Web News: ಇಂಗ್ಲೀಷ್ ಭಾಷೆಯನ್ನು ಸರಾಗವಾಗಿ ಮಾತನಾಡಲು ಇನ್ನೂ ಕೂಡ ಹಲವರಿಗೆ ತಿಳಿದಿಲ್ಲ. ಮಾತೃಭಾಷೆ, ಕನ್ನಡ ಮೀಡಿಯಂನಲ್ಲಿ ಓದಿದವರಿಗೆ ಇಂಗ್ಲೀಷ್ ಮಾತನಾಡಲು ಖಂಡಿತ ಕಷ್ಟವಾಗುತ್ತದೆ. ಆದರೆ ನೀವು ಕೂಡ ಇಂಗ್ಲೀಷ್ ಪಾರ್ಟ್ನರ್ ಕ್ಲಾಸ್ ಸೇರಿ ಅಲ್ಲಿ ತರಬೇತಿ ಪಡೆದರೆ, ಸರಾಗವಾಗಿ ನೀವೂ ಇಂಗ್ಲೀಷ್ ಮಾತನಾಡುತ್ತೀರಿ. ಈ ಬಗ್ಗೆ ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿರುವ ತರಬೇತಿ ಕೇಂದ್ರದವರು, ಯಾವ ರೀತಿಯಾಗಿ ಕನ್ನಡ ಸಾಕು ಇಂಗ್ಲೀಷ್ ಅವಶ್ಯಕತೆ ಇಲ್ಲ ಎಂದವರಿಗೆ ಇಂಗ್ಲೀಷ್ ಕಲಿಸಿದರು ಅಂತಾ ವಿವರಿಸಿದ್ದಾರೆ.
ಓರ್ವ ವ್ಯಕ್ತಿ ಇಂಗ್ಲೀಷ್ ಪಾರ್ಟ್ನರ್ ತರಬೇತಿ ಕೇಂದ್ರದ ವೀಡಿಯೋಗೆ ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ. ನಮಗೆ ಕನ್ನಡ ಸಾಕು, ಇಂಗ್ಲೀಷ್ ಅವಶ್ಯಕತೆ ಇಲ್ಲ ಎಂದು ಕಾಮೆಂಟ್ ಹಾಕಿದ್ದರಂತೆ. ಹಾಗೆ ಕಾಮೆಂಟ್ ಮಾಡಿದ್ದವರಿಗೆ, ತರಬೇತಿ ಕೇಂದ್ರದವರು ಕಾಲ್ ಮಾಡಿ, ಖಂಡಿತ ಕನ್ನಡವೇ ನಮಗೆ ಪ್ರೀತಿಯ ಭಾಷೆ. ಆದರೆ ಈಗ ಉತ್ತಮ ಕೆಲಸ ಸಿಗಬೇಕು ಅಂದ್ರೆ ಇಂಗ್ಲೀಷ್ ಅವಶ್ಯಕತೆ ಇದ್ದೇ ಇದೆ ಎಂದು, ಅವರಿಗೂ ಇಂಗ್ಲೀಷ್ ಮಾತನಾಡುವ ತರಬೇತಿ ನೀಡಿದ್ದಾರೆ.
ಇದೀಗ ಆ ರೀತಿಯಾಗಿ ಕಾಮೆಂಟ್ ಮಾಡಿದ ವ್ಯಕ್ತಿ ಚೆನ್ನಾಗಿ ಇಂಗ್ಲೀಷ್ ಮಾತನಾಡುವುದಲ್ಲದೇ, ಅವರಿಗೂ ಉತ್ತಮ ಸಂಬಳದ ಕೆಲಸ ಸಿಕ್ಕಿದೆ. ಅದೇ ರೀತಿ ಇನ್ನ“ಂದು ಉದಾಹರಣೆ ನೀಡಿರುವ ಇವರು, ಓರ್ವ ವ್ಯಕ್ತಿ ಇವರ ಸಂಸ್ಥೆಗೆ ಕರೆ ಮಾಡಿ, ನಾನು ಆತ್ಮಹತ್ಯೆಗೆ ಪ್ರಯತ್ನಿಸುತ್ತಿದ್ದೇನೆ. ನನ್ನ ಫ್ಯಾಮಿಲಿ ನನ್ನ ಮೇಲೆ ಡಿಪೆಂಡ್ ಆಗಿದೆ. ಆದರೆ, ನನಗೆ ಸರಿಯಾಗಿ ಕೆಲಸ ಸಿಗುತ್ತಿಲ್ಲ. ಹಾಗಾಗಿ ನಾನು ಜೀವನ ಅಂತ್ಯವಾಗಿಸುತ್ತಿದ್ದೇನೆ ಎಂದಿದ್ದರಂತೆ.
ಅದಕ್ಕೆ ತರಬೇತಿ ನೀಡುವವರು ಅವರಿಗೆ 2 ತಿಂಗಳ ಇಂಗ್ಲೀಷ್ ಮಾತನಾಡಿುವ ತರಬೇತಿ ನೀಡಿದ್ದು, ಅವರಿಗೂ ಎಂಎನ್ಸಿ ಕಂಪನಿಯಲ್ಲಿ ಉತ್ತಮ ಕೆಲಸ ಸಿಕ್ಕಿದೆ. ಇದೀಗ ಅವರು ತಿಂಗಳಿಗೆ 1 ಸಲವಾದ್ರೂ ಆಫೀಸಿಗೆ ಬಂದು ಧನ್ಯವಾದ ಸಲ್ಲಿಸುತ್ತಾರಂತೆ. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.

