Friday, November 22, 2024

Latest Posts

ದೇವನಹಳ್ಳಿ ವಿಮಾನ ನಿಲ್ದಾಣಕ್ಕೂ ಕೆಂಪೇಗೌಡ ವಿಮಾನ ನಿಲ್ದಾಣ ಅಂತ ಹೆಸರಿಟ್ಟವರು ನಾವು

- Advertisement -

Hassan News: ಹಾಸನ: ಹಾಸನದ ಹೆಲಿಪ್ಯಾಡ್‌ನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕೆಂಪೇಗೌಡ ಜಯಂತಿ ಬಗ್ಗೆ ಮಾತನಾಡಿದರು.

ಸರ್ಕಾರ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಆಚರಣೆ ಮಾಡ್ತಿದೆ. ಹಾಸನದಲ್ಲಿ ಈ ವರ್ಷ ರಾಜ್ಯ ಮಟ್ಟದ ಕೆಂಪೇಗೌಡ ಜಯಂತಿ ಆಚರಿಸಲಾಗುತ್ತಿದೆ. ಕೆಂಪೇಗೌಡರು ಸಾವಿರದ 510 ರಲ್ಲಿ ಜನಿಸಿದರು .ಅವರು ಯಲಹಂಕ ಸಂಸ್ಥಾನದ ಸಾಮಂತ ದೊರೆಯಾಗಿ ಬಹಳ ದೀರ್ಘಕಾಲ ಆಡಳಿತ ಮಾಡಿದರು . ವಿಜಯ ನಗರ ಅರಸರ ಸಂಸ್ಥಾನಕ್ಕೆ ಈ ಸಂಸ್ಥಾನ ಒಳಪಟ್ಟಿದ್ದು, ಇವತ್ತು ಬೆಂಗಳೂರು ಅಂತರಾಷ್ಟ್ರೀಯ ಖ್ಯಾತಿ ನಗರ ಆಗಬೇಕಿದ್ದರೆ ನಾಡ ಪ್ರಭು ಕೆಂಪೇಗೌಡ ಕಾರಣ ಎಂದು ಹೇಳಿದರು.

ಅಲ್ಲದೇ, 1537ನೇ ಇಸವಿಯಲ್ಲಿ ಬೆಂಗಳೂರು ನಿರ್ಮಾಣ ಅಡಿಗಲ್ ಹಾಕಿದ್ರು . ನಾಲ್ಕು ದ್ವಾರದಿಂದ ನಾಲ್ಕು ಹೆಬ್ಬಾಗಿಲು ಮಾಡಿದರು. ಬೆಂಗಳೂರಲ್ಲಿ ಅನೇಕ ಕೆರೆ ಮಾಡಿದರು, ಅನೇಕ ಜನರ ವ್ಯಾಪಾರಕ್ಕೆ ಅನೇಕ ಪೇಟೆ ಮಾಡಿದವರು.  ಕೆಂಪೇಗೌಡ ರು ಒಬ್ಬ ದೂರ ದೃಷ್ಟಿ ನಾಡ ಪ್ರಭು ,ಅವರ ದೂರ ದೃಷ್ಟಿಯಿಂದ ಇವತ್ತಿನ ಬೆಂಗಳೂರು ನಿರ್ಮಾಣ ಆಗಿದ್ದಿದ್ದು. ಅವರು ಚಿಕ್ಕ ವಯ್ಯಸ್ಸಿನಲ್ಲೇ ವಿಜಯ ನಗರ ನೋಡಿ ,ಅದೇ ರೀತಿ ಯಲಹಂಕ ಮಾಡಬೇಕು ಅಂತ ಕನಸು ಕಂಡವರು .

ಜಾತ್ಯಾತೀತ ರಾಜನಾಗಿದ್ದವರು , ಅಂತಹ ಮಾದರಿ ನಾಡಪ್ರಭು ಸ್ಮರಿಸಬೇಕು ಅಂತ . ನಾನು ಮುಖ್ಯ ಮಂತ್ರಿ ಆದಾಗ ಕೆಂಪೇಗೌಡ ಜಯಂತಿ ಸರ್ಕಾರದಿಂದ ಆಗಬೇಕು ಅಂತ ಆದೇಶ ಮಾಡಿದವನು.ದೇವನಹಳ್ಳಿ ವಿಮಾನ ನಿಲ್ದಾಣಕ್ಕೂ ಕೆಂಪೇಗೌಡ ವಿಮಾನ ನಿಲ್ದಾಣ ಅಂತ ಹೆಸರಿಟ್ಟವರು ನಾವು. ಬೇರೆಯವರ ಕಾಲದಲ್ಲಿ  ಇದು ಮಾಡಿದ್ದಲ್ಲ. ಕೆಂಪೇಗೌಡ ಓರ್ವ ಪ್ರಗತಿ ಪರ, ದೂರ ದೃಷ್ಟಿ, ವ್ಯಕ್ತಿ ಸ್ಮರಿಸಿಕೊಳ್ಳೋ ಕೆಲಸ ಮಾಡ್ತಿದಿವಿ. ಸಂತೋಷದಿಂದ ಹಾಸನದಲ್ಲಿ ಆಚರಣೆ ಮಾಡಲು ತೀರ್ಮಾನಿಸಿದ್ದೆವೆ. ಇದರಲ್ಲಿ ಯಾವುದೇ ಪಕ್ಷಪಾತ ಇಲ್ಲ .ಪಕ್ಷದ ಕಾರ್ಯಕ್ರಮ ಎಂದು ಸಿದ್ದರಾಮಯ್ಯ ಹೇಳಿದರು.

‘ಬಿಜೆಪಿಗೆ ಹೋದವರನ್ನ ಮರಳಿ ಕಾಂಗ್ರೆಸ್‌ಗೆ ಸೇರಿಸಿಕೊಳ್ಳುವ ಮಾತೇ ಇಲ್ಲ’

‘ಗೃಹಜ್ಯೋತಿ ಈಗ ಸುಡುಜ್ಯೋತಿ, ಗೃಹಲಕ್ಷ್ಮಿಗೆ ಗ್ರಹಣ, ನಿದಿರೆಗೆ ಜಾರಿದೆ ಯುವನಿಧಿ’

ರಸ್ತೆಯಲ್ಲಿ ದುಡ್ಡು ಸಿಕ್ಕರೆ ಅದನ್ನು ಏನು ಮಾಡಬೇಕು..?

- Advertisement -

Latest Posts

Don't Miss