇಶಪುರದಲ್ಲಿ ಕೃಷಿ ಸಚಿವ ಚೆಲುವರಾಯಸ್ವಾಮಿ ಮಾತನಾಡಿದ್ದು, ಕಾಂಗ್ರೆಸ್ ಅನೈತಿಕ ಮಾರ್ಗದಿಂದ ಸಾವಿರಾರು ಕೋಟಿ ಹಣ ಸಂಗ್ರಹಕ್ಕೆ ಮುಂದಾಗಿದೆ ಎಂಬ ಪ್ರಹ್ಲಾದ್ ಜೋಷಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಅವರ ಕೈಯಲ್ಲೆ ಇನ್ಕಮ್  ಟ್ಯಾಕ್ಸ್ , ಇಡಿ ಇದೆ. ಈಗ ಪರಿಶೀಲನೆ ಮಾಡುತ್ತಿದ್ದಾರೆ. ನಾವೇನು ಬೇಡಾ ಎನ್ನಲ್ಲ. ಬಿಜೆಪಿ ಜೆಡಿಎಸ್ ಸೇರಿಕೊಂಡು ಇದು ಕಾಂಗ್ರೆಸ್ ಎಂದಾಕ್ಷಣ ಹಾಗಾಗಲ್ಲ. ಯಾರ್ಯಾರ ದುಡ್ಡು ಏನು ಎನ್ನೋದು ತನಿಖೆ ಆಗಲಿ ಎಂದು ಚೆಲುವರಾಯಸ್ವಾಮಿ ಆಗ್ರಹಿಸಿದ್ದಾರೆ.

ಹಿಂದೆ ಬಿಜೆಪಿ ಎರಡು ಕಡೆ ಅಧಿಕಾರದಲ್ಲಿ ಇದ್ದಾಗ ಸಾಕಷ್ಟು ಹಣ ಸಂಗ್ರಹ ಮಾಡಿದ್ದಾರೆ.  ಇಡಿ ಹಿಂದೆ ಹಣ ಪತ್ತೆ ಮಾಡಿದಾಗ ಇವರು ಇದು ನಮ್ಮದೇ ಹಣ ಎಂದು ಘೋಷಣೆ ಮಾಡಿಕೊಂಡಿದ್ರಾ..? ಅವರು ಯಾರ ದುಡ್ಡೊ ಏನು ವ್ಯವಹಾರಾನೊ ಹಣ ಸಿಕ್ಕಿದೆ. ಅದಕ್ಕೆ ಕಾಂಗ್ರೆಸ್ ಜೊತೆ ಹೋಲಿಕೆ ಸರಿಯಲ್ಲ ಎಂದು ಚೆಲುವರಾಯಸ್ವಾಮಿ ಕಿಡಿ ಕಾರಿದ್ದಾರೆ.

ಅನಂತ್ ಕುಮಾರ್ ಇಲ್ಲಾ. ಯಡಿಯೂರಪ್ಪ ಅವರ ಪರಿಸ್ಥಿತಿ ಸರಿಯಿಲ್ಲ. ರಾಜ್ಯದಲ್ಲಿ ಒಬ್ಬ ವಿರೋಧ ಪಕ್ಷದ ನಾಯಕನನ್ನು ಮಾಡಲು ಆಗಿಲ್ಲ. ರಾಜ್ಯಾದ್ಯಕ್ಷರ ಬದಲಾವಣೆ ಮಾಡೊಕೆ ಆಗಿಲ್ಲ. ಈ ರೀತಿ ಹೇಳಿಕೆ ಕೊಡದೆ ಹೋದರೆ ಅವರಿಗೆ ಬಂಡವಾಳ ಇಲ್ಲ. ನಮಗೆ ಹಣ ಸಂಗ್ರಹ ಮಾಡಿ ಕೊಡೊ ಪರಿಸ್ಥಿತಿ ಇಲ್ಲ. ಇವರ ತರ ನಾವು ಒಂದೊಂದು ಕ್ಷೇತ್ರಕ್ಕೆ ಹಣ ಹಂಚಿ ಗೆಲ್ಲಬೇಕಾದ ಅವಶ್ಯಕತೆ ಇಲ್ಲ.ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್  ಹಣ ಇಲ್ಲದೆ 136 ಸ್ಥಾನ ಗೆದ್ದಿದೆ. ಹಣ ಬೇಕಾಗಿರೋದು ಅವರಿಗೆ, ನಮಗಲ್ಲ ಎಂದು ಚೆಲುವರಾಯಸ್ವಾಮಿ ತಿರುಗೇಟು ನೀಡಿದ್ದಾರೆ.

ಐಟಿ ರೇಡ್ ವೇಳೆ ದೊಡ್ಡ ಮೊತ್ತದ ಹಣ ಪತ್ತೆ ಕೇಸ್ ಸಿಬಿಐಗೆ ವಹಿಸಬೇಕು ಎಂಬ ಮಾಜಿ ಸಿಎಂ ಬೊಮ್ಮಾಯಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಚೆಲುವರಾಯಸ್ವಾಮಿ ಪ್ರತಿಕ್ರಿಯಿಸಿದ್ದು,  ಕೊಡಲಿ ಯಾರು ಬೇಡಾ ಎನ್ನೋರು, ಸಿಬಿಐ ಇಲ್ಲಾ ಎಂದರೆ ಇನ್ನು ದೊಡ್ಡ ತನಿಖೆ ಇದ್ದರೆ ಕೊಡಲಿ. ಯಾವ ತನಿಖೆ ಆಗಬೇಕು ಎಂದು ಕೇಂದ್ರ ಸರ್ಕಾರ ಮಾಡಲಿ ಎಂದು ಹೇಳಿದ್ದಾರೆ.

ಆನೇಕಲ್ ಪಟಾಕಿ‌ ದುರಂತ: ಎಚ್ಚೆತ್ತುಕೊಂಡ ಅಧಿಕಾರಿಗಳಿಂದ ಶೆರೆವಾಡ ಪಟಾಕಿ ಗೋಡೌನ್ ಮೇಲೆ ದಾಳಿ…

ಕೇಂದ್ರದಿಂದ ಕರ್ನಾಟಕಕ್ಕೆ ಕಲ್ಲಿದ್ದಲು ಪೂರೈಕೆ ಆಗಿದ್ದೆಷ್ಟು? ಅಂಕಿ-ಅಂಶ ಬಿಚ್ಚಿಟ್ಟ ಪ್ರಲ್ಹಾದ್ ಜೋಶಿ

‘ಪೆಂಡಿಂಗ್ ಇರೋ ಬಿಲ್‌ಗಳಿಗೆ ಎನ್ಓಸಿ ಪಡೆಯೋದಕ್ಕೂ 5%, 10% ಕಮಿಷನ್ ಕೊಡಬೇಕಿದೆ ‘

- Advertisement -

Latest Posts

Don't Miss